ಮಹಾಪಂಚಾಯತ್ ನ ಘೋಷಣೆ
ನುಹ್ (ಹರಿಯಾಣ) – ನಗರದಲ್ಲಿ ಮತ್ತೊಮ್ಮೆ ಶೋಭಾಯಾತ್ರೆ ನಡೆಸುವ ಸಿದ್ಧತೆ ನಡೆಯುತ್ತಿದ್ದೂ ಹಲವು ಜಿಲ್ಲೆಗಳಲ್ಲಿ ಹಿಂದೂಗಳಿಗೆ ಆಮಂತ್ರಣ ಕಳುಹಿಸಲಾಗಿದೆ. ಶೋಭಾಯಾತ್ರೆಯ ಸಿದ್ಧತೆಯ ದೃಷ್ಟಿಯಿಂದ ಆಗಸ್ಟ್ ೧೩ ರಂದು ನುಹ್ ನಲ್ಲಿ ಪಂಚಾಯತ್ ಸಭೆಯನ್ನು ಆಯೋಜಿಸಲಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಆಗಸ್ಟ್ ೨೮ ರಂದು ಶೋಭಾಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಆಗಸ್ಟ್ ೧೩ ರಂದು ನಡೆಯಲಿರುವ ಹಿಂದೂ ಸಂಘಟನೆಗಳ ಮಹಾಪಂಚಾತ್ ನಲ್ಲಿ ಈ ಕುರಿತು ಅಂತಿಮ ತಿರ್ಮಾನ ಹೊರಬೀಳಲಿದೆ. ಆಗಸ್ಟ್ ೧೩ ರಂದು ಈ ಮಹಾಪಂಚಾಯಿತಿಗೆ ಆಡಳಿತ ಅನುಮತಿ ನೀಡಿರಲಿಲ್ಲ ಎಂದು ವರದಿಯಾಗಿದೆ.
हिंसा के बाद नूंह में फिर यात्रा निकालने की जिद्द, 13 अगस्त की पंचायत को परमीशन नहीं#Haryanaviolence @Mmohit_Malhotrahttps://t.co/uHRATSZdmc
— TV9 Bharatvarsh (@TV9Bharatvarsh) August 12, 2023
೩೧ ಜುಲೈ ೨೦೨೩ ರಂದು ಮುಸ್ಲಿಂ ಬಹುಸಂಖ್ಯಾತ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ತಿನ ಬ್ರಜಮಂಡಲ ಶೋಭಾಯಾತ್ರೆಯ ಮೇಲೆ ಮುಸ್ಲಿಂ ಗುಂಪು ದಾಳಿ ಮಾಡಿದ ನಂತರ ಉಂಟಾದ ಭುಗಿಲೆದ್ದ ಹಿಂಸಾಚಾರದಲ್ಲಿ ೬ ಜನರು ಸಾವನ್ನಪ್ಪಿದರು ಮತ್ತು ೮೮ ಜನರು ಗಾಯಗೊಂಡಿದ್ದರು.