ಸಿಬಿಐನ 53 ಅಧಿಕಾರಿಗಳ ತನಿಖಾ ತಂಡದಲ್ಲಿ 29 ಮಹಿಳಾ ಅಧಿಕಾರಿಗಳು !
ಇಂಫಾಳ (ಮಣೀಪುರ) – ಮಣೀಪುರದಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರದ ವಿಚಾರಣೆಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ 53 ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಲ್ಲಿ 29 ಮಹಿಳೆಯರೂ ಸೇರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳನ್ನು ವಿಚಾರಣೆಗಾಗಿ ಸೇರಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇವರೆಲ್ಲರನ್ನು ದೇಶದಲ್ಲಿನ ಸಿಬಿಐನ ಬೇರೆ ಬೇರೆ ಕಚೇರಿಗಳಿಂದ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಈ ವಿಚಾರಣೆಯಲ್ಲಿ ಮಣೀಪುರದಲ್ಲಿನ ಯಾವುದೇ ಅಧಿಕಾರಿಯನ್ನು ಸೇರಿಸಿಕೊಂಡಿಲ್ಲ. ಸಿಬಿಐ ಮೇಲೆ ಪಕ್ಷಪಾತದ ಆರೋಪ ಬರಬಾರದು; ಎಂದು ಈ ಎಚ್ಚರಿಕೆ ವಹಿಸಲಾಗಿದೆ. ಮಣೀಪುರ ಹಿಂಸಾಚಾರಲ್ಲಿನ 17 ಪ್ರಕರಣಗಳು ಸಿಬಿಐ ವಿಚಾರಣೆ ಮಾಡಲಿದೆ. ಇವುಗಳ ಪೈಕಿ 8 ಪ್ರಕರಣಗಳಲ್ಲಿ ದೂರು ದಾಖಲಿಸಲ್ಪಟ್ಟಿವೆ. ಮಣೀಪುರ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
मणिपुर: हिंसा की जांच करेंगे CBI के 53 अफसर, इन्हें देशभर के अलग-अलग ऑफिस से बुलाया गया#Manipur #CBI https://t.co/IcjCGrTuSo pic.twitter.com/Iclmrxo5Xq
— Dainik Bhaskar (@DainikBhaskar) August 17, 2023