ಮಧುಬನಿ (ಬಿಹಾರ)ದಲ್ಲಿ ಅಸ್ಮತುಲ್ಲಾನು ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಸುಟ್ಟನು !

ಮಹಮ್ಮದ್ ಅಸ್ಮತುಲ್ಲಾ(ಬಲಭಾಗದಲ್ಲಿ)

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಮಧುಬನಿ (ಬಿಹಾರ) – ಮಧುಬನಿಯ ಹರಲಾಖಿ ಗ್ರಾಮದ ಸರಪಂಚ ಮಹಮ್ಮದ್ ಜುನೈದ್ ಅವರ ಮಗ ಮಹಮ್ಮದ್ ಅಸ್ಮತುಲ್ಲಾ ಅವನನ್ನು ಆಗಸ್ಟ್ 15 ರಂದು ರಾಷ್ಟ್ರಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅಸ್ಮತುಲ್ಲಾ ರಾಷ್ಟ್ರಧ್ವಜ ಸುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಬಳಿಕ ಪೊಲೀಸರಲ್ಲಿ ದೂರು ನೀಡಲಾಗಿದೆ. ಬಳಿಕ ಪೊಲೀಸರು ಅಸ್ಮತುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಆತನ ಉಮಗಾಂವ್ ಬಜಾರ್ ನಲ್ಲಿ ವೆಲ್ಡಿಂಗ್ ಶಾಪ್ ಇದೆ.

‘ಹುಡುಗ ಮನೋರೋಗಿ (ಅಂತೆ) !’ – ಅಸ್ಮತುಲ್ಲಾ ತಂದೆ ಹೇಳಿಕೆ

ಅಸ್ಮತುಲ್ಲಾನ ತಂದೆ ಮತ್ತು ಸರಪಂಚ ಮಹಮ್ಮದ್ ಜುನೈದ್, ನಮ್ಮ ಮಗ ಅಸ್ಮತುಲ್ಲಾ ಮನೋರೋಗಿ ಎಂದು ಹೇಳಿದ್ದಾರೆ. ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಹೇಳಿದ್ದಾರೆ. (ಮನೋರೋಗಿಯೊಬ್ಬ ಭಾರತದ ಮತ್ತು ಅದೂ ಸಹ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಸುಡುವ ಬುದ್ಧಿ ಹೇಗೆ ಬರುತ್ತದೆ ? ಅವನು ಪಾಕಿಸ್ತಾನದ ಧ್ವಜವನ್ನು ಏಕೆ ಸುಡುವುದಿಲ್ಲ ?, ಈ ರೀತಿ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿರುವ ಅಸ್ಮತುಲ್ಲಾನ ತಂದೆಯ ಮೇಲೂ ಕಾನೂನು ಕ್ರಮ ಜರುಗಿಸಬೇಕು ! – ಸಂಪಾದಕರು)

ಸಂಪಾದಕರ ನಿಲುವು

* ದೇಶದಲ್ಲಿರುವ ಮುಸ್ಲಿಮರ ದೇಶಪ್ರೇಮವನ್ನು ಏಕೆ ಶಂಕಿಸಲಾಗುತ್ತದೆ ? ಅದು ಇಂತಹ ಘಟನೆಗಳ ತೋರಿಸುತ್ತದೆ, ಇದು ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಗಮನಿಸುವರೇ?

* ಇಂತಹ ದೇಶದ್ರೋಹಿಗಳಿಗೆ ಈಗ ಗಲ್ಲುಶಿಕ್ಷೆ ವಿಧಿಸುವ ಆವಶ್ಯಕತೆ ನಿರ್ಮಾಣವಾಗಿದೆ. ಆಗ ಮಾತ್ರ ಇಂತಹ ಘಟನೆಗಳು ಶಾಶ್ವತವಾಗಿ ನಿಲ್ಲಬಹುದು !