ಹರಿಯಾಣದ 50 ಹಳ್ಳಿಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶ ನಿಷೇಧ !

ನೂಹ್ (ಹರಿಯಾಣ) ಹಿಂಸಾಚಾರ ಪ್ರಕರಣ !

ನೂಹ್ (ಹರಿಯಾಣ) – ಇಲ್ಲಿ ಗಲಭೆಗಳು ನಡೆದ ಬಳಿಕ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅನೇಕ ಗ್ರಾಮಗಳಲ್ಲಿ ಹಿಂದೂಗಳು ತಾವು ಸುರಕ್ಷಿತರಾಗಿರಬೇಕೆಂದು ಅನೇಕ ಉಪಾಯಯೋಜನೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ 3 ಜಿಲ್ಲೆಗಳಾದ ರೇವಾಡಿ, ಮಹೇಂದ್ರಗಡ ಮತ್ತು ಝಜ್ಜರ್‌ನ 50 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಪತ್ರವನ್ನು ಜಾರಿಗೊಳಿಸಿ ಮುಸ್ಲಿಂ ವ್ಯಾಪಾರಿಗಳಿಗೆ ಗ್ರಾಮ ಪ್ರವೇಶವನ್ನು ನಿಷೇಧಿಸಿ ಘೋಷಿಸಿದ್ದಾರೆ. ಪಂಚಾಯಿತಿಗಳ ಸರಪಂಚರ ಹಸ್ತಾಕ್ಷರ ಇರುವ ಈ ಪತ್ರಗಳಲ್ಲಿ ಗ್ರಾಮದಲ್ಲಿ ವಾಸಿಸುವ ಮುಸಲ್ಮಾನರು ತಮ್ಮ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಬೇಕು ಎಂದು ಸೂಚನೆ ನೀಡಲಾಗಿದೆ. ನೂಹ್ ಗಲಭೆಯ ನಂತರ, ಮುಸ್ಲಿಮರ ಬಹಿಷ್ಕಾರ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ 14 ಗ್ರಾಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಈಗ ಈ ಸಂಖ್ಯೆ 50 ಕ್ಕೆ ಏರಿದೆ.

1. ಮಹೇಂದ್ರಗಢ ಉಪವಿಭಾಗಾಧಿಕಾರಿ ಮನೋಜ್ ಕುಮಾರ್ ಮಾತನಾಡಿ, ‘ಯಾವುದೇ ಗ್ರಾಮ ಪಂಚಾಯಿತಿಯಿಂದ ನನಗೆ ಪತ್ರ ಬರದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಇದು ಪ್ರಸಾರವಾಗಿದೆ. ‘ಇಂತಹ ಆದೇಶ ಜಾರಿಗೊಳಿಸುವುದು ಕಾನೂನಿಗೆ ವಿರುದ್ಧವಾಗಿದೆ’, ಎಂದು ಮನೋಜ್ ಕುಮಾರ್ ಹೇಳಿದ್ದಾರೆ. (ಹಿಂದೂಗಳನ್ನು ರಕ್ಷಿಸಲು ವಿಫಲವಾದ ಆಡಳಿತಕ್ಕೆ ಹಿಂದೂಗಳು ತೀಕ್ಷ್ಣವಾದ ಕ್ರಮಗಳನ್ನು ತೆಗೆದುಕೊಂಡಾಗ ಕಾನೂನು ನೆನಪಾಗುತ್ತದೆ ಎಂಬುದನ್ನು ಗಮನಿಸಿರಿ! – ಸಂಪಾದಕರು)

2. ಮಹೇಂದ್ರಗಢದ ಸೈದ್‌ಪುರದ ಸರಪಂಚರಾಗಿರುವ ವಿಕಾಸ್ ಇವರು ಮಾತನಾಡಿ, ನೂಹ್‌ನ ಹಿಂಸಾಚಾರದ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು. ಕಳೆದ ಒಂದು ತಿಂಗಳಿನಿಂದ ಗ್ರಾಮದಲ್ಲಿ ಹಲವಾರು ಕಳ್ಳತನ ಪ್ರಕರಣಗಳು ನಡೆದಿವೆ. ಇದು ಕೂಡ (ಬಹಿಷ್ಕಾರಕ್ಕೆ) ಒಂದು ಕಾರಣ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ಸಮಾಜ ಸಹಿಷ್ಣುವಾಗಿದೆ. ಆದರೆ ಬಹಿಷ್ಕಾರದಂತಹ ಅತಿರೇಕದ ಕ್ರಮಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅರಿತುಕೊಂಡು ಸರಕಾರ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುವುದೇ ?