ಬಕಾಮೋ (ಮಾಲಿ) – ಆಫ್ರಿಕಾ ದೇಶದ ಮಾಲಿಯಲ್ಲಿ ಆಗಸ್ಟ್ ೧೮ ರಂದು ಬಂದೂಕಧಾರಿಗಳಿಂದ ನಡೆದ ದಾಳಿಯಲ್ಲಿ ೨೧ ಜನರು ಹತರಾಗಿದ್ದಾರೆ ಹಾಗೂ ೧೧ ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು. ಯಾವುದೇ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆಯನ್ನು ಸ್ವೀಕರಿಸಿಲ್ಲ. ಆಫ್ರಿಕಾ ಖಂಡದಲ್ಲಿನ ಪಶ್ಚಿಮಭಾಗದ ದೇಶ ಈಗ ಅಲ್ ಕಾಯ್ದ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಪ್ರಭಾವಕ್ಕೊಳಗಾಗಿದೆ.
Twenty-one people were killed after unidentified assailants targeted a village in central Mali’s insurgency-hit Mopti region on Friday. https://t.co/jcO6bjaIpv
— IndiaToday (@IndiaToday) August 20, 2023