ನೂಹ್ ನ ಭೀಕರತೆ !

ನೂಹ್ (ಮೇವಾತ್, ಹರಿಯಾಣ): ವಿಶ್ವ ಹಿಂದೂ ಪರಿಷತ್ತು ಆಯೋಜಿಸಿದ್ದ ಬ್ರಜಮಂಡಲ ಶೋಭಾಯಾತ್ರೆಯ ಮೇಲೆ ಜುಲೈ 31 ರಂದು ಮುಸ್ಲಿಂ ಮತಾಂಧರು ನಡೆಸಿದ ದಾಳಿಯಿಂದಾಗಿ ಮೇವಾತ್ ಸಹಿತ ಇತರ 3 ರಿಂದ 4 ಜಿಲ್ಲೆಗಳಲ್ಲಿ ಗಲಭೆಗಳಾದವು. ಸರಕಾರದ ಅಂಕಿಅಂಶಗಳ ಪ್ರಕಾರ 4 – 5 ಹಿಂದೂಗಳು ಹತ್ಯೆಗೀಡಾದರು ಮತ್ತು ಕೆಲವರು ಗಾಯಗೊಂಡರು. ಮತಾಂಧರ ದಾಳಿಯ ನಂತರ ಮೇವಾತ್ ಕೆಲವು ದಿನಗಳವರೆಗೆ ಒಳಗೊಳಗೆ ಕುದಿಯುತ್ತಿರುವಾಗ ಪರಿಸ್ಥಿತಿ ಹೇಗಿದೆ? ಎನ್ನುವ ಅಂದಾಜು ಸಿಗುತ್ತಿರಲಿಲ್ಲ. ಈಗ ಅಲ್ಲಿಯ ಆಘಾತಕಾರಿ ಮಾಹಿತಿಯ ವಿಡಿಯೋ, ಕೆಲವು ದೂರದರ್ಶನ ಸುದ್ದಿ ವಾಹಿನಿಗಳ ‘ಸ್ಟಿಂಗ್ ಆಪರೇಷನ್’ ಮೂಲಕ ಸ್ಥಳೀಯರ ಹೇಳಿಕೆಗಳು ಬಹಿರಂಗಗೊಳಿಸುತ್ತಿದೆ. ಬ್ರಜಮಂಡಲ ಶೋಭಾಯಾತ್ರೆಯ ಮೇಲೆ ಮತಾಂಧರು ದಾಳಿ ನಡೆಸಿದಾಗ ಜಾಗರೂಕರಾಗಿಲ್ಲದ ಹಿಂದೂಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ಇದ್ದರು. ಅವರು ಒಂದು ಸ್ಥಳೀಯ ದೇವಸ್ಥಾನದಲ್ಲಿ ಆಶ್ರಯವನ್ನು ಪಡೆದಿದ್ದರು. ಹಿಂದೂಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚು ಇತ್ತು. ಈ ದೇವಸ್ಥಾನಕ್ಕೆ ತಗುಲಿಕೊಂಡಂತೆ ಪರ್ವತ ಪ್ರದೇಶವಿದ್ದು, ಮತಾಂಧರು ಈ ಪರ್ವತದ ಬದಿಯಲ್ಲಿ ಅಡಗಿಕೊಂಡು ಹಲವಾರು ಗಂಟೆಗಳ ಕಾಲ ಎಲ್ಲಾ ಕಡೆಯಿಂದ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದರು ಎನ್ನುವ ಮಾಹಿತಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಮಮತಾ ಸಿಂಗ್ ಸ್ವತಃ ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ? 

ಕಳೆದ 2 ದಿನಗಳಿಂದ ಬೆಳಕಿಗೆ ಬಂದಿರುವ ಘಟನೆಗಳಲ್ಲಿ ಹಲವು ಮಹಿಳೆಯರ ಹರಿದಿರುವ ಬಟ್ಟೆ ಅಕ್ಕಪಕ್ಕದ ಹೊಲಗಳಲ್ಲಿ, ಮರಗಳ ಮೇಲೆ, ರಸ್ತೆಯಲ್ಲಿ ಕಂಡು ಬಂದಿದೆ. ಅಲ್ಲಿಯ ಸ್ಥಳೀಯರ ಹೇಳಿಕೆಗನುಸಾರ, ಮತಾಂಧರು ದೇವಸ್ಥಾನದಿಂದ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಹತ್ತಿರದ ಹೊಲಗಳಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಹಿಂದೂ ಮಹಿಳಾ ಭಕ್ತರನ್ನು ಬಸ್‌ನಿಂದ ಹೊರಗೆಳೆದು ಅತ್ಯಾಚಾರ ನಡೆಸಿದ್ದಾರೆ. ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಮಹಿಳೆಯರ ಪೈಕಿ ಇನ್ನೂ ಹಲವು ಮಹಿಳೆಯರು ಮತ್ತು ಬಾಲಕಿಯರು ಇನ್ನೂವರೆಗೆ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅನೇಕ ಮಹಿಳೆಯರು ತಾವು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಧ್ಯಮಗಳೆದುರಿಗೆ ಕಣ್ಣೀರುಹಾಕುತ್ತಾ ತಿಳಿಸಿದರು. ಈ ಮಾಹಿತಿಯನ್ನು ‘ಪಾಂಚಜನ್ಯ’ ಮತ್ತು ಕೆಲವು ದೂರದರ್ಶನ ಸುದ್ದಿ ವಾಹಿನಿಗಳ ‘ಟ್ವಿಟರ್ ಹ್ಯಾಂಡಲ್’ ನೀಡಿದೆ.

ಮತಾಂಧರ ಗುಂಪು ಇಡೀ ದಿನ ಗುಂಡು ಹಾರಿಸುತ್ತಿತ್ತು ಮತ್ತು ಒಮ್ಮೆ ವಿದ್ಯುತ್ ಕಡಿತಗೊಳಿಸಲಾಯಿತು. ಮತಾಂಧರು ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಯೋಜಿಸುತ್ತಾ, ಕತ್ತಲೆಯಾಗುವುದನ್ನೇ ದಾರಿ ಕಾಯುತ್ತಿದ್ದರು. ಉಪಸ್ಥಿತರಿದ್ದ ಹಿಂದೂ ಯುವಕರು ಮತ್ತು ನಂತರ ಪೊಲೀಸರು ಬಂದಿದ್ದರಿಂದ ನಮ್ಮ ಮರ್ಯಾದೆ ಉಳಿಯಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಕೆಲವು ಮಹಿಳೆಯರನ್ನು ರಕ್ಷಿಸಲಾಗಿದ್ದರೂ, ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿರುವ ಸಾಧ್ಯತೆಯಿದೆಯೆಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನುಸಾರ ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ ಪೊಲೀಸರು ಇದುವರೆಗೂ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳನ್ನು ದೃಢಪಡಿಸಿಲ್ಲ. ಸಾವಿರಾರು ಹಿಂದೂಗಳ ಜೀವಗಳನ್ನು ಉಳಿಸಿದ್ದಕ್ಕಾಗಿ ಮಮತಾ ಸಿಂಗ್ ಅವರನ್ನು ಶ್ಲಾಘಿಸಲಾಗುತ್ತಿದ್ದರೂ, ಕಾಣೆಯಾಗಿರುವ ಹಿಂದೂ ಪುರುಷರು ಮತ್ತು ಮಹಿಳೆಯರ ವಿಷಯದಲ್ಲಿ ಸೂಕ್ತ ತನಿಖಾ ತಂಡದಿಂದ ವಿಚಾರಣೆ ನಡೆಸಬೇಕು. ಅಲ್ಲಿ ಹಿಂದೂ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಯಾವ ರೀತಿ ಅತ್ಯಾಚಾರ ನಡೆಯಿತು? ಎನ್ನುವುದು ಜಗತ್ತಿನ ಎದುರಿಗೆ ಬರಬೇಕು.

ಪೊಲೀಸರು – ಆಡಳಿತದ ನಿರಾಸಕ್ತಿ! 

ಹರಿಯಾಣ ಗೃಹ ಸಚಿವ ಅನಿಲ್ ವಿಜ್

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಇವರು ಒಂದು ಆಘಾತಕಾರಿ ಹೇಳಿಕೆ ನೀಡಿ, `ನೂಹ್ ನಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಮತಾಂಧರು ಹಿಂದೂಗಳ ಮೇಲೆ ದಾಳಿ ನಡೆಸಿ  ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿದ್ದರು, ಅದರ ಬಗ್ಗೆ ಮಾಹಿತಿಯೇ ಇರಲಿಲ್ಲ’ ಎಂದು ಹೇಳಿದರು. ಈಗ ಇದನ್ನು ನಾವು ಏನೆಂದು ಹೇಳಬೇಕು? ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿತ್ತೇ? ಮತಾಂಧರು ಎಕೆ-47 ರೈಫಲ್‌ಗಳು, ಬಂದೂಕುಗಳು, ಪೆಟ್ರೋಲ್ ಸಂಗ್ರಹಿಸಿ ಹಿಂದೂಗಳ ಮೇಲೆ ದಾಳಿ ಮಾಡಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಯೋಜಿಸುತ್ತಿರುವಾಗ ಅದರ ಕಲ್ಪನೆಯೂ ಇಲ್ಲವೆಂದು ಹೇಳುವುದು ಮತ್ತು ಅದೂ ಕೂಡ ಮುಸಲ್ಮಾನ ಬಾಹುಳ್ಯವಿರುವ ಸಂವೇದನಾಶೀಲ ಭಾಗದಲ್ಲಿ ಈ ರೀತಿ ನಡೆದಿರುವುದು ಆಶ್ಚರ್ಯಗೊಳಿಸುವಂತಹದ್ದಲ್ಲ, ಬದಲಾಗಿ ಆಕ್ರೋಶ ಮೂಡಿಸುವಂತಿದೆ. ಮುಖ್ಯಮಂತ್ರಿ ಖಟ್ಟರ್ ಇವರು `ಪೊಲೀಸರು ಅಥವಾ ಸೇನೆಗೆ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ. ಆದರೆ ತದನಂತರ ಖಟ್ಟರ್ ಈ ಹೇಳಿಕೆಯ ಬಗ್ಗೆ ತಿಪ್ಪೆ ಸಾರಿಸಲು ಪ್ರಯತ್ನಿಸಿದರೂ, ಅವರು ದುರದೃಷ್ಟವಶಾತ್ ವಾಸ್ತವವನ್ನೇ ಹೇಳಿದ್ದಾರೆ. ಸರಕಾರಕ್ಕೆ ಹಿಂದೂಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಹಿಂದೂಗಳಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡುತ್ತಾರೆಯೇ? ಇದರಿಂದ ಅವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು! ಗಲಭೆಗಳು ಸಂಭವಿಸಿದಾಗ, ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಕಡೆಗೆ ಒತ್ತು ನೀಡುತ್ತಾರೆ; ಆದರೆ ಅದರ ಮೂಲಕ್ಕೆ ಹೋಗಲು ಪ್ರಯತ್ನಿಸುವುದು ಬಹಳ ಕಡಿಮೆಯೆನ್ನಬಹುದು. ಪರಿಣಾಮವಾಗಿ ಗಲಭೆಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ.

ಎಲ್ಲಾ ಮತಾಂಧರು ಒಂದೇ! 

ಆಡಳಿತ ‘ಯೋಗಿ ಮಾದರಿ’ ಬಳಸಿ ಗಲಭೆಕೋರರ ಅನಧಿಕೃತ ಗುಡಿಸಲುಗಳು, ಮನೆಗಳು ಮತ್ತು ಅಂಗಡಿಗಳನ್ನು ಕೆಡವಲು ಪ್ರಾರಂಭಿಸಿದೆ. ಇದರಿಂದ ಗಲಭೆ ಸಂತ್ರಸ್ತರಿಗೆ ಸ್ವಲ್ಪ ಸಮಾಧಾನ ತಂದಿರಬಹುದು; ಆದರೆ, ಶ್ರದ್ಧಾಳು ಹಿಂದೂ ಭಕ್ತಾದಿಗಳ ಮೇಲೆ ದಾಳಿ ಮಾಡುವವರನ್ನು ಮತ್ತು ಹಿಂದೂ ಮಹಿಳೆಯರ ಮಾನಕ್ಕೆ ಕೈಹಾಕುವವರಿಗೆ ಜೀವಮಾನವಿಡೀ ನೆನಪಿಸುವಂತಹ ತಕ್ಕ ಪಾಠ ಕಲಿಸಬೇಕು ಎಂದು ಭಾರತೀಯರು ಭಾವಿಸುತ್ತಾರೆ. ಹೀಗಿರುವಾಗ ಮೇವಾತ್‌ನಲ್ಲಿ ಮತಾಂಧರ ವಿರುದ್ಧದ ಕ್ರಮದಿಂದಾಗಿ, ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅವರು ಗಲಭೆಕೋರ ಮತಾಂಧರ ಪರವಾಗಿ ಮಾತನಾಡಿ ‘ಈ ಕ್ರಮಕ್ಕೆ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ. ಆಜ್ಮಿಯವರ ಈ ಹೇಳಿಕೆಯಿಂದ ಅವರು ಗಲಭೆಕೋರ ಮತಾಂಧರನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಇದರಿಂದ `ನಾವು ಒಂದೇ’ ಎಂಬ ಸಂದೇಶವನ್ನು ಅಬು ಅಜ್ಮಿ ನೀಡಿದ್ದಾರೆ. ಹಾಗಾಗಿ ಹಿಂದೂಗಳು ಎಚ್ಚರಿಕೆ ವಹಿಸುವ ಆವಶ್ಯಕತೆಯಿದೆ.

ಮತಾಂಧರ ಜಾಲಗಳು ಮತ್ತು ‘ಕೃತಿಯ ವಿಧಾನ’ ಎಷ್ಟು ವ್ಯವಸ್ಥಿತವಾಗಿದೆ? ಎನ್ನುವುದು ಈ ಗಲಭೆಯ ನಿಮಿತ್ತದಿಂದ ಅನುಭವವಾಯಿತು. ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಿದ ತಕ್ಷಣ, ಮಹಮ್ಮದ್ ಜುಬೇರ್ ಅವರ ಟ್ವಿಟರ್ ಹ್ಯಾಂಡಲ್, ‘ಝೂ ಬೇರ್’ ಮೇಲೆ ‘ಮೆರವಣಿಗೆಯಲ್ಲಿ ಹಿಂದೂಗಳು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಹಾಡುಗಳನ್ನು ಹಚ್ಚಿದ್ದರು’ ಎಂದು ಆರೋಪಿಸಿದ್ದಾರೆ. ಒಂದು ಪ್ರಮುಖ ಹಿಂದೂ ವಿರೋಧಿ ಸುದ್ದಿ ವಾಹಿನಿಯೊಂದು ಒಂದು ಕಡೆ ಕಸಕ್ಕೆ ಹಚ್ಚಲಾಗಿದ್ದ ಬೆಂಕಿಯನ್ನು ತೋರಿಸಿ ‘ಬಡ ಮುಸ್ಲಿಂ ಗುಡಿಸಲುಗಳನ್ನು ಆಡಳಿತ ಸುಟ್ಟುಹಾಕಿದೆ’ ಎಂದು ವರದಿ ಮಾಡಿತು. ಮತಾಂಧರು ಮಸೀದಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂದೂಗಳ ವಿರುದ್ಧವೇ ಅಲೆಯನ್ನು ತಿರುಗಿಸಲು ಪ್ರಯತ್ನಿಸಿ ಹಿಂದೂಗಳನ್ನೇ ದೂಷಿಸಿದರು. ಇದರ ತಾತ್ಪರ್ಯ ಮತಾಂಧರು ಕೇವಲ ಹಿಂದೂಗಳ ಮೇಲೆ ದಾಳಿ ಮಾಡುವುದಷ್ಟೇ ಅಲ್ಲ, ಅವರು ನಿರಪರಾಧಿಗಳೆಂದು ಜಗತ್ತಿಗೆ ತೋರಿಸಲು ಸಂಚು ರೂಪಿಸಿದ್ದರು ನ್ನುವುದು ಗಮನಕ್ಕೆ ಬರುತ್ತದೆ. ಪೋಲೀಸ್-ಆಡಳಿತ ಮತಾಂಧರ ಎಲ್ಲಾ ಪಿತೂರಿಗಳನ್ನು ಯಾವಾಗ ಬಯಲು ಮಾಡುತ್ತದೆ ?

ನೂಹ್‌ನಲ್ಲಿ ಹಿಂದೂ ಪುರುಷರು ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಜಗತ್ತಿಗೆ ಬಹಿರಂಗಪಡಿಸುವವರೆಗೆ ಮತ್ತು ಮತಾಂಧರಿಗೆ ಕಠಿಣ ಶಿಕ್ಷೆಯಾಗುವವರೆಗೆ ಹಿಂದೂಗಳು ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವುದು ಆವಶ್ಯಕವಾಗಿದೆ.