ಅಕ್ಷಯ ಕುಮಾರರ ಕೆನ್ನೆಗೆ ಬಾರಿಸಿದವರಿಗೆ ೧೦ ಲಕ್ಷ ರೂಪಾಯಿ ಬಹುಮಾನ ನೀಡುತ್ತೇವೆ ! – ಹಿಂದೂ ಸಂಘಟನೆ

ಆಗ್ರಾ (ಉತ್ತರ ಪ್ರದೇಶ) – ‘ಓ ಮೈ ಗಾಡ್’ ಈ ಚಲನ ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಚಲನ ಚಿತ್ರದಲ್ಲಿ ಭಗವಾನ ಶಿವನ ಅವಹೇಳನಕಾರಿ ದೃಶ್ಯಗಳಿಂದಾಗಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ‘ರಾಷ್ಟ್ರೀಯ ಹಿಂದೂ ಪರಿಷತ್’ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ‘ಯಾರು ಈ ಚಿತ್ರದಲ್ಲಿನ ನಟ ಅಕ್ಷಯ ಕುಮಾರ ಅವರ ಕೆನ್ನೆಗೆ ಬಾರಿಸುವರೋ ಅವರಿಗೆ ೧೦ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು’ ಎಂದು ಸಂಘಟನೆ ಕರೆ ನೀಡಿದೆ.

೧. ಈ ಚಲನ ಚಿತ್ರದಲ್ಲಿ ಅಕ್ಷಯ ಕುಮಾರ ಅವರನ್ನು ‘ಭಗವಾನ ಮಹಾದೇವನ ದೂತ’ ಎಂದು ತೋರಿಸಲಾಗಿದೆ. ಅವನು ಬೂಟ್ ಹಾಕಿಕೊಂಡು ನಿಲ್ಲುತ್ತಾನೆ, ಆಹಾರವನ್ನು ಖರೀದಿಸುತ್ತಾನೆ, ಕೆರೆಯ ಕೊಳಕು ನೀರಿನಲ್ಲಿ ಸ್ನಾನ ಮಾಡುತ್ತಾನೆ. ಇದರಿಂದ ಹಿಂದೂ ದೇವತೆಗಳ ಚಿತ್ರಣವನ್ನು ಹಾಳು ಮಾಡಲಾಗಿದೆ ಎಂದು ಈ ಸಂಘಟನೆ ಆರೋಪಿಸಿದೆ.

೨. ರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯಕರ್ತರು ಅಕ್ಷಯ ಕುಮಾರ ಅವರ ಪ್ರತಿಕೃತಿ ದಹಿಸಿದರು. ಈ ಚಲನ ಚಿತ್ರ ಪ್ರದರ್ಶಿಸುವ ಥಿಯೇಟರ್‌ಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆ ಎಚ್ಚರಿಕೆ ನೀಡಿದೆ.