‘ಪ್ರಧಾನಮಂತ್ರಿ ಮೋದಿಯವರ ಸರಕಾರಕ್ಕೆ ಮುಸಲ್ಮಾನರ ಬಗ್ಗೆ ಯಾವುದೇ ಕಾಳಜಿಯಿಲ್ಲ !’ (ಅಂತೆ) – ಅಸದುದ್ದೀನ ಓವೈಸಿ

ಲೋಕಸಭೆಯಲ್ಲಿ ವಿಷಕಾರಿದ ಅಸದುದ್ದೀನ ಓವೈಸಿ !

ನವ ದೆಹಲಿ – ಪ್ರಧಾನಿ ಮೋದಿಯವರ ಸರಕಾರಕ್ಕೆ ಮುಸಲ್ಮಾನರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಇಲ್ಲದಿದ್ದರೆ ಬಿಲಕಿಸ ಬಾನೋಳ ಹತ್ಯೆ ಮಾಡಿದವರನ್ನು ನಿರಪರಾಧಿ ಎಂದು ಬಿಡುತ್ತಿರಲಿಲ್ಲ. ಭಾರತದಲ್ಲಿ ಎಲ್ಲ ಜಾತಿ-ಧರ್ಮದ ಜನರು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ಭಾಜಪವು ಭಾರತದ ಈ ವೈಶಿಷ್ಟ್ಯವನ್ನು ಅಳಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಕೇವಲ ಭಾಜಪವನ್ನು ವಿರೋಧಿಸುವ ನಾಟಕ ಮಾಡುತ್ತದೆ. ಒಂದುವೇಳೆ ಕಾಂಗ್ರೆಸ್ಸಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಅದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಪಿಎ ಕಾನೂನಿಗೆ) ಬೆಂಬಲಿಸುತ್ತಿರಲಿಲ್ಲ ಎಂದು ಎಮ್.ಐ.ಎಮ್. ಪಕ್ಷದ ಅಧ್ಯಕ್ಷ ಅಸದುದ್ದೀನ ಓವೈಸಿಯವರು ಲೋಕಸಭೆಯಲ್ಲಿ ಆಗಸ್ಟ್ ೧೦ ರಂದು ಸರಕಾರದ ವಿರುದ್ಧ ಅವಿಶ್ವಾಸದ ಠರಾವಿನ ಚರ್ಚೆಯಲ್ಲಿ ವಿಷಕಾರಿದ್ದಾರೆ. ‘ಯುಪಿಎ’ಯು ದೇಶದ ಐಕ್ಯತೆ ಹಾಗೂ ಅಖಂಡತೆಯ ಮೇಲೆ ಆಘಾತ ಮಾಡುವ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಾಗಿದ್ದು ಇದರ ಅನ್ವಯ ಕೇಂದ್ರ ಸರಕಾರಕ್ಕೆ ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಧಿಕಾರ ನೀಡಲಾಗಿದೆ.

ಓವೈಸಿಯವರು ಮುಂದುವರಿದು, ಪ್ರಧಾನಿ ಮೋದಿಯವರು ದೇಶಕ್ಕಿಂತಲೂ ಹಿಂದುತ್ವ ದೊಡ್ಡದೇ ? ಎಂಬುದರ ಮೇಲೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. (ಬೇರೆಯವರಿಂದ ಅಪೇಕ್ಷಿಸುವ ಮೊದಲು ಓವೈಸಿ ಮಹಾಶಯರು ತಮಗೆ ಭಾರತಕ್ಕಿಂತಲೂ ಇಸ್ಲಾಂ ದೊಡ್ಡದೇ ? ಎಂಬುದನ್ನು ಸ್ಪಷ್ಟಪಡಿಸಬೇಕು – ಸಂಪಾದಕರು) ಒಂದು ಕಡೆಗೆ ಪ್ರಧಾನ ಮಂತ್ರಿಗಳು ತಾನು ಈ ದೇಶದ ಚೌಕಿದಾರ (ರಕ್ಷಕ) ಆಗಿದ್ದೇನೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಕಾಂಗ್ರೆಸ್ಸಿನ ರಾಹುಲ ಗಾಂಧಿಯವರು `ಭಾರತ ಜೋಡೂ ಯಾತ್ರೆ’ಯನ್ನು ಆರಂಭಿಸಿ `ದ್ವೇಷದ ಮಾಟುಕಟ್ಟೆಯಲ್ಲಿ ಪ್ರೇಮದ ಅಂಗಡಿ’ ಎಂದು ಘೋಷಿಸುತ್ತಾರೆ; ಆದರೆ ಮುಸಲ್ಮಾನರ ಮೇಲೆ ಅತ್ಯಾಚಾರಗಳಾದಾಗ ಚೌಕಿದಾರ ಹಾಗೂ ಅಂಗಡಿಕಾರನ ಮಾತುಗಳು ಹೊರಡುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಓವೈಸಿಯವರ ಈ ಹೇಳಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮುಸಲ್ಮಾನರ ಮನಸ್ಸನ್ನು ಕಲುಷಿತಗೊಳಿಸುವ ಹಾಗೂ ಅವರಿಗೆ ಪ್ರಚೋದನೆ ಮಾಡಿದಂತಿದೆ ! ಆದುದರಿಂದ ಓವೈಸಿಯವರ ಮೇಲೆ ಕಠಿಣ ಕ್ರಮಕೂಗೊಳ್ಳಬೇಕು !

ಪ್ರಧಾನಮಂತ್ರಿ ಮೋದಿಯವರು ೨೦೧೯ ರಲ್ಲಿ ಚುನಾವಣೆಯನ್ನು ಗೆದ್ದು ಬರುತ್ತಲೇ `ಸಬಕಾ ಸಾಥ ಸಬಕಾ ವಿಕಾಸ ಸಬಕಾ ವಿಶ್ವಾಸ’ ಎಂಬ ಘೋಷಣೆಯನ್ನು ನೀಡಿ ಮುಸಲ್ಮಾನರಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡರು. ಹೀಗಿದ್ದರೂ ಓವೈಸಿಯಾಗಲಿ ಅವರ ಮುಸಲ್ಮಾನ ಸಮಾಜವಾಗಲಿ ಭಾಜಪಕ್ಕೆ ಎಂದಿಗೂ ಮತ ನೀಡುವುದಿಲ್ಲ ಎಂಬ ಸತ್ಯವನ್ನು ಸ್ವೀಕರಿಸುವುದು ಅವಶ್ಯಕವಾಗಿದೆ !