ಚಂದ್ರನ ಅತಿ ಹತ್ತಿರ ತಲುಪಿದ ಭಾರತದ ಐತಿಹಾಸಿಕ ಚಂದ್ರಯಾನ-3 !

ಬೆಂಗಳೂರು – ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ‘ಚಂದ್ರಯಾನ-3’ ಈಗ ಚಂದ್ರನ ಅತಿ ಹತ್ತಿರ ತಲುಪಿದೆ. ಭಾರತೀಯ ‘ಇಸ್ರೋ’ ಆಗಸ್ಟ್ 14 ರ ಬೆಳಗ್ಗೆ 11:30 ರಿಂದ 12:30 ರ ಸಮಯದಲ್ಲಿ ‘ಚಂದ್ರಯಾನ-3’ ಚಂದ್ರನೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ. ಹಾಗಾಗಿ ಈಗ ಚಂದ್ರಯಾನ-3 ಚಂದ್ರನಿಗೆ ಕನಿಷ್ಠ 174 ಕಿ.ಮಿ. ದೂರದಿಂದ ಗರಿಷ್ಠ 1437 ಕಿ.ಮಿ. ಅಂತರದಲ್ಲಿ ಗೋಲಾಕಾರವಾಗಿ ಪ್ರದಕ್ಷಿಣೆ ಹಾಕುತ್ತಿದೆ. ಈ ಮೊದಲು ಆಗಸ್ಟ್ 6 ಮತ್ತು 9 ರಂದು ಚಂದ್ರಯಾನ-3 ರ ಅಂತರವನ್ನು ಚಂದ್ರನಿಂದ ಕಡಿಮೆ ಮಾಡಲಾಗಿತ್ತು .ಆಗಸ್ಟ್ 23 ರಂದು ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಇಳಿಸಲು ಪ್ರಯತ್ನ ಮಾಡಲಾಗುವುದು. ( ಸಾಫ್ಟ್ ಲ್ಯಾಂಡಿಂಗ್) ಆಗಸ್ಟ್ 16 ರಂದು ಚಂದ್ರಯಾನ-3 ಅನ್ನು ಚಂದ್ರನಿಂದ 100 ಕಿ.ಮಿ. ಅಂತರದಲ್ಲಿ ಇರುವಂತೆ ಮಾಡಲಾಗಿದ್ದು ಆಗಸ್ಟ್ 17 ರಂದು ಚಂದ್ರಯಾನ-3 ರ ಲ್ಯಾಂಡರ್ ಅನ್ನು ‘ಪ್ರೊಫೆಷನಲ್ ಮಾಡ್ಯೂಲ’ ನಿಂದ ಬೇರ್ಪಡಿಸಲಾಗುವುದು.