ಹಿಂದೂ ಹುಡುಗನನ್ನು ಪ್ರೀತಿಸಿದಳೆಂದು ಮುಸಲ್ಮಾನ ಹುಡುಗಿಯ ತಂದೆ ಮತ್ತು ಸಹೋದರನಿಂದ ಆಕೆಯ ಹತ್ಯೆ !

ಅಮೇಠೀ (ಉತ್ತರಪ್ರದೇಶ) – ಇಲ್ಲಿಯ ಆಫರಿನ್ ಎಂಬ ಮುಸಲ್ಮಾನ ಹುಡಗಿಯ ತಂದೆ ಮತ್ತು ಸಹೋದರರು ಆಕೆಯನ್ನು ಅಮಾನವಿಯವಾಗಿ ಥಳಿಸುತ್ತ ಹತ್ಯೆ ಮಾಡಿದ್ದಾರೆ. ಆಕೆ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಳು; ಆದ್ದರಿಂದ ಆಕೆಯ ಹತ್ಯೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಹಸ್ತಕ್ಷೇಪ ಮಾಡಿದ್ದಾರೆ. ಪೊಲೀಸರು ಕಬ್ರ ಅಗೆದು ಆಫರಿನ್ ನ ಶವವನ್ನು ಹೊರ ತೆಗೆದು ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಮೃತಪಟ್ಟ ಹುಡುಗಿಯ ತಂದೆ ಮತ್ತು ಸಹೋದರನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೊರೆತಿರುವ ಮಾಹಿತಿ ಪ್ರಕಾರ, ಆಗಸ್ಟ್ ೪, ೨೦೨೩ ರಂದು ಆಫರಿನ್ ಆಕೆಯ ಪ್ರಿಯಕರ ಸರ್ವೇಶನ ಜೊತೆ ಮಾರುಕಟ್ಟೆಯಲ್ಲಿ ಮಾತನಾಡುತ್ತಿದ್ದಳು. ಅದರ ಮಾಹಿತಿ ದೊರೆಯುತ್ತಲೇ ಆಕೆಯ ತಂದೆ ನಿಯಾಮಾತುಲ್ಲಾಗೆ ನೀಡಿದರು. ಕೂಡಲೇ ಆಕೆಯ ತಂದೆ ಮತ್ತು ಸಹೋದರ ಹೈದರ್ ಘಟನಾಸ್ಥಳಕ್ಕೆ ತಲುಪಿದರು. ಏನೂ ವಿಚಾರ ಮಾಡದೆ ಆಫರಿನ್ ಗೆ ಹಿಗ್ಗಾಮುಗ್ಗ ಥಳಿಸಿದರು. ಇದರ ಬಗ್ಗೆ ಮಾಹಿತಿ ದೊರೆಯುತ್ತದೆ ದಮ್ಮೋರದ ಪೊಲೀಸರು ಘಟನಾ ಸ್ಥಳಕ್ಕೆ ಬಂದರು. ಪೊಲೀಸರು ಆಕೆಯನ್ನು ಮತ್ತು ಆಕೆಯ ಕುಟುಂಬದವರನ್ನು ಪೊಲೀಸ ಠಾಣೆಗೆ ಕರೆದೊಯ್ದರು. ಅಲ್ಲಿ ಆಫರಿನ್ ನ ಕುಟುಂಬದವರ ಜೊತೆ ಮನೆಗೆ ಹೋಗಲು ನಿರಾಕರಿಸಿದಳು. ಪೊಲೀಸರು ತಿಳಿಸಿಹೇಳಿ ನಂತರ ಆಕೆಯನ್ನು ಆಕೆಯ ತಾಯಿ ಜೊತೆಗೆ ಮನೆಗೆ ಕಳುಹಿಸಿದರು. ಮನೆಗೆ ಹೋದ ನಂತರ ತಂದೆ ಮತ್ತು ಸಹೋದರನು ಮತ್ತೆ ಆಕೆಯನ್ನು ಥಳಿಸಿದರು. ಅದರಲ್ಲಿಯೇ ಆಕೆ ಸಾವನ್ನಪ್ಪಿದಳು. ಈ ಘಟನೆಯ ಮುಂದಿನ ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ಗೆ ಹಿಂದುಗಳು ವಿರೋಧಿಸಿದ ನಂತರ ‘ಪ್ರೀತಿಗೆ ಧರ್ಮ ಇರುವುದಿಲ್ಲ’, ಎಂದು ಹಿಂದುಗಳಿಗೆ ಉಪದೇಶ ನೀಡುವ ಜಾತ್ಯತೀತರು ಇಂತಹ ಮುಸಲ್ಮಾನರಿಗೆ ಈ ಮತಾಂಧತೆಯ ಬಗ್ಗೆ ಏಕೆ ಹೇಳುವುದಿಲ್ಲ ?