ನೂಹದಲ್ಲಿ ನಡೆದ ದಾಳಿ ಬಗ್ಗೆ ಸರಕಾರಕ್ಕೆ ಪೂರ್ವ ಸೂಚನೆ ಇರಲಿಲ್ಲ !

ಹರಿಯಾಣದ ಗೃಹಸಚಿವರ ಹೇಳಿಕೆ

ಚಂಡೀಗಢ (ಹರಿಯಾಣ) – ಹರಿಯಾಣದ ನೂಹದಲ್ಲಿ ಜುಲೈ 31 ರಂದು ಹಿಂದೂಗಳ ಧಾರ್ಮಿಕ ಮೆರವಣಿಗೆ ಮೇಲೆ ಮತಾಂಧ ಮುಸ್ಲಿಂಮರು ದಾಳಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಪೂರ್ವ ಸೂಚನೆ ಇರಲಿಲ್ಲ ಎಂದು ರಾಜ್ಯ ಗೃಹ ಸಚಿವ ಅನಿಲ ವಿಜ ಹೇಳಿದ್ದಾರೆ. ಘಟನೆ ನಡೆದ ದಿನ ಮಧ್ಯಾಹ್ನ 3 ಗಂಟೆಗೆ ಅಲ್ಲಿಯ ವ್ಯಕ್ತಿಯೊಬ್ಬ ನಮಗೆ ಮಾಹಿತಿ ಕೊಟ್ಟನು. ಆನಂತರ ಪೋಲೀಸರು ಅಲ್ಲಿಗೆ ತಲುಪಿದರು.

ಗೃಹಸಚಿತ ವಿಜ ಇವರು, ರಾಜ್ಯದ ಗುಪ್ತಚರ ಇಲಾಖೆಗೆ ಏಕೆ ಸಿಕ್ಕಿಲ್ಲ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಇನ್ನೊಂದು ಕಡೆ ರಾಜ್ಯದ ಗೃಹ ಸಚಿವ ಟಿ. ವಿ. ಎಸ್. ಎನ್. ಪ್ರಸಾದ ಇವರು, ಗೃಹಸಚಿವ ವಿಜ ಹೇಳಿಕೆಯ ಒಂದು ದಿನ ಮೊದಲೇ ನಮಗೆ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗೆಯೇ ಈ ಮಾಹಿತಿ ನೂಹದಲ್ಲಿ ನಡೆದ ಶಾಂತಿ ಸಮಿತಿಯ ಸಭೆಯಲ್ಲಿ ಸಹ ಮಾಹಿತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಡಚಣೆ ಬರುವುದಿಲ್ಲ ಎಂದು ಆಶ್ವಾಸನೆ ನೀಡಲಾಗಿತ್ತು. (ಆಡಳಿತ ಮತ್ತು ಸರಕಾರದ ಮಧ್ಯೆ ಹೊಂದಾಣಿಕೆ ಇಲ್ಲ, ಹೀಗೆಂದು ತಿಳಿಯಬೇಕೆ ? _ಸಂಪಾದಕರು)

ಸಂಪಾದಕೀಯ ನಿಲುವು

ಆಂತರಿಕ ಶತ್ರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗದ ಸರಕಾರವು ವಿದೇಶಿ ಶಕ್ತಿಗಳ ಆಕ್ರಮಣವನ್ನು ಹೇಗೆ ಹಿಮ್ಮೆಟ್ಟಿಸುತ್ತದೆ ?