77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ವಿಶ್ವ ನಾಯಕರಿಂದ ಭಾರತಕ್ಕೆ ಅಭಿನಂದನೆ !

ನವ ದೆಹಲಿ – ಭಾರತವು ಸ್ವಾತಂತ್ರ್ಯದ 76 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿಶ್ವ ನಾಯಕರು ಭಾರತವನ್ನು ಅಭಿನಂದಿಸಿದ್ದಾರೆ.

1. ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇವರು ಟ್ವೀಟ್ ಮಾಡಿ, ಕಳೆದ ತಿಂಗಳು ಪ್ರಧಾನಮಂತ್ರಿ ಮೋದಿ ಮತ್ತು ನಾನು 2047 ರ ವೇಳೆಗೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ಇಟ್ಟುಕೊಂಡಿದ್ದೆವು ಎಂದು ಟ್ವೀಟ್ ಮಾಡಿದ್ದಾರೆ. ಫ್ರಾನ್ಸ್ ಯಾವಾಗಲೂ ಭಾರತದ ವಿಶ್ವಾಸಾರ್ಹ ಸ್ನೇಹಿತ ಮತ್ತು ಸಹಯೋಗಿಯಾಗಿ ಉಳಿದಿದೆ.

2. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು, ಈ ವಿಶೇಷ ದಿನದಂದು ಭಾರತಕ್ಕೆ ವಿಶೇಷ ಶುಭಾಶಯಗಳು ಎಂದು ಹೇಳಿದ್ದಾರೆ ! ಭಾರತದೊಂದಿಗೆ ಇರುವ ನಮ್ಮ ಯುದ್ಧ ನೀತಿಯ ಕಾರ್ಯತಂತ್ರದ ಸಹಕಾರವು ನಮಗೆ ಬಹಳ ಪ್ರಾಮುಖ್ಯವಾಗಿದೆ ಎಂದು ಹೇಳಿದ್ದಾರೆ.

3. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕನ್ ಇವರು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಉತ್ತಮವಾಗಿದೆ ಎಂದು ಹೇಳಿದ್ದಾರೆ.

4. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಟ್ವೀಟ್ ಮಾಡಿ, ನಾವು ಒಂದು ಉತ್ತಮ ಭವಿಷ್ಯದ ಕಡೆಗೆ ಒಂದುಗೂಡಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

5. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಮಂತ್ರಿ ಮೋದಿ ಮತ್ತು ಭಾರತೀಯರನ್ನು ಅಭಿನಂದಿಸುತ್ತಾ, ಭಾರತ ಮತ್ತು ಇಸ್ರೇಲ್ ಮತ್ತಷ್ಟು ಸಾಮಿಪ್ಯವನ್ನು ಹೊಂದಬೇಕು ಮತ್ತು ಒಟ್ಟಿಗೆ ಸಮೃದ್ಧವಾಗಬೇಕು ಎಂದು ಹೇಳಿದರು !