ಮಹಾಕಲ ದೇವಸ್ಥಾನದ ಅರ್ಚಕರಿಂದ ನೋಟಿಸ
ಉಜ್ಜೈನಿ (ಮಧ್ಯಪ್ರದೇಶ) – ಅಕ್ಷಯ ಕುಮಾರ, ಯಾಮಿ ಗೌತಮ ಮತ್ತು ಪಂಕಜ ತ್ರಿಪಾಠಿ ಇವರ ಮುಖ್ಯ ಪಾತ್ರದ ‘ಓ ಮೈ ಗಾಡ್ 2’ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದೆ. ಮಹಾಕಾಲ ದೇವಸ್ಥಾನದ ಅರ್ಚಕರ ಪರವಾಗಿ ವಕೀಲ ಅಭಿಲಾಷ ವ್ಯಾಸ ಅವರು ಚಲನ ಚಿತ್ರದ ನಿರ್ಮಾಪಕ ವಿಪುಲ ಶಾಹ, ನಿರ್ದೇಶಕ ಅಮಿತ ರಾಯ ಮತ್ತು ನಟ ಅಕ್ಷಯ ಕುಮಾರ ಅವರಿಗೆ ಲೀಗಲ್ ನೋಟಿಸ ಕಳುಹಿಸಿದ್ದಾರೆ. ಚಲನಚಿತ್ರದ ಸಣ್ಣ ‘ಟ್ರೇಲರ್’ನಲ್ಲಿ ಭಗವಾನ ಶಿವನು ಆಹಾರವನ್ನು ಖರೀದಿಸುತ್ತಿರುವ ದೃಷ್ಯ ತೋರಿಸಲಾಗಿದೆ ಎಂದು ಅರ್ಚಕರು ಹೇಳುತ್ತಿದ್ದಾರೆ. ಈ ಚಲನಚಿತ್ರವು ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಅದಲ್ಲದೆ ಚಲನಚಿತ್ರ ನಿರೀಕ್ಷಣಾ ಮಂಡಳಿ ಅಧ್ಯಕ್ಷ ಪ್ರಸೂನ ಜೋಶಿ ಅವರಿಗೂ ಮಹಾಕಾಲ ಅರ್ಚಕರು ನೋಟಿಸ ಕಳುಹಿಸಿದ್ದಾರೆ. ‘ನೋಟಿಸ ಸ್ವೀಕರಿಸಿದ 24 ಗಂಟೆಯೊಳಗೆ ಚಲನ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಿ’ ಎಂದು ನೋಟಿಸನಲ್ಲಿ ತಿಳಿಸಲಾಗಿದೆ.
‘OMG 2 में भगवान शिव को कचौड़ी खरीदते दिखाया’: अक्षय कुमार को महाकाल मंदिर के पुजारियों का नोटिस, कहा- 24 घंटे में हटाओ आपत्तिजनक दृश्य#OMG2 #AkshayKumar #OhMyGod2https://t.co/9rAzPKhCGA
— ऑपइंडिया (@OpIndia_in) August 8, 2023
‘ಅಖಿಲ ಭಾರತೀಯ ಪೂಜಾರಿ ಸಂಘ’ದ ಅಧ್ಯಕ್ಷ ಹಾಗೂ ಮಹಾಕಾಲ ದೇವಸ್ಥಾನದ ಅರ್ಚಕ ಮಹೇಶ ಶರ್ಮಾ ಅವರು, ‘ಓ ಮೈ ಗಾಡ್ 2’ ಚಲನಚಿತ್ರದಲ್ಲಿ ಭಗವಾನ ಶಿವನನ್ನು ತಪ್ಪಾಗಿ ಚಿತ್ರಿಸಲಾಗಿದೆ ಇದರಿಂದ ಶಿವಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ಶಿವಭಕ್ತರಿಗೆ ಹಣವಲ್ಲ, ಶಿವನ ಆಶೀರ್ವಾದವೇ ಎಲ್ಲಕ್ಕಿಂತ ದೊಡ್ಡ ಸಂಪತ್ತು ಎಂದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುದೇವರನ್ನು ಮಾನವೀಕರಣಗೊಳಿಸಿ ಅವರನ್ನು ವಿಡಂಬಿಸುವ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನಿಲ್ಲ ! |