ಕುಕಿ ಸಮುದಾಯದ ಗುಂಪಿನಿಂದ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಮಣಿಪುರದ ಮಹಿಳೆಯಿಂದ ದೂರು

ಇಂಫಾಲ್ – ಮಣಿಪುರದ ಬಿಷ್ಣುಪುರ ಜಿಲ್ಲೆಯ ಚುರಾಚಂದಪುರದ ಮಹಿಳೆಯೊಬ್ಬರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆಯೆಂದು ದೂರು ದಾಖಲಿಸಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದಿದ್ದು, ಆ ಕಾಲಾವಧಿಯಲ್ಲಿ ಕುಕಿ ಸಮುದಾಯದ ಗುಂಪೊಂದು ಚುರಾಚಂದಪುರದಲ್ಲಿ ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರು. ಆ ಸಮಯದಲ್ಲಿ ಹೆದರಿದ ಮಹಿಳೆಯು ತನ್ನ ಇಬ್ಬರು ಮಕ್ಕಳು, ಅತ್ತಿಗೆ ಮತ್ತು ಸೊಸೆಯೊಂದಿಗೆ ಮನೆಯಿಂದ ಓಡಿ ಹೋಗುತ್ತಿದಳು; ಆದರೆ ಆಕೆ ಓಡುವಾಗ ಬಿದ್ದಳು. ಮಕ್ಕಳೊಂದಿಗೆ ಮುಂದೆ ಹೋಗುವಂತೆ ಅತ್ತಿಗೆಗೆ ಹೇಳಿದಳು. ಅವರನ್ನು ಹಿಂಬಾಲಿಸುತ್ತಿದ್ದ ಕುಕಿ ಸಮುದಾಯದ 5-6 ಜನರ ಗುಂಪು ಆಕೆಯನ್ನು ಹಿಡಿದು ಸಾಮೂಹಿಕ ಅತ್ಯಾಚಾರ ಮಾಡಿತು. ನಂತರ ಕುಕಿ ಸಮುದಾಯದ ಇತರ ಜನರೂ ಅವರೊಂದಿಗೆ ಸೇರಿಕೊಂಡರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಜ್ಞೆ ಬಂದಾಗ ಸಂತ್ರಸ್ತೆ ಮೈತೇಯಿ ಸಮುದಾಯದ ಒಂದು ಮನೆಯಲ್ಲಿದ್ದಳು.

ದೂರು ದಾಖಲಿಸಲು ಎರಡು ತಿಂಗಳು ಏಕೆ ತೆಗೆದುಕೊಂಡಳು ?

‘ಪೊಲೀಸರಲ್ಲಿ ದೂರು ದಾಖಲಿಸಲು 2 ತಿಂಗಳು ಏಕೆ ಬೇಕಾಯಿತು ?’, ಎಂಬುದನ್ನು ಸ್ಪಷ್ಟಪಡಿಸುವಾಗ ಮಹಿಳೆಯು, “ಬಲಾತ್ಕಾರ ಆಗಿದೆಯೆಂದು ಬಹಿರಂಗವಾಗಿ ಹೇಳುವುದೆಂದರೆ, ಸಮಾಜದಲ್ಲಿ ‘ಕಳಂಕ’ ಎಂದು ನೋಡಲಾಗುತ್ತದೆ. ‘ಸಮಾಜ ನನ್ನನ್ನು ಬಹಿಷ್ಕರಿಸುತ್ತದೆ’ ಈ ಭಯದಿಂದ ನನ್ನ ಮತ್ತು ನನ್ನ ಕುಟುಂಬದ ಮರ್ಯಾದೆಯನ್ನು ಉಳಿಸಲು ನಾನು ಮೊದಲು ಏನನ್ನೂ ಹೇಳಲಿಲ್ಲ.’ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಮಣಿಪುರದಲ್ಲಿ ಕ್ರೈಸ್ತ ಕುಕಿ ಸಮುದಾಯದ ಮಹಿಳೆಯ ಮೇಲಿನ ಅತ್ಯಾಚಾರದ ಬಗ್ಗೆ ಕೋಲಾಹಲವೆಬ್ಬಿಸುವ ಭಾರತ ಸೇರಿದಂತೆ ಪ್ರಪಂಚದಾದ್ಯಂತವಿರುವ ಜಾತ್ಯತೀತವಾದಿಗಳು ಮತ್ತು ಕ್ರೈಸ್ತರು ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ?