ಆಧಾರ ಕಾರ್ಡ್ ಅಪ್ಡೇಟ್ ಮಾಡುವಾಗ ಜಾಗರೂಕರಾಗಿರಲು ಯು.ಐ.ಡಿ.ಎ.ಐ. ಯ ಸೂಚನೆ

ನವ ದೆಹಲಿ – ಆಧಾರ ಕಾರ್ಡ್ ಅಪ್ಡೇಟ್ ಮಾಡುವುದಕ್ಕಾಗಿ ವಾಟ್ಸಾಪ್ ಅಥವಾ ಎಸ್.ಎಂ.ಎಸ್. ಮೂಲಕ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಲು ಯು.ಐ.ಡಿ.ಎ. ಐ. ಯಿಂದ ನಾಗರೀಕರಿಗೆ ಸೂಚನೆ ನೀಡಿದೆ.

ಯು.ಐ.ಡಿ.ಎ.ಐ.ಯು, ಆಧಾರ್ ಕಾರ್ಡ್ ಇಮೇಲ್ ಅಥವಾ ವಾಟ್ಸಪ್ ನಿಂದ ಅಪ್ಡೇಟ್ ಮಾಡುವುದಕ್ಕಾಗಿ ನಿಮ್ಮ ದಾಖಲೆಗಳನ್ನು ಶೇರ್ ಮಾಡಲು ಎಂದಿಗೂ ಹೇಳುವುದಿಲ್ಲ. ಆದ್ದರಿಂದ ಇಂತಹ ಸಂದೇಶಗಳು ಏನಾದರೂ ಬಂದರೆ, ಆಗ ಆ ಸಂದೇಶಗಳನ್ನು ನಿರ್ಲಕ್ಷಿಸಿ. ಇಂತಹ ಸಂದೇಶಗಳ ಮೇಲೆ ವಿಶ್ವಾಸವಿಟ್ಟು ನೀವು ನಿಮ್ಮ ಮಹತ್ವದ ದಾಖಲೆಗಳನ್ನು ಶೇರ್ ಮಾಡಿದರೆ, ಆ ದಾಖಲೆಗಳ ದುರುಪಯೋಗ ಮಾಡಿಕೊಳ್ಳಬಹುದು. ಆದ್ದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕಾಗಿ ಅಧಿಕೃತ ವೆಬ್ ಸೈಟ್ ನ ಉಪಯೋಗ ಮಾಡಿರಿ. ನೀವು ಆಧಾರ ಕಾರ್ಡಿನಲ್ಲಿ ಆನ್ ಲೈನ್ ಮೂಲಕ ಕೆಲವು ಮಾಹಿತಿ ಅಪ್ಡೇಟ್ ಮಾಡಬಹುದು, ಹಾಗೂ ಕೆಲವು ಮಾಹಿತಿ ಅಪ್ಡೆಟ್ ಮಾಡುವುದಕ್ಕಾಗಿ ನಿಮಗೆ ಆಫ್ ಲೈನ್ ದಾಖಲೆ ಪತ್ರ ನೀಡಬೇಕಾಗುತ್ತದೆ. ನೀವು ಆನ್ಲೈನ್ ಪದ್ಧತಿಯಿಂದ ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ ಮತ್ತು ಭಾಷೆ ಬದಲಾಯಿಸಬಹುದು. ಆನ್ಲೈನ್ ದುರಸ್ತಿಗಾಗಿ, ಸುಧಾರಣೆಗಾಗಿ ನೀವು ನಿಮ್ಮ ೧೦ ಸಂಖ್ಯೆಯ ಮೊಬೈಲ್ ಸಂಖ್ಯೆಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಅವಶ್ಯಕವಾಗಿದೆ. ಹಾಗೂ ಹತ್ತಿರದ ಆಧಾರ ಕೇಂದ್ರಕ್ಕೆ ಹೋಗಿ ಕೂಡ ನೀವು ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು.