‘ಪಂಡಿತರು ಹೆಂಗಸರನ್ನು ಭ್ರಷ್ಟ ಮಾಡಿದ್ದರಿಂದ ಔರಂಗಜೇಬನು ಜ್ಞಾನವಾಪಿ ದೇವಸ್ಥಾನ ಧ್ವಂಸಗೊಳಿಸಿದನಂತೆ !’ – ಲೇಖಕ ಭಾಲಚಂದ್ರ ನೆಮಾಡೆ

  • ಹಿಂದೂದ್ವೇಷಿ ಲೇಖಕ ಭಾಲಚಂದ್ರ ನೆಮಾಡೆ ಇವರ ಔರಂಗಜೇಬನ ಬಗ್ಗೆ ಪ್ರೀತಿ ಉಕ್ಕಿತು !

  • ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುತ್ತಾ ವಿಷಕಾರಿದ !

ಮುಂಬಯಿ – ಔರಂಗಜೇಬನ ಇಬ್ಬರೂ ಪತ್ನಿಯರು ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹೋಗಿದ್ದರು; ಆದರೆ ಅವರು ಹಿಂತಿರುಗಿ ಬರಲಿಲ್ಲ. ಅಲ್ಲಿ ದೇವಸ್ಥಾನದ ಪಂಡಿತರು ಹೆಂಗಸರನ್ನು ಸುರಂಗಕ್ಕೆ ಕರೆದುಕೊಂಡು ಹೋಗಿ ಭ್ರಷ್ಟ ಮಾಡಿದರು. ಔರಂಗಜೇಬನಿಗೆ ಈ ವಿಷಯ ತಿಳಿದ ನಂತರ ಅವನು ದೇವಸ್ಥಾನ ಧ್ವಂಸ ಮಾಡಿದನು, ‘ಇಂತಹ ಮನುಷ್ಯರು ಬೇಡ’ ಎಂದು ಅವನು ಕೆಲವರನ್ನು ಕೊಂದನು. ಮುಂದೆ ಇತಿಹಾಸಕಾರರಿಂದ ‘ಔರಂಗಜೇಬ ಹಿಂದೂದ್ವೇಷಿ’ ಎಂದು ನಮೂಧಿಸಿದರು, ಎಂದು ಬುದ್ಧಿ ಭ್ರಷ್ಟ ಹಿಂದುದ್ವೇಷಿ ಲೇಖಕ ಬಾಲಚಂದ್ರ ನೇಮಾಡೆ ಅಸಂಬದ್ಧವಾಗಿ ಮಾತಾಡಿದರು. (ಛತ್ರಪತಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿರುವ ಔರಂಗಜೇಬನನ್ನು ವೈಭವೀಕರಿಸುವ ಇಂತಹ ಲೇಖಕರನ್ನು ಸರಕಾರ ಜೈಲುಗೆ ಕಳಿಸಬೇಕು ! – ಸಂಪಾದಕರು) ಆಗಸ್ಟ್ ೫ ರಂದು ಮುಂಬಯಿ ಮರಾಠಿ ಗ್ರಂಥಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನೆಮಾಡೆ ಮಾತನಾಡುತ್ತಿದ್ದರು. ಆ ಸಮಯದಲ್ಲಿ ವೇದಿಕೆಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪವಾರ ಇವರು ಕೂಡ ಉಪಸ್ಥಿತರಿದ್ದರು. ಭಾಲಚಂದ್ರ ನೆಮಾಡೆ ಇವರ ಈ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಟಿಕೆ ಟಿಪ್ಪಣಿಗಳು ನಡೆಯುತ್ತಿವೆ.

ನೆಮಾಡೆ ಇವರಿಂದ ಪೇಶ್ವೆಗಳ ಕುರಿತು ಅಸಂಭದ್ದ ಹೇಳಿಕೆ !

ಪೇಶ್ವೆಗಳಿಗೆ ಪಾಠ ಕಲಿಸುವುದಕ್ಕಾಗಿ ಬ್ರಿಟಿಷರು ಬಂದರು, ಅವರು ಕೂಡ ದುಷ್ಟರೆ; ಆದರೆ ಪೇಶ್ವೆಗಳಿಗಿಂತ ಕಡಿಮೆ ಕೆಟ್ಟವರಾಗಿದ್ದರು. ಔರಂಗಜೇಬನ ಕಾಲದಲ್ಲಿ ಅನೇಕ ಮುಸಲ್ಮಾನ ರಾಜರ ರಾಣಿಯರು ಹಿಂದುಗಳಾಗಿದ್ದರು. ಆ ಸಮಯದಲ್ಲಿ ಹಿಂದೂ-ಮುಸಲ್ಮಾನರಲ್ಲಿ ಭೇದವಿರಲಿಲ್ಲ. ಶಹಜಹಾನನ ತಾಯಿ ಹಿಂದೂ ಆಗಿದ್ದಳು. ಔರಂಗಜೇಬನ ಸೈನ್ಯದಲ್ಲಿ ಶೇಕಡ ೫೦ ಕ್ಕಿಂತಲೂ ಹೆಚ್ಚಿನ ಜನರು ಹಿಂದುಗಳಾಗಿದ್ದರು. ಆ ಸಮಯದಲ್ಲಿ ಇರುವ ಎಲ್ಲಾ ಪೇಶ್ವೆಗಳಿದ್ದರೋ ಅವರೆಲ್ಲರು ಬಹಳ ದುಷ್ಟರು ಅಷ್ಟೇ ಅಲ್ಲದೆ ಬಹಳ ನೀಚ ಪ್ರವೃತ್ತಿಯವರಾಗಿದ್ದರು. ಈ ನಾನಾಸಾಹೇಬ ಪೇಶ್ವೆ ಎಲ್ಲಿ ಹೋದರು, ಅಪ್ರಾಪ್ತ ಹುಡುಗಿಯರನ್ನು ಬಯಸುತ್ತಿದ್ದನು. ನಾನಾಸಾಹೇಬ ಪೇಶ್ವೆಯವರು ಬರೆದಿರುವ ಪತ್ರಗಳನ್ನು ನಾನು ಸ್ವತಃ ಓದಿದ್ದೇನೆ. ಆದ್ದರಿಂದ ನಿಜವಾದ ಇತಿಹಾಸ ತಿಳಿದುಕೊಳ್ಳಿ.” (ಕೇವಲ ಬ್ರಾಹ್ಮಣದ್ವೇಷಕ್ಕಾಗಿ ಪೇಶ್ವೆಗಳ ಕುರಿತು ಕೀಳಾಗಿ ಟೀಕಿಸುವವರು ಸಮಾಜದಲ್ಲಿ ವೈಚಾರಿಕ ಮಾಲಿನ್ಯ ನಿರ್ಮಾಣ ಮಾಡುತ್ತಿದ್ದಾರೆ ! – ಸಂಪಾದಕರು)

‘ಶಿವಾಜಿ ಮಹಾರಾಜರಿಗೆ ಹಿಂದುಗಳಿಗಿಂತಲೂ ಮುಸಲ್ಮಾನರ ಮೇಲೆ ವಿಶ್ವಾಸವಿತ್ತಂತೆ !’

ಶಿವಾಜಿಯ ಮುಖ್ಯ ಸೇನಾಪತಿ ಮುಸಲ್ಮಾನನಾಗಿದ್ದನು. ಆ ಸಮಯದಲ್ಲಿ ಸ್ವಂತ ಜನರ ಮೇಲೆ (ಹಿಂದುಗಳ ಮೇಲೆ) ವಿಶ್ವಾಸ ಇರಲಿಲ್ಲ. ಆ ಸಮಯದಲ್ಲಿ ಹಿಂದೂ ಮುಸಲ್ಮಾನ್ ಭೇದ ಇರಲಿಲ್ಲ, ಹೀಗೆ ಅವರು ಅಸಂಬಂಧವಾಗಿ ಮಾತನಾಡಿದರು.

ಸಚಿವ ಗಿರೀಶ ಮಹಾಜನ ಭಾಲಚಂದ್ರ ನೇಮಡೆ ಇವರ ಹೇಳಿಕೆಯ ಬಗ್ಗೆ, ”ನೆಮಾಡೆ ಇವರು ಈ ತಪ್ಪಾದ ಇತಿಹಾಸ ಎಲ್ಲಿಂದ ತಂದಿದ್ದಾರೆ ಇದು ತಿಳಿಯುತ್ತಿಲ್ಲ. ವಯಸ್ಸಿನ ಪ್ರಕಾರ ನಿಮ್ಮ ಅಸಂಬದ್ಧ ಮಾತು ಸಹಿಸಲು ಅಸಾಧ್ಯವಾಗಿದೆ ಎಂದು ಹೇಳಿದರು.

ಶಿವಸೇನೆಯ ವಕ್ತಾರ ಸಂಜೀವ ಬೋರ ಪಾಟೀಲ ಇವರು ನೆಮಾಡೆ ಇವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ”ಶಹಾಜೀರಾಜೆ ಭೋಸಲೆ ಇವರ ನಿಧನದ ನಂತರ ರಾಜ ಮಾತೆ ಜಿಜಾಬಾಯಿ ಸತಿ ಆಗಿರಲಿಲ್ಲ. ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಇವೆ; ಆದರೆ ಈ ಸಾಮಾಜಿಕ ಕಾರ್ಯದ ಶ್ರೇಯಸ್ಸು ಔರಂಗಜೇಬನಿಗೆ ನೀಡುವುದು ತಪ್ಪಾಗುತ್ತದೆ. ಪ್ರಕಾಶ ಅಂಬೇಡ್ಕರ್ ಮತ್ತು ಭಾಲಚಂದ್ರ ನೆಮಾಡೆ ಇವರಂತಹ ಜನರು ಔರಂಗಜೇಬನನ್ನು ವೈಭವೀಕರಿಸುತ್ತಾರೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯಲ್ಲಿ ಆಧಾರ ಇಲ್ಲದ ಮತ್ತು ಹುರುಳಿಲ್ಲದ ಹೇಳಿಕೆಗಳ ನೀಡಿ ಹಿಂದುಗಳ ಗಾಯಕ್ಕೆ ಬರೆ ಎಳೆಯುವ ಭಾಲಚಂದ್ರ ನೇಮಾಡೆ ಇವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ ! ಔರಂಗಜೇಬನ ದುಷ್ಕೃತ್ಯಗಳು ಮರೆಮಾಚುವುದಕ್ಕೆ ಮತ್ತು ಅವನನ್ನು ವೈಭವೀಕರಿಸಲು ಕಮ್ಯುನಿಸ್ಟರು ಈ ಸುಳ್ಳು ಇತಿಹಾಸ ರಚಿಸಿದ್ದಾರೆ. ನೆಮಾಡೆ ಅವರು ಅದನ್ನೇ ಪುನರಾವರ್ತಿಸುತ್ತಿದ್ದಾರೆ !