ನೂಹ ಹಿಂಸಚಾರಕ್ಕೆ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿನ ೧೨ ಗುಂಪುಗಳು ಹೊಣೆ ! – ಹರಿಯಾಣ ಪೊಲೀಸ್

  • ಹಿಂಸಾಚಾರದ ಆರೋಪಿ ಮುನಸೈದ ಮತ್ತು ಸೈಕೂಲ್ ನ ಬಂಧನ !

  • ಸೈಫುಲ್ಲಾ ಮತ್ತು ಮೆಹಬೂಬ್ ಈ ರೋಹಿಂಗ್ಯಾ ಮುಸಲ್ಮಾನರನ್ನೂ ಬಂಧಿಸಲಾಯಿತು !

ನೂಹ (ಹರಿಯಾಣ) – ಜುಲೈ ೩೧ ರಂದು ಇಲ್ಲಿ ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡಿದ ನಂತರ ಅದರ ತನಿಖೆ ನಡೆಯುತ್ತಿದ್ದು ಪ್ರತಿದಿನ ಹೊಸ ಹೊಸ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ಅಂತರ್ಗತ ಹರಿಯಾಣ ಪೊಲೀಸರಿಗೆ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಮತ್ತು ಟೆಲಿಗ್ರಾಂ ಈ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರತ ಇರುವ ಮತ್ತು ಪಾಕಿಸ್ತಾನದಿಂದ ಸಂಚಾಲಿತ ೧೨ ಗುಂಪುಗಳ ಮಾಹಿತಿ ದೊರೆತಿದೆ. ಈ ಗುಂಪಿನಲ್ಲಿ ಹರಿಯಾಣ ಮತ್ತು ರಾಜಸ್ಥಾನದಲ್ಲಿನ ಮೇವಾತ ಪ್ರಾಂತ್ಯದಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಈ ಜನರನ್ನು ಪ್ರಚೋದಿಸುವ ದೊಡ್ಡ ಕಾರ್ಯ ಈ ಮಾಧ್ಯಮದಿಂದ ಪ್ರತಿದಿನ ಮಾಡಲಾಗುತ್ತಿದೆ. (ಇದರಿಂದ ಈ ಹಿಂಸಾಚಾರ ಪೂರ್ವಯೋಜಿತ ಇರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಗುಂಪಿನಲ್ಲಿರುವ ಭಾರತದಲ್ಲಿನ ಎಲ್ಲಾ ಜನರನ್ನು ವಿಚಾರಣೆಗೆ ಒಳಪಡಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

೧. ಈ ಹಿಂಸಾಚಾರದ ಆರೋಪಿ ಮುನಸೈದ್ ಮತ್ತು ಸೈಕುಲ್ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಇಲ್ಲಿಯ ಅರಾವಲಿ ಗುಡ್ಡುಗಾಡದಲ್ಲಿ ಅಡಗಿರುವ ಮಾಹಿತಿ ಪೊಲೀಸರಿಗೆ ದೊರೆತನಂತರ ಪೊಲೀಸರು ಅವರಿಗೆ ಮುತ್ತಿಗೆ ಹಾಕಿದರು. ಇಬ್ಬರೂ ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಆ ಸಮಯದಲ್ಲಿ ನಡೆದ ಚಕಮಕಿಯಲ್ಲಿ ಪೊಲೀಸರ ಒಂದು ಗುಂಡು ಸೈಕುಲನ ಕಾಲಿಗೆ ತಾಗಿತು. ಆ ಸಮಯದಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾದರು.

೨. ಹಿಂಸಾಚಾರದ ಪ್ರಕರಣದಲ್ಲಿ ಪೊಲೀಸರು ಸೈಫುಲ್ಲಾ ಮತ್ತು ಮೆಹಬೂಬ್ ಈ ರೋಹಿಂಗ್ಯ ಮುಸಲ್ಮಾನರನ್ನು ಕೂಡ ಬಂಧಿಸಿದ್ದಾರೆ. ಇಬ್ಬರೂ ಇತರ ಕೆಲವ ರೋಹಿಂಗ್ಯಾಗಳ ಜೊತೆ ಮ್ಯಾನ್ಮಾರ ಗಡಿಯಿಂದ ಅಸ್ಸಾಂನಲ್ಲಿ ನುಸಳಿರುವುದು ಒಪ್ಪಿಕೊಂಡಿದ್ದಾರೆ. ಹಾಗೂ ಆಧಾರ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತಯಾರಿಸಿಕೊಂಡಿರುವುದು ಕೂಡ ಅವರು ಈ ಸಮಯದಲ್ಲಿ ಹೇಳಿದರು. ನೂಹದಲ್ಲಿ ಸುಮಾರು ಎರಡು ಸಾವಿರ ರೋಹಿಂಗ್ಯಾ ಮುಸಲ್ಮಾನರು ವಾಸಿಸುತ್ತಿದ್ದು ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯವರೆಗೆ ೨೫ ರೋಹಿಂಗ್ಯಾಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ೨೦ ದೂರುಗಳು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಕೇವಲ ಜಿಹಾದಿ ಭಯೋತ್ಪಾದಕ ಚಟುವಟಿಕೆ ಅಲ್ಲದೆ, ಈಗ ಮತಾಂಧ ಮುಸಲ್ಮಾನರಿಂದ ನಡೆದಿರುವ ಹಿಂಸಾಚಾರ ಕೂಡ ಪಾಕಿಸ್ತಾನ ಪೋಷಿತವಾಗಿದೆ, ಇದು ಮತ್ತೊಮ್ಮೆ ಬೆಳಕಿಗೆ ಬಂದಿದೆ !

ಭಾರತದ ಕಂಠಪ್ರಾಯವಾಗಿರುವ ಈ ಜಿಹಾದಿ ದೇಶದ ಕ್ರಿಕೆಟ ತಂಡ ಭಾರತದಲ್ಲಿ ನಡೆಯುವ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತದ ತಂಡದೊಂದಿಗೆ ಆಡಲಿದೆ. ಭಾರತೀಯರು ಇದಕ್ಕಾಗಿ ಅನುಮತಿ ನೀಡುವುದೇ ನಾಚಿಗೇಡಾಗಿದೆ. ರಾಷ್ಟ್ರ ಪ್ರೇಮಿಗಳು ಇದರ ವಿರುದ್ಧ ಸಂಘಟಿತರಾಗಿ ಧ್ವನಿಯುತ್ತಬೇಕು !