ನೂಹದಲ್ಲಿ ಪೋಲಿಸ್ ಮತ್ತು ಗೋಕಳ್ಳರ ನಡುವಿನ ಚಕಮಕಿಯಲ್ಲಿ ಓರ್ವ ಗೋಕಳ್ಳನಿಗೆ ಗಾಯ ೨೧ ಗೋವುಗಳ ಬಿಡುಗಡೆ

ನೂಹ (ಹರಿಯಾಣ) – ಇಲ್ಲಿಯ ಗಲಭೆಯ ಆರೋಪ ಇರುವ ಕಾಂಗ್ರೆಸ್ಸಿನ ಶಾಸಕ ಮಮ್ಮನ ಖಾನ ಇವರ ಮತದಾರ ಕ್ಷೇತ್ರವಾಗಿರುವ ಫಿರೋಜಪುರ ಝೀರಕ ಇಲ್ಲಿ ಆಗಸ್ಟ್ ೧೨ ರಂದು ಪೊಲೀಸ ಮತ್ತು ಗೋಕಳ್ಳಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು. ಈ ಚಕಮಕಿಯಲ್ಲಿ ತೌಫೀಕ್ ಎಂಬ ಗೋಕಳ್ಳಸಾಗಣಿಕೆದಾರನಿಗೆ ಗುಂಡು ತಾಗಿರುವುದರಿಂದ ಗಂಭೀರವಾಗಿ ಗಾಯಗೊಂಡನು ಹಾಗೂ ಇತರ ಗೋಕಳ್ಳ ಸಾಗಾಣಿಕೆದಾರರು ಘಟನಾ ಸ್ಥಳದಿಂದ ಪಲಾಯನ ಮಾಡಿದರು. ಪೊಲೀಸರು ೨೧ ಗೋವುಗಳನ್ನು ಬಿಡುಗಡೆ ಮಾಡಿದರು. ಗೋರಕ್ಷಕ ದಳದ ಸದಸ್ಯರು ಪೊಲೀಸರಿಗೆ ಗೋಕಳ್ಳಸಾಗಾಣಿಕೆಯ ಬಗ್ಗೆ ಮಾಹಿತಿ ನೀಡಿದ್ದರು. (ಯಾವಾಗಲೂ ಗೋಪ್ರೇಮಿಗಳೇ ಇದರ ಮಾಹಿತಿ ಪೊಲೀಸರಿಗೆ ನೀಡುತ್ತಾರೆ. ಇಂತಹ ಮಾಹಿತಿ ಪೊಲೀಸರಿಗೆ ಏಕೆ ದೊರೆಯುವುದಿಲ್ಲ ? – ಸಂಪಾದಕರು) ಗೋರಕ್ಷಕ ದಳದ ಸದಸ್ಯರು ಗೋಕಳ್ಳಸಾಗಾಣಿಕೆದಾರರ ವಾಹನವನ್ನು ಬೆಂಬೆತ್ತಿದರು. ದೆಹಲಿ ವಡೋದರ ಎಕ್ಸ್ಪ್ರೆಸ್ ಮಾರ್ಗದಲ್ಲಿ ವಾಹನ ಗ್ರಾಮದ ಬಳಿ ಬರುತ್ತಲೇ ಪೊಲೀಸರು ಗೋಕಳ್ಳಸಾಗಾಣಿಕೆದಾರರಿಗೆ ನಿಲ್ಲಿಸುವ ಸನ್ನೆ ಮಾಡಿದರು; ಆದರೆ ಅವರು ವಾಹನ ನಿಲ್ಲಿಸದೆ, ಪೊಲೀಸರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ಪ್ರತ್ಯುತ್ತರ ನೀಡುಲು ಗುಂಡು ಹಾರಿಸಿ ಕಳ್ಳಸಾಗಾಣಿಕೆದಾರರನ್ನು ತಡೆಯುವ ಪ್ರಯತ್ನ ಮಾಡಿದರು. ಗೋಕಳ್ಳಸಾಗಾಣಿಕೆದಾರರು ತಮ್ಮನ್ನು ಮುತ್ತಿಗೆ ಹಾಕಿರುವುದನ್ನು ನೋಡಿ ಇಳಿದು ಪಲಾಯನ ಮಾಡಿದರು.