ತಮಿಳುನಾಡು ಸರಕಾರರಿಂದ ಭಾಜಪದ ಕಾರ್ಯಾಲಯದಲ್ಲಿದ್ದ ಭಾರತ ಮಾತೆಯ ಪ್ರತಿಮೆ ತೆರವು

ಅನುಮತಿ ಇಲ್ಲದೇ ಸ್ಥಾಪಿಸಲಾಗಿದೆ ಎಂದು ಆಡಳಿತದಿಂದ ಮಾಹಿತಿ

ತಮಿಳುನಾಡು – ತಮಿಳುನಾಡಿನ ವಿರುದುನಗರ ಜಿಲ್ಲೆಯ ಭಾಜಪ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ‘ಭಾರತ ಮಾತಾ’ ಪ್ರತಿಮೆಯನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಭಾಜಪದ ರಾಜ್ಯಾಧ್ಯಕ್ಷ ಕೆ. ಅಣ್ಣಮಲೈ ಇವರು ರಾಜ್ಯದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಅವರ ಪಾದಯಾತ್ರೆ ವಿರುದುನಗರಕ್ಕೆ ಆಗಮಿಸಿದಾಗ ಅವರು ಭಾರತ ಮಾತೆಯ ಪ್ರತಿಮೆಯ ಉದ್ಘಾಟನೆ ಮಾಡುವವರಿದ್ದರು. ಇದು ಹೈಕೋರ್ಟ್‌ನ ನಿರ್ದೇಶನ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ಅಧಿಕಾರಿಗಳು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಕಂದಾಯ ಅಧಿಕಾರಿಗಳು ಪ್ರತಿಮೆಯನ್ನು ತೆಗೆದುಹಾಕಲು ಭಾಜಪದ ಕಾರ್ಯಕರ್ತರನ್ನು ಕೇಳಿದಾಗ ಅವರು ಆದೇಶವನ್ನು ಅನುಸರಿಸಲು ನಿರಾಕರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ತಮಿಳುನಾಡು ಭಾಜಪ ಮುಖ್ಯಸ್ಥ ಅಣ್ಣಾಮಲೈ, ತಮಿಳುನಾಡಿನ ಭ್ರಷ್ಟ ಡಿಎಂಕೆ ಸರ್ಕಾರದ ಅಡಿಯಲ್ಲಿ, ಪಕ್ಷದ ಒಡೆತನದ ಸ್ಥಳದಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಸ್ಥಾಪಿಸುವ ಹಕ್ಕಿಲ್ಲ. ನಮ್ಮ ‘ಎನ್ ಮಣ್ಣ್, ಎನ್ ಮಕ್ಕಳ್’ ಯಾತ್ರೆಯು ಡಿಎಂಕೆ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಕಳೆದ ಮಾರ್ಚ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಉದ್ಘಾಟಿಸಿದ 10 ಪಕ್ಷದ ಕಚೇರಿಗಳಲ್ಲಿ ವಿರುದುನಗರ ಬಿಜೆಪಿ ಪ್ರಧಾನ ಕಚೇರಿಯೂ ಒಂದಾಗಿತ್ತು.

ಸಂಪಾದಕೀಯ ನಿಲುವು

ಪೊಲೀಸರು ಭಾರತದವರೋ ಪಾಕಿಸ್ತಾನದವರೋ ?