ಯೋಗಿ ಮತ್ತು ಸನ್ಯಾಸಿ ನನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾಗಿದ್ದರು, ನಾನು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ನನ್ನ ರೂಡಿ ! – ಖ್ಯಾತ ನಟ ರಜನಿಕಾಂತ್

ಯೋಗಿ ಆದಿತ್ಯನಾಥ ಇವರ ಕಾಲು ಮುಟ್ಟಿ ನಮಸ್ಕಾರ ಮಾಡಿದನಂತರ ನಾಯಕ ರಜನಿಕಾಂತ ಇವರ ಸ್ಪಷ್ಟೀಕರಣ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಚಲನಚಿತ್ರ ನಾಯಕ ರಜನಿಕಾಂತ ಇವರು ಉತ್ತರ ಪ್ರದೇಶದ ಪ್ರವಾಸದಲ್ಲಿ ಇರುವಾಗ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ರಜನಿಕಾಂತ ಇವರು ಯೋಗಿ ಆದಿತ್ಯನಾಥ ಇವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ‘ಯೋಗಿ ಆದಿತ್ಯನಾಥಗಿಂತಲೂ ರಜನಿಕಾಂತ ವಯಸ್ಸಿನಲ್ಲಿ ಹಿರಿಯರು, ಅವರು ಕಾಲು ಮುಟ್ಟಿ ನಮಸ್ಕಾರ ಮಾಡಬಾರದಿತ್ತು, ಎಂದು ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತರನ್ನು ಟೀಕಿಸಲಾಗುತ್ತಿದೆ. ಕಾಲು ಮುಟ್ಟಿ ನಮಸ್ಕಾರ ಮಾಡುವುದರ ಬಗ್ಗೆ ರಜನಿಕಾಂತ ಇವರಿಗೆ ಪತ್ರಕರ್ತರು ವಿಚಾರಿಸಿದಾಗ ಅವರು, ‘ಯೋಗಿ ಇರಲಿ ಅಥವಾ ಸನ್ಯಾಸಿ, ಅವರು ನನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸವಾಗಿದೆ. ಅದನ್ನೇ ನಾನು ಮಾಡಿದ್ದೇನೆ’, ಎಂದು ಉತ್ತರಿಸಿದರು.

ಸಂಪಾದಕೀಯ ನಿಲುವು

ಹಿಂದೂ ಧರ್ಮದ ಪ್ರಕಾರ ವಯೋವೃದ್ಧ, ಜ್ಞಾನವೃದ್ಧ, ತಪೋವೃದ್ಧ ಮುಂತಾದವರ ಕಾಲು ಮುಟ್ಟಿ ನಮಸ್ಕಾರ ಮಾಡುವುದು, ಅವರನ್ನು ಗೌರವಿಸುವುದು, ಪರಂಪರೆಯಾಗಿದೆ. ಅದರ ಪಾಲನೆ ಮಾಡುವವರಿದ್ದರೇ, ಜಾತ್ಯತೀತರು ಪ್ರಗತಿ(ಅಧೋಗತಿ)ಪರರು ಮತ್ತು ಧರ್ಮದ್ರೋಹಿಗಳಿಗೆ ಹೊಟ್ಟೆಯುರಿ ಆಗುವುದು ಸಹಜವಾಗಿದೆ; ಆದರೆ ರಜನಿಕಾಂತ ಇವರು ಅಂತಹವರ ಯೋಗ್ಯತೆ ಅವರ ಉತ್ತರದಿಂದ ತೋರಿಸಿಕೊಟ್ಟರು !