ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ ಇವರ ಪತ್ನಿ ಬುಷರಾ ಬೀಬಿ ಇವರಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೃಹ ಸಚಿವರಿಗೆ ಪತ್ರ!

ನನ್ನ ಪತಿಗೆ ಜೈಲಿನಲ್ಲಿ ವಿಷ ಕೊಡುವ ಪ್ರಯತ್ನ ನಡೆಯಬಹುದು !

ಇಸ್ಲಾಮಾಬಾದ್ (ಪಾಕಿಸ್ತಾನ) – ನನ್ನ ಪತಿಗೆ ಜೈಲಿನಲ್ಲಿ ವಿಷ ಕೊಡುವ ಪ್ರಯತ್ನ ಆಗಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಷರಾ ಬೀಬಿ ಇವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಪಂಜಾಬ್ ಪ್ರಾಂತ್ಯದ ಗೃಹ ಸಚಿವರಿಗೆ ಪತ್ರ ಬರೆದು ಇಮ್ರಾನ್ ಖಾನ್ ರವರಿಗೆ ಮನೆಯಿಂದ ಊಟ ಕಳುಹಿಸಲು ಅನುಮತಿ ನೀಡಬೇಕೆಂಬ ಬೇಡಿಕೆಯನ್ನು ಮಾಡಿದ್ದಾರೆ. ಹಾಗೆಯೇ ಬಂಧಿಯಾಗಿರುವ ಇಮ್ರಾನ ಖಾನ್ ರನ್ನು ಈ ಜೈಲಿನಿಂದ ರಾವಲಪಿಂಡಿಯ ಜೈಲಿಗೆ ಸ್ಥಳಾಂತರಿಸಬೇಕೆಂದು ಕೇಳಿಕೊಂಡಿದ್ದಾರೆ. ಜೈಲಿನ ನಿಯಮಗಳನ್ನು ಉಲ್ಲೇಖಿಸಿದ ಬುಷರಾ ಇವರು ‘ಬಂಧಿಸಿದ 48 ಗಂಟೆಗಳಲ್ಲಿ ಸೌಲಭ್ಯಗಳನ್ನು ಒದಗಿಸುವುದು ಅಪೇಕ್ಷಿತವಿರುವಾಗ ಇಂದಿಗೆ 12 ದಿನಗಳು ಕಳೆದರೂ ಸೌಲಭ್ಯಗಳನ್ನು ಒದಗಿಸಿಲ್ಲ’, ಎಂದು ಆರೋಪ ಮಾಡಿದ್ದಾರೆ.

ಬುಷರಾ ಬೀಬಿ ಇವರು ಪತ್ರದಲ್ಲಿ, ನನ್ನ ಗಂಡನನ್ನು ಹತ್ಯೆ ಮಾಡಲು ಎರಡು ಸಲ ಪ್ರಯತ್ನ ನಡೆದಿದೆ, ಆದರೆ ಇದುವರೆಗೂ ಯಾರನ್ನೂ ಬಂಧಿಸುವ ಪ್ರಯತ್ನ ಆಗಿಲ್ಲ ಎಂದು ಸಹ ಆರೋಪಿಸಿದ್ದಾರೆ.