ಕೇಂದ್ರ ಸರಕಾರದ ‘ನನ್ನ ಮಣ್ಣು, ನನ್ನ ದೇಶ’ ಈ ರಾಷ್ಟ್ರವ್ಯಾಪಿ ಅಭಿಯಾನದಂತರ್ಗತ ಮಂಗಳೂರಿನಲ್ಲಿ ವೀರಯೋಧರಿಗೆ ಸನ್ಮಾನ
ಮಂಗಳೂರು – ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರು ಮತ್ತು ವೀರ ಯೋಧರ ಸ್ಮರಣಾರ್ಥ ಕೇಂದ್ರ ಸರಕಾರವು ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ರಾಷ್ಟ್ರವ್ಯಾಪಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಅಂಗ ವಾಗಿ ಆಗಸ್ಟ್ ೧೯ ರಂದು ಮಂಗಳೂರು ಮಹಾನಗರ ಪಾಲಿಕೆ ಯಲ್ಲಿ ‘ವೀರ ಯೋಧರಿಗೆ ವಂದನೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮ ಯೋಧರು ಮತ್ತು ಹುತಾತ್ಮ ರಾದ ಪೊಲೀಸ್ ಸಿಬ್ಬಂದಿಯ ಕುಟುಂಬಗಳ ೧೧ ಜನರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸನಾತನ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಅವರ ಪತಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಬಿ. ದಾಮೋದರ ಪ್ರಭು ಇವರನ್ನು ಗೌರವಿಸಲಾಯಿತು. ಈ ವೇಳೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರ ಹಸ್ತದಿಂದ ಪೂ. (ಶ್ರೀಮತಿ) ರಾಧಾ ಪ್ರಭು ಅವರಿಗೆ ಶಾಲು ಹೊದಿಸಿ, ಉಡುಗೊರೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಪೂ. (ಶ್ರೀಮತಿ) ರಾಧಾ ಪ್ರಭು ಅವರ ಚರಣ ಸ್ಪರ್ಶಿಸಿ ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೇಯರ್ ಜಯಾನಂದ ಅಂಚನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿ (ವಯಸ್ಸು ೯೬ ವರ್ಷ) ಅವರನ್ನು ಸನ್ಮಾನಿಸಲಾಯಿತು ಮತ್ತು ಅವರು ಈ ಸಂದರ್ಭದಲ್ಲಿ ನೆರೆದಿದ್ದ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.
ದಿವಂಗತ ಬಿ. ದಾಮೋದರ ಪ್ರಭು ಇವರ ಪರಿಚಯದಿವಂಗತ ಬಿ. ದಾಮೋದರ ಪ್ರಭು ಅವರು ೫.೧೦.೧೯೨೫ ರಂದು ಜನಿಸಿದರು. ೧೭ ನೇ ವಯಸ್ಸಿನಲ್ಲಿ ೧೦ ನೇ ಮುಗಿಸಿ ಇಂಟರಮೀಡಿಯೇಟ್ ಓದುವಾಗಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ ವಿರುದ್ಧ ಆರಂಭಿಸಿದ ‘ಚಲೇ ಜಾವ್’ ಚಳುವಳಿ ಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಳ್ಳಾರಿಯ ಜೈಲಿನಲ್ಲಿ ಇರಿಸಲಾಗಿತ್ತು. ಸ್ವಾತಂತ್ರ್ಯಾನಂತರ ಅಂದಿನ ಕೇಂದ್ರ ಸರಕಾರ ಬಿ. ದಾಮೋದರ ಪ್ರಭು ಅವರಿಗೆ ‘ತಾಮ್ರ ಪತ್ರ’ ನೀಡಲು ಶಿಫಾರಸ್ಸು ಮಾಡಿತ್ತು. ಆದರೆ ಅವರು ಸ್ವಾತಂತ್ರ್ಯ ಸಿಕ್ಕ ಆನಂದದಲ್ಲಿ ಆ ತಾಮ್ರಪತ್ರವನ್ನು ರಾಷ್ಟ್ರಕ್ಕೆ ಅರ್ಪಿಸಿದರು. |