ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

(ಮೌಲ್ವಿ ಅಂದರೆ ಇಸ್ಲಾಂನ ಧಾರ್ಮಿಕ ಗುರು)

ಜಕಾರ್ತಾ (ಇಂಡೋನೇಷಿಯ) – ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿ ಪಾಂಜಿ ಗುಮಿಲಾಂಗರನ್ನು ಬಂಧಿಸಲಾಗಿದೆ. ಅವರು ಇಸ್ಲಾಂನ ಅವಮಾನ ಮಾಡಿದ್ದಾರೆ ಮತ್ತು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಂಜಿಯ ನಿರ್ಣಯದಿಂದ ದೇಶದಲ್ಲಿ ಅಶಾಂತಿ ನಿರ್ಮಾಣವಾಗಿತ್ತು. ಈ ಆರೋಪಕ್ಕಾಗಿ ಪಾಂಜಿಗೆ 10 ವರ್ಷಗಳ ಕಾಲ ಶಿಕ್ಷೆ ಆಗಬಹುದು. ಆದರೆ ಪಾಂಜಿಯ ಬೆಂಬಲಿಗರು “ಪಾಂಜಿಯ ಬಂಧನ ಅನ್ಯಾಯವಾಗಿದೆ” ಎಂದು.ಆರೋಪಿಸಿದ್ದಾರೆ.