ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣವಾಗಲು ಸಕ್ಷಮ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನಜಿ ಭಾಗವತ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನಜಿ ಭಾಗವತ ಇವರು ಸ್ವಾತಂತ್ರ್ಯ ದಿನದ ಪ್ರಯುಕ್ತ ಘೋಷಣೆ !

ಬೆಂಗಳೂರು – ಭಾರತಕ್ಕೆ ಅದರ ಕ್ಷಮತೆ ಹೆಚ್ಚಿಸುವ ಅವಶ್ಯಕತೆ ಇದೆ. ನಮ್ಮ ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣ ಆಗಬಹುದು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ. ಪೂ. ಮೋಹನಜಿ ಭಾಗವತ ಇವರು ಹೇಳಿಕೆ ನೀಡಿದರು. ಅವರು ಇಲ್ಲಿಯ ‘ಸಮರ್ಥ ಭಾರತ ಸಂಸ್ಥೆ’ಯ ವತಿಯಿಂದ ಆಯೋಜಿಸಲಾಗ ದ್ವಜಾರೋಹಣದ ಕಾರ್ಯಕ್ರಮದಲ್ಲಿ ಸಹಭಾಗಿದ್ದರು.

ಪ.ಪೂ. ಮೋಹನಜಿ ಭಾಗವತ ಮಾತು ಮುಂದುವರೆಸುತ್ತಾ,

೧. ಜಗತ್ತಿಗೆ ಜಾಗೃತಗೊಳಿಸುವ ಕ್ಷಮತೆ ಭಾರತದಲ್ಲಿದೆ; ಆದರೆ ಕೆಲವು ಶಕ್ತಿಗಳು ನಮ್ಮ ಪ್ರಗತಿ ತಡೆಯುವದಕ್ಕಾಗಿ ಕಾರ್ಯನಿರತವಾಗಿವೆ. ಅದರಿಂದ ನಾವು ಸತರ್ಕರಾಗಿರಬೇಕು.

೨. ಭಾರತ ಜಗತ್ತಿಗೆ ಜ್ಞಾನ, ಶುದ್ಧತೆ, ಸಮೃದ್ಧಿ ಮತ್ತು ಸಮರ್ಪಣೆ ಕಲಿಸಲು ಸಕ್ಷಮವಿದೆ. ನಾವು ಸೂರ್ಯನ ಉಪಾಸನೆ ಮಾಡುವುದರಿಂದ ನಮ್ಮ ದೇಶಕ್ಕೆ ‘ಭಾರತ’ ಎಂದು ಸಂಬೋಧಿಸುತ್ತಾರೆ ಎಂದು ಹೇಳಿದರು.