ಉತ್ತರ ಪ್ರದೇಶದಲ್ಲಿನ ಅಮರೋಹದ ಘಟನೆ
ಲಕ್ಷ್ಮಣಪುರಿ (ಮುಖ್ಯಾಂಶ) – ಭಾರತ ಸರಕಾರದ ವತಿಯಿಂದ ನಡೆಸಲಾಗುವ ‘ಅಮೃತ ರೈಲ್ವೆ ನಿಲ್ದಾಣ’ ಯೋಜನೆಯ ಅಡಿಯಲ್ಲಿ ಅಮರೋಹ ಇಲ್ಲಿ ಆಯೋಜಿಸಿರುವ ಒಂದು ಕಾರ್ಯಕ್ರಮದಲ್ಲಿ ಭಾಜಪದ ಸಂಸದ ಡಾ. ಹರಿಸಿಂಹ ಧಿಲ್ಲೋ ಇವರು ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆ ನೀಡಿದರು. ಆದ್ದರಿಂದ ಬಹುಜನ ಸಮಾಜ ಪಕ್ಷದ ಶಾಸಕ ದಾನೀಶ ಅಲಿ ಆಕ್ರೋಶಗೊಂಡರು ಮತ್ತು ಅದಕ್ಕೆ ವಿರೋಧಿಸಿದರು. ಇದರಿಂದ ಬಹುಜನ ಸಮಾಜ ಪಕ್ಷ ಕಾರ್ಯಕರ್ತರಲ್ಲಿ ಹಾಗೂ ಭಾಜಪದ ಕಾರ್ಯಕರ್ತರಲ್ಲಿ ಮಾತಿಗೆ ಮಾತು ಬೆಳೆಯಿತು. ಈ ಸಮಯದಲ್ಲಿ ಕಾರ್ಯಕ್ರಮ ಸಲ್ಪ ಸಮಯ ಉದ್ವಿಗ್ನವಾಗಿತ್ತು. ಸರಕಾರಿ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಅಲ್ಲಿಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.
BSP MP Danish Ali objects to ‘Bharat Mata Ki Jai’ slogan at Amroha during launch of Amrut Bharat Station Scheme, BJP says he has a Pakistani mindsethttps://t.co/KqefyApGTh
— OpIndia.com (@OpIndia_com) August 6, 2023
ಆಗಸ್ಟ್ ೬ ರಂದು ಮೇಲಿನ ಯೋಜನೆಯ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ಆನ್ಲೈನ್’ ಕಾರ್ಯಕ್ರಮದಲ್ಲಿ ಅಮರೋಹ ಇಲ್ಲಿಯ ರೈಲು ನಿಲ್ದಾಣದ ಉದ್ಘಾಟನೆ ಮಾಡಿದರು. ದಾನೀಶ ಅಲಿ ಇವರ ಪ್ರಕಾರ, ಇದು ಭಾಜಪದ ವೈಯಕ್ತಿಕ ಕಾರ್ಯಕ್ರಮವಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಈ ರೈಲು ನಿಲ್ದಾಣ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಭಾಜಪಾಗೆ ಅಲ್ಲ. ಇದರಿಂದ ಪಕ್ಷವನ್ನು ಬೆಂಬಲಿಸುವ ಘೋಷಣೆಗಳನ್ನು ಈ ಕಾರ್ಯಕ್ರಮದಲ್ಲಿ ನೀಡಬಾರದು. (ಭಾರತ ಮಾತಾ ಕೀ ಜೈ , ಇದು ಭಾಜಪ ಪಕ್ಷದ ಘೋಷಣೆ ಹೇಗೆ ಆಗುತ್ತದೆ ? ಪ್ರತಿಯೊಬ್ಬ ಭಾರತೀಯ ಯಾರಿಗೆ ಈ ದೇಶದ ಬಗ್ಗೆ ಅಭಿಮಾನ ಇದೆ ಅವರು ಈ ಘೋಷಣೆ ನೀಡುತ್ತಾರೆ. ಸ್ವಂತದ ಕಟ್ಟರತೆ ಮರೆಮಾಚುವುದಕ್ಕಾಗಿ ದಾನೀಶ ಅಲಿ ಇವರು ಈ ಸ್ಪಷ್ಟನೆ ನೀಡಿದ್ದಾರೆ ! – ಸಂಪಾದಕರು) ಡಾ. ಧಿಲೋ ಇವರು, ‘ಭಾರತ ಮಾತಾ ಕೀ ಜೈ’ ಈ ಘೋಷಣೆ ನೀಡುವುದು ನಮ್ಮ ಅಧಿಕಾರವಾಗಿದೆ. ಇದಕ್ಕೆ ವಿರೋಧ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು‘ಭಾರತ ಮಾತಾ ಕೀ ಜೈ’ ಎಂದು ಹೇಳಿದರೆ ಯಾರ ಪಿತ್ತ ನೆತ್ತಿಗೇರುತ್ತದೆ, ಅವರು ಭಾರತದಲ್ಲಿ ಏಕೆ ವಾಸಿಸುತ್ತಾರೆ ? ಈ ದೇಶದ ಬಗ್ಗೆ ಯಾರಿಗೆ ಏನು ಅನಿಸುವುದಿಲ್ಲ, ಅವರು ಈ ದೇಶಕ್ಕಾಗಿ ಪ್ರಾಣಾರ್ಪಣೆ ಅಂತು ಬಿಡಿ ದೇಶದ ಪ್ರಗತಿಗೂ ಕೂಡ ಯಾವುದೇ ರೀತಿ ಕೈಜೋಡಿಸಲಾರರು ? ಇಂತಹವರ ವಿರುದ್ಧ ದೇಶದ್ರೋಹದ ಮೊಕದ್ದಮೆ ನಡೆಸಿ ಅವರಿಗೆ ಕಠಿಣ ಶಿಕ್ಷೆ ನೀಡುವುದು ಅವಶ್ಯಕ ! ಅಲಿ ಇವರಂತಹ ಜನರು ತುಂಬಿರುವ ಬಹುಜನ ಸಮಾಜ ಪಕ್ಷ ರಾಷ್ಟ್ರ ಹಿತ ಏನು ಮಾಡುವರು ? ಇಂತಹ ಪಕ್ಷವನ್ನು ನಿಷೇಧಿಸುವುದು ಅವಶ್ಯಕ ! ಭಾರತಮಾತೆಯ ಜೈಕಾರ ಮಾಡುವವರಿಗೆ ವಿರೋಧಿಸುವ ಬಹುಜನ ಸಮಾಜ ಪಾರ್ಟಿಯ ಶಾಸಕ ದಾನೀಶ ಅಲಿ ಭಾರತವನ್ನು ಇಸ್ಲಾಮಿ ದೇಶ ಗೊಳಿಸುವ ಘೋಷಣೆ ನೀಡುವ ಜಿಹಾದಿಗಳ ಬಗ್ಗೆ ಚ ಕಾರವನ್ನೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ ! |