ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರಿಂದ ಇಮಾಂ, ಮುಅಜ್ಜಿನ ಮತ್ತು ಅರ್ಚಕರ ಗೌರವಧನ 500 ರೂಪಾಯಿಗಳಷ್ಟು ಹೆಚ್ಚಳ!

ಇಮಾಮರಿಗೆ ಈಗ 3 ಸಾವಿರ ರೂಪಾಯಿ ಹಾಗೂ ಅರ್ಚಕರಿಗೆ 1500 ರೂಪಾಯಿ !

(ಮುಅಜ್ಜಿನ ಎಂದರೆ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಜನರನ್ನು ಅಜಾನ್ ನೀಡಿ ಕರೆಯುವವನು)

ಕೋಲಕಾತಾ (ಬಂಗಾಲ) – ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೋಂದಾಯಿತ ಇಮಾಂ, ಮುಅಜ್ಜಿನ ಮತ್ತು ಅರ್ಚಕರಿಗೆ ನೀಡುತ್ತಿರುವ ಮಾಸಿಕ ಭತ್ಯೆಯಲ್ಲಿ 500 ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದಾರೆ. ಈಗ ಇಮಾಂಗಳಿಗೆ ತಲಾ 3 ಸಾವಿರ ರೂಪಾಯಿಗಳು, ಅರ್ಚಕರಿಗೆ ತಲಾ 1 ಸಾವಿರದ 500 ರೂಪಾಯಿ ಸಂಭಾವನೆ ಸಿಗಲಿದೆ. ಹಾಗೆಯೇ ಮುಅಜ್ಜಿನರಿಗೆ ಈಗ 2 ಸಾವಿರದ 500 ರೂಪಾಯಿ ಸಿಗಲಿದೆ. ಬಂಗಾಲದಲ್ಲಿ 30 ಸಾವಿರ ಇಮಾಂಗಳು ಮತ್ತು 20 ಸಾವಿರ ಮುಅಜ್ಜಿನಗಳಿದ್ದಾರೆ. ವಕ್ಫ್ ಬೋರ್ಡ್ ಮೂಲಕ ಸರಕಾರ ಅವರಿಗೆ ಭತ್ಯೆ ನೀಡುತ್ತಿರುತ್ತದೆ.

ಸಂಪಾದಕೀಯ ನಿಲುವು

ಜಾತ್ಯತೀತತೆಯ ಹೆಸರಿನಲ್ಲಿ ಮುಸ್ಲಿಮರಿಗೆ ಹಿಂದೂಗಳಿಗಿಂತ ದುಪ್ಪಟ್ಟು ಗೌರವಧನವನ್ನು ನೀಡುವ ಮೂಲಕ ಮಮತಾ ಬ್ಯಾನರ್ಜಿಯವರು ತಮ್ಮ ಸರಕಾರ ಬಹುಸಂಖ್ಯಾತ ಹಿಂದೂಗಳಿಗೆ ಎರಡನೇ ಸ್ಥಾನ ನೀಡುತ್ತಿದೆ ಎಂದು ಹೇಳುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರ ಸರಕಾರವನ್ನು ಚುನಾಯಿಸಿದ ಹಿಂದೂಗಳಿಗೆ ಇದು ಒಪ್ಪಿಗೆಯೇ ?

‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ !