ಚಂದ್ರನ ದಕ್ಷಿಣ ದ್ರುವದ ಮೇಲೆ ಯಶಸ್ವಿಯಾಗಿ ಹೆಜ್ಜೆ ಇಟ್ಟ ಭಾರತದ ಚಂದ್ರಯಾನ-3 !

  • ಭಾರತದ ವಿಶ್ವ ದಾಖಲೆ !

  • ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಯಿತು !

ಬೆಂಗಳೂರು – ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಮಹತ್ವದ ಯೋಜನೆಯಾದ ‘ಚಂದ್ರಯಾನ-3’ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಇದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಜನರಲ್ಲಿ ಸಂತಸ ಮೂಡಿಸಿದೆ. ಈ ಯಶಸ್ಸಿನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ಈ ಹಿಂದೆ ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಿದ್ದರೂ, ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ, ಆಗಸ್ಟ್ 20 ರಂದು, ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಪ್ರಯತ್ನದಲ್ಲಿ ರಷ್ಯಾ ವಿಫಲವಾಯಿತು. ಅವರ ಬಾಹ್ಯಾಕಾಶ ನೌಕೆ ‘ಲೂನಾ-25’ ಚಂದ್ರನ ಮೇಲೆ ಅಪ್ಪಳಿಸಿತ್ತು.

ಇದೇ ನೋಡಿ Chandrayaan-3 Mission ಇದರ ಲ್ಯಾಂಡರ್‍‌ ಇಳಿಯುವಾಗ ತೆಗೆದ ಚಿತ್ರ

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಮಹತ್ವದ ಯೋಜನೆಯಾದ ‘ಚಂದ್ರಯಾನ-3’ (#Chandrayaan_3) ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಈಗ ಇಸ್ರೋ ಅದರ ಅಪಡೇಟ್‌ ಎಂದು ಲ್ಯಾಂಡರ್‍‌ ಇಳಿಯುವಾಗ ತೆಗೆದ ಚಿತ್ರವನ್ನು ಟ್ವೀಟ್‌ ಮಾಡಿದ್ದು ಅದರ ಅನೇಕ ಜನರಿಂದ ಉತ್ತಮ ಸ್ಪಂದನ ದೊರೆತಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಇಸ್ರೋ `CH-3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ಇಳಿಯುವಾಗ ತೆಗೆದ ಚಿತ್ರಗಳು ಇಲ್ಲಿವೆ’ ಎಂದು ತಿಳಿಸಿ ಚಿತ್ರವನ್ನು ಶೇರ್‍‌ ಮಾಡಿದೆ.