ಪಾಕಿಸ್ತಾನದ ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಯ ಮೇಲೆ ಆರ್ಥಿಕ ಬಿಕ್ಕಟ್ಟು

11 ವಿಮಾನಗಳ ಹಾರಾಟಕ್ಕೆ ತಡೆ !

ಇಸ್ಲಾಮಾಬಾದ (ಪಾಕಿಸ್ತಾನ) – `ಪಾಕಿಸ್ತಾನ ಇಂಟರ್ನ್ಯಾಷನಲ್ ಎರಲೈನ್ಸ್’ (ಪಿಐಎ)ಎಂಬ ಪಾಕಿಸ್ತಾನದ ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಯು 3 `ಬೋಯಿಂಗ್ 777’ ಹಾಗೂ 8 ಇತರ ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಡಾಲರ್ ನ ಮೌಲ್ಯ ಹೆಚ್ಚಳ ಹಾಗೂ ಪೆಟ್ರೋಲಿನ ಬೆಲೆ ಏರಿಕೆಯಿಂದಾಗಿ ವಿಮಾನ ಸಂಸ್ಥೆಗೆ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತಿದೆ. ಸದ್ಯ ಈ ಸಂಸ್ಥೆಯ ಮೇಲೆ 742 ಕೋಟಿ ರೂಪಾಯಿಗಳ ಸಾಲವಿದೆ. ಈ ವರ್ಷ ಅದಕ್ಕೆ 112 ಕೋಟಿ ರೂಪಾಯಿಗಳ ಹಾನಿಯಾಗುವ ಸಾಧ್ಯತೆಯಿದೆ. ಸದ್ಯ ಈ ಸಂಸ್ಥೆಯ ಬಳಿ 31 ವಿಮಾನಗಳಿವೆ. ಕಳೆದ 3 ವರ್ಷಗಳಿಂದ ಈ ಸಂಸ್ಥೆಗೆ ವಿಮಾನಗಳ ಬಿಡಿ ಭಾಗಗಳನ್ನು ಖರೀದಿಸಲು ಅಡಚಣೆ ಬರುತ್ತಿದೆ. ಆದುದರಿಂದ ಅದಕ್ಕೆ 11 ವಿಮಾನಗಳನ್ನು ನಿಲ್ದಾಣದಲ್ಲಿಯೇ ನಿಲ್ಲಿಸಬೇಕಾಗುತ್ತಿದೆ.

ಸಂಪಾದಕರ ನಿಲುವು

* ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನದ ಸ್ಥಿತಿಯು ನಿಧಾನವಾಗಿ ಹೀಗೆಯೇ ಆಗಲಿದ್ದು ಮುಂದೆ ಒಂದು ದಿನ ಅದನ್ನು ದಿವಾಳಿಯಾಗಿರುವುದಾಗಿ ಘೋಷಿಸಲಾಗುವುದು. ಆ ದಿನ ಈಗ ದೂರವಿಲ್ಲ !