ಪಾಕಿಸ್ತಾನದ ಉತ್ತರ ವಜಿರಿಸ್ಥಾನದಲ್ಲಿ ಭಯೋತ್ಪಾದಕರಿಂದ ನಡೆದ ಬಾಂಬ್ ಸ್ಪೋಟದಲ್ಲಿ ೧೧ ಕೂಲಿ ಕಾರ್ಮಿಕರ ಸಾವು !

ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಉತ್ತರ ವಜಿರಿಸ್ಥಾನದ ಗುಲಮಿರ ಕೊಟ್ ಪ್ರದೇಶದಲ್ಲಿ ಆಗಸ್ಟ್ ೧೯ ರಂದು ಭಯೋತ್ಪಾದಕರು ಒಂದು ವಾಹನದ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ವಾಹನದಲ್ಲಿನ ೧೧ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡರು. ಈ ದಾಳಿಯ ಹೊಣೆ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ವೀಕರಿಸಿಲ್ಲ.

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಬಾಜೌರಾದಲ್ಲಿ ನಡೆಯುತ್ತಿರುವ ರಾಜಕೀಯ ಸಭೆಯ ಸಮಯದಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟ ನಡೆದಿತ್ತು. ಅದರಲ್ಲಿ ೬೩ ಜನರು ಸಾವನ್ನಪ್ಪಿದ್ದರು. ಆ ದಾಳಿಯ ಹೊಣೆ ಇಸ್ಲಾಮಿಕ್ ಸ್ಟೇಟ್ ಸ್ವೀಕರಿಸಿತ್ತು. ಪಾಕಿಸ್ತಾನಿ ಸೈನ್ಯವು ಖೈಬರ್ ಪಕ್ತುನಾಖ್ವಾ ಪ್ರದೇಶದಲ್ಲಿನ ಖೈಬರ ಜಿಲ್ಲೆಯಲ್ಲಿನ ಭಯೋತ್ಪಾದಕರ ವಿರುದ್ಧ ನಡೆದಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಇಬ್ಬರೂ ಭಯೋತ್ಪಾದಕರನ್ನು ಹತ ಗೊಳಿಸಿದರು.