ಮಾನವನನ್ನು ಚಂದ್ರನ ಮೇಲೆ ಮತ್ತೆ ಕಳುಹಿಸಲಿದೆ ‘ನಾಸಾ’ !


ವಾಷಿಂಗ್ಟನ್ – ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತೊಮ್ಮೆ ಚಂದ್ರನ ಮೇಲೆ ಮನುಷ್ಯನನ್ನು ಕಳಿಸುತ್ತೇವೆ ಎಂದು ಘೋಷಿಸಿದೆ. ನಾಸಾ ಈ ಅಭಿಯಾನಕ್ಕಾಗಿ ನೀತಿ ಸಿದ್ದಗೊಳಿಸಲು ಭೂಗರ್ಭ ವಿಜ್ಞಾನಿಗಳ ತಂಡದ ಆಯ್ಕೆ ಮಾಡಿದೆ. ನಾಸಾದಿಂದ ೧೯೬೯ ರಲ್ಲಿ ಎಂದರೆ ೫೪ ವರ್ಷಗಳ ಹಿಂದೆ ಚಂದ್ರನ ಮೇಲೆ ಗಗನಯಾತ್ರಿ ಕಳುಹಿಸಿತ್ತು. ಆ ಸಮಯದಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಅವರ ಸಹಕಾರಿಗಳು ಹೋಗಿದ್ದರು. ವಿಜ್ಞಾನಿಗಳಿಗೆ ಚಂದ್ರನ ಮೇಲೆ ಜನರ ವಸಾಹತು ನಿರ್ಮಾಣ ಮಾಡುವುದಕ್ಕಾಗಿ ಸಂಶೋಧನೆ ಮಾಡುವುದಿದೆ. ಆದ್ದರಿಂದ ‘ನಾಸಾ’ದ ‘ಆರ್ಟೆಮಿಸ್ 3’ ಅಭಿಯಾನ ಚಂದ್ರನಲ್ಲಿ ಹೋಗಲು ಸಜ್ಜಾಗುತ್ತಿದೆ. ಚಂದ್ರನ ಮೇಲೆ ಕಳಿಸಲಾಗುವ ತಂಡದಲ್ಲಿ ಮಹಿಳೆಯರ ಸಮಾವೇಶ ಕೂಡ ಇರುವುದು ಮತ್ತು ಈ ತಂಡ ಚಂದ್ರನ ದಕ್ಷಿಣ ಧ್ರುವದ ಹತ್ತಿರ ಕಳುಹಿಸಲಾಗುವುದೆಂದು ನಾಸಾ ತೀರ್ಮಾನಿಸಿದೆ.