ನೂಹದಲ್ಲಿನ ಪೊಲೀಸ ಅಧಿಕಾರಿಯ ವರ್ಗಾವಣೆ

ನೂಹ (ಹರಿಯಾಣ) – ಇಲ್ಲಿಯ ಪೊಲೀಸ ಅಧಿಕಾರಿ ವರುಣ ಸಿಂಗಾಲ ಇವರ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನದಲ್ಲಿ ನರೇಂದ್ರ ಬಿಜಾರನೀಯ ಇವರನ್ನು ನೇಮಕ ಮಾಡಿದ್ದಾರೆ. ನೂಹದಲ್ಲಿ ಜುಲೈ ೩೧ ರಂದು ನಡೆದಿರುವ ಹಿಂಸಾಚಾರದ ಸಮಯದಲ್ಲಿ ವರುಣ ಸಿಂಗಾಲ ಇವರು ರಜೆಯಲ್ಲಿದ್ದರು.

೧. ನೂಹದಲ್ಲಿಯ ಹಿಂಸಾಚಾರದ ನಂತರ ಪಕ್ಕದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹಿಂಸಾಚಾರದ ಘಟನೆ ನಡೆಯುತ್ತಲಿವೆ. ಪಾನಿಪತದಲ್ಲಿ ಧಮಿಜ ಕಾಲೋನಿಯಲ್ಲಿ ಆಗಸ್ಟ್ ೩ ರ ರಾತ್ರಿ ದುಷ್ಕರ್ಮಿಗಳು ಮುಸಲ್ಮಾನರ ಅಂಗಡಿಗಳು ಮತ್ತು ೨ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

೨. ಆಗಸ್ಟ್ ೪ ರಂದು ಇಲ್ಲಿಯ ಮುಸಲ್ಮಾನರು ಮನೆಯಲ್ಲಿಯೇ ನಮಾಜ ಮಾಡಿದ್ದಾರೆ. ಪೊಲೀಸರು ಅವರಿಗೆ ಮಸೀದಿಗೆ ಹೋಗದಂತೆ ಕರೆ ನೀಡಿದ್ದರು. ಎಲ್ಲಾ ಮಸೀದಿಯ ಹೊರಗೆ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

೩. ನೂಹದಲ್ಲಿನ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ೭ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಗೃಹರಕ್ಷಕ ದಳದ ಗುರುಸೇವಕ ಮತ್ತು ನೀರಜ ಎಂಬ ಸೈನಿಕ ಹಾಗೂ ಶಕ್ತಿ ಸಿಂಹ, ಅಭಿಷೇಕ, ಪ್ರದೀಪ ಶರ್ಮಾ ಮತ್ತು ಇತರ ೨ ವ್ಯಕ್ತಿಗಳ ಸಮಾವೇಶವಿದೆ. ಪೊಲೀಸರು ಒಟ್ಟು ೯೩ ದೂರುಗಳನ್ನು ದಾಖಲಿಸಿದ್ದು ೧೮೬ ಜನರನ್ನು ಬಂಧಿಸಿದ್ದಾರೆ. ಹಾಗೂ ೭೮ ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !

ನೂಹದ ತಾವಡು ಪ್ರದೇಶದಲ್ಲಿ ಪೊಲೀಸರು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ ಕೈಗೊಳ್ಳುತ್ತಾ ಅವುಗಳನ್ನು ನೆಲೆಸಮ ಮಾಡಿದರು. ನೂಹದಲ್ಲಿನ ಹಿಂಸಾಚಾರದಲ್ಲಿ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ಮುಸಲ್ಮಾನರ ಕೈವಾಡವಿತ್ತು ಎಂದು ಪೊಲೀಸರಿಗೆ ಕಂಡುಬಂದ ನಂತರ ಈ ಕ್ರಮ ಕೈಗೊಂಡರು. (ನೂಹದಲ್ಲಿ ಹಿಂಸಾಚಾರ ನಡೆಯದೇ ಇದ್ದಿದ್ದರೆ ಆಗ ಸರಕಾರದಿಂದ ಈ ಗುಡಿಸಲುಗಳ ಮೇಲೆ ಕ್ರಮ ಕೈಗೊಳ್ಳತ್ತಿರಲಿಲ್ಲ ! ಹೀಗೆ ಇದರಿಂದ ತಿಳಿದು ಬರುತ್ತದೆ ! ಈ ಗುಡಿಸಿಲುಗಳು ಕಟ್ಟುವವರೆಗೆ ಪೊಲೀಸರು ಮತ್ತು ಸರಕಾರ ನಿದ್ರಿಸಿತ್ತೆ ? ದೇಶದಲ್ಲಿ ಈ ರೀತಿ ಎಷ್ಟು ಸ್ಥಳಗಳಲ್ಲಿ ಈ ನುಸುಳುಕೋರರು ವಾಸಿಸುತ್ತಿದ್ದಾರೆ, ಇದನ್ನು ಕಂಡು ಹಿಡಿದು ಅವರ ಮೇಲೆ ಕ್ರಮ ಕೈಗೊಳ್ಳುವರೆ ? – ಸಂಪಾದಕರು) ಸುಮಾರು ೨೦೦ ಕೂಹೆಚ್ಚಿನ ಗುಡಿಸಿಲುಗಳನ್ನು ನೆಲೆಸನ ಮಾಡಿದ್ದಾರೆ. ಸುಮಾರು ೪ ಗಂಟೆ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಗುಡಿಸಿಲಗಳು ಸರಕಾರಿ ಜಾಗದಲ್ಲಿ ಕಟ್ಟಿದ್ದರು.