ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಉದ್ಧಟತನ ! – ಶಮಸಿರ ಕ್ಷಮೆ ಕೇಳುವುದಿಲ್ಲವಂತೆ !

ಕೇರಳ ವಿಧಾನಸಭೆಯ ಅಧ್ಯಕ್ಷ ಶಮಸಿರ ಇವರು ಹಿಂದೂ ದೇವತೆಗಳ ಬಗ್ಗೆ ನೀಡಿರುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು, ಹಿಂದುಗಳ ಒತ್ತಾಯ

ತಿರುವನಂತಪುರಂ (ಕೇರಳ) – ಹಿಂದೂ ದೇವತೆಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಕೇರಳ ವಿಧಾನಸಭೆಯ ಅಧ್ಯಕ್ಷ ಎ.ಎನ್. ಶಮಸಿರ ಇವರ ವಿರುದ್ಧದ ಆಕ್ರೋಶ ಮುಂದುವರೆದಿದೆ. ಶಮಸಿರ ಇವರು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕೆಂದು ಹಿಂದೂಗಳು ಒತ್ತಾಯಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಶಮಸಿರ ಇವರು, ‘ಯಾರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ’, ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇನ್ನೊಂದು ಕಡೆಗೆ ಕೇರಳದಲ್ಲಿನ ಆಡಳಿತರೂಡ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷವು ‘ವಿಧಾನ ಸಭೆಯ ಅಧ್ಯಕ್ಷ ಎ.ಎನ್. ಶಮಸಿರ ಹಿಂದೂ ದೇವತೆಗಳ ಕುರಿತು ನೀಡಿರುವ ವಿವಾದಿತ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸುವುದಿಲ್ಲ’, ಎಂದು ಉದ್ಧಟತನದಿಂದ ಹೇಳಿದೆ. ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಚಿವ ಎಂ.ವಿ. ಗೋವಿಂದನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ, ಶಮಸಿರ ಇವರ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸುವ ಅವಶ್ಯಕತೆ ಇಲ್ಲ. ಅವರು ಏನು ಮಾತನಾಡಿದ್ದಾರೆ ಅದು ಸಂಪೂರ್ಣವಾಗಿ ಸರಿಯಾಗೆ ಇದೆ ಎಂದು ಹೇಳಿದರು.

ಶಮಸಿರ ಏನು ಹೇಳಿದ್ದರು ?

ಕೇರಳ ವಿಧಾನಸಭೆಯ ಅಧ್ಯಕ್ಷ ಶಮಸಿರ ಇವರು ಒಂದು ಕಾರ್ಯಕ್ರಮದಲ್ಲಿ ‘ಗಜಮುಖ ಇರುವ ಭಗವಾನ ಶ್ರೀ ಗಣೇಶ ಇದು ಒಂದು ದಂತಕಥೆಯಾಗಿದೆ. ಈ ನಂಬಿಕೆಗೆ ಯಾವುದೇ ಶಾಸ್ತ್ರೀಯ ಆಧಾರವಿಲ್ಲ’, ಎಂದು ಹೇಳಿದ್ದರು. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಭಾಜಪ ಮತ್ತು ವಿಶ್ವ ಹಿಂದೂ ಪರಿಷತ್ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಜಾತ್ಯತೀತ ಸಂವಿಧಾನದಿಂದ ನೀಡಿರುವ ಹುದ್ದೆಯಲ್ಲಿರುವ ಓರ್ವ ಮುಸಲ್ಮಾನ ವ್ಯಕ್ತಿಯು ರಾಜಾರೋಷವಾಗಿ ಹಿಂದುದ್ವೇಷದ ಹೇಳಿಕೆ ನೀಡಿದರು ಕೂಡ ಅವರ ಬಗ್ಗೆ ಸರಕಾರ, ಪೊಲೀಸರು, ಆಡಳಿತ, ಪ್ರಜಾಪ್ರಭುತ್ವ, ಜಾತ್ಯತೀತವಾದಿಗಳು ಮುಂತಾದವರು ಯಾರು ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !