ಸಾಮೂಹಿಕ ಬಲಾತ್ಕಾರದ ನಂತರ ಹುಟ್ಟಿದ ಮಗನಿಂದ ೨೮ ವರ್ಷದ ನಂತರ ತಾಯಿಗೆ ನ್ಯಾಯ ದೊರಕಿಸಿಕೊಟ್ಟ !

ಶಾಹಜಾಹಾಪುರ (ಉತ್ತರ ಪ್ರದೇಶ) – ಇಲ್ಲಿಯ ೨೮ ವರ್ಷಗಳ ಹಿಂದಿನ ಸಾಮೂಹಿಕ ಬಲಾತ್ಕಾರ ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಸಾಮೂಹಿಕ ಬಲಾತ್ಕಾರದ ಸಮಯದಲ್ಲಿ ಸಂತ್ರಸ್ತೆಯು ೧೨ ವರ್ಷವಳಾಗಿದ್ದಳು. ೨೮ ವರ್ಷಗಳನಂತರ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ೧೯೯೪ ರಲ್ಲಿ ನಕಿ ಹಸನ್ ಮತ್ತು ಗುಡ್ಡು ಹಸನ್ ಎಂಬ ಇಬ್ಬರು ಸಹೋದರರು ೧೨ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದರು. ಸಾಮೂಹಿಕ ಬಲಾತ್ಕಾರದ ನಂತರ ಸಂತ್ರಸ್ತೆ ಒಂದು ಮಗುವಿಗೆ ಜನ್ಮ ನೀಡಿದಳು. ಮಗು ತಾಯಿಗೆ ತಂದೆಯ ಹೆಸರು ಕೇಳುವಾಗ ಘಟನೆಯ ಸತ್ಯ ಅವನಿಗೆ ತಿಳಿಯಿತು. ತಾಯಿಗೆ ನ್ಯಾಯ ಕೊಡಿಸುವುದಕ್ಕಾಗಿ ಅವನು ಕಾನೂನಿನ ಆಧಾರ ಪಡೆದನು. ಮಗ ೨೮ ವರ್ಷದ ನಂತರ ತಾಯಿಗೆ ನ್ಯಾಯ ದೊರಕಿಸಿಕೊಟ್ಟ.

ಈ ಪ್ರಕರಣದಲ್ಲಿ ಮಾರ್ಚ್ ೪, ೨೦೨೧ ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಗುಡ್ಡು ಹಸನ್ ಇವನನ್ನು ಬಂಧಿಸಿದರು ಹಾಗೂ ನಕಿ ಹಸನ್ ಪರಾರಿಯಾಗಿದ್ದಾನೆ. ಬಂಧಿಸಲಾದ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ, ಎಂದು ಪೊಲೀಸ ಅಧಿಕಾರಿ ಧರ್ಮೇಂದ್ರ ಗುಪ್ತ ಇವರು ಹೇಳಿದರು.