ಹರಿಯಾಣ ಸರಕಾರದ ಬುಲ್ಡೋಜರ್ ನಿಂದ ನಡೆದಿರುವ ಕ್ರಮದ ಬಗ್ಗೆ ಅಸದ್ದುದ್ದೀನ್ ಓವೈಸಿ ಇವರ ಕೂಗಾಟ !
ನವ ದೆಹಲಿ – ನೂಹ ಇಲ್ಲಿಯ ಹಿಂಸಾಚಾರದ ವಿರುದ್ಧ ಹರಿಯಾಣ ಸರಕಾರದಿಂದ ನಡೆಯುತ್ತಿರುವ ಕಾರ್ಯಾಚರಣೆಯಿಂದ ಎಂಐಎಂ ಪಕ್ಷದ ಸಂಸದ ಅಸದ್ದುದ್ದೀನ್ ಓವೈಸಿ ಇವರು ಕೂಗಾಡಲು ಆರಂಭಿಸಿದ್ದಾರೆ. ಇಲ್ಲಿಯವರೆಗೆ ೬೦೦ ಕ್ಕೂ ಹೆಚ್ಚಿನ ಕಟ್ಟಡಗಳನ್ನು ಅಥವಾ ಅಂಗಡಿಗಳನ್ನು ಬುಲ್ಡೋಜರ್ ನಿಂದ ನೆಲೆಸಮ ಮಾಡುವ ಕಾರ್ಯಾಚರಣೆಯ ವಿರುದ್ಧ ಅವರು, ಸರಕಾರ ಕೇವಲ ಬಡ ಮುಸಲ್ಮಾನರನ್ನು ಗುರಿ ಮಾಡುತ್ತಿದೆ. ಇದು ಪಕ್ಷಪಾತದ ಕಾರ್ಯಾಚರಣೆಯಾಗಿದ್ದು ಯಾರು ಹಿಂಸಾಚಾರ ನಡೆಸಿದ್ದಾರೆ ಅವರು ಬಂದುಕೂ ಹಿಡಿದು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ನೂರಾರು ಬಡ ಮುಸಲ್ಮಾನರು ಬೀದಿಗೆ ಬಂದಿದ್ದಾರೆ, ಎಂದು ಹೇಳಿದರು.
दंगाइयों के समर्थन में हरियाणा सरकार पर बरसे ओवैसी !#Haryana #Owaisi #AIMIM #Sohna #Gurugram #MewatVoilence #NuhViolence #newsindia
@asadowaisi @aimim_national @mlkhattar @cmohry @police_haryana pic.twitter.com/lxOkiWGL5g
— News India (@newsindia24x7_) August 6, 2023
ಸಂಪಾದಕೀಯ ನಿಲುವುಹಿಂದೂಗಳನ್ನು ಗುರಿ ಮಾಡುವಾಗ ಇದೇ ಮುಸಲ್ಮಾನರ ಬಡತನ ಎಲ್ಲಿ ಹೋಗಿತ್ತು, ಇದರ ಬಗ್ಗೆ ಓವೈಸಿ ಎಂದು ಮಾತನಾಡುವುದಿಲ್ಲ ಇದು ಸಹಜವಾಗಿದೆ ! |