ರಕ್ಷಾಬಂಧನ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗಿ ! – ಪ್ರಧಾನಿ ಮೋದಿ

ಪ್ರಧಾನಿ ಮೋದಿಯಿಂದ ಭಾಜಪದ ಮೈತ್ರಿಕೂಟದ ಸಂಸದರಿಗೆ ಮನವಿ

ನವದೆಹೆಲಿ – ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ. ಈ ವಾರ್ತೆಯಲ್ಲಿ, ಪ್ರಧಾನಿ ಮೋದಿಯವರು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರು ತ್ರಿವಳಿ ತಲಾಖ್‌ ನಿಷೇಧ ನಿರ್ಧಾರದ ಬಗ್ಗೆಯೂ ಚರ್ಚೆ ನಡೆಸಿದರು. ಈ ನಿರ್ಧಾರದಿಂದ ಮುಸ್ಲಿಂ ಮಹಿಳೆಯರಿಗೆ ಸಮಾಧಾನ ಸಿಕ್ಕಿದೆ ಎಂದರು. ಕೆಲ ದಿನಗಳ ಹಿಂದೆ ನಡೆದ ಆಕಾಶವಾಣಿಯಲ್ಲಿನ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಮೋದಿಯವರು, ಸರಕಾರದ ಹಜ್‌ ನೀತಿಯಲ್ಲಿ ಬದಲಾವಣೆಯಾದ ನಂತರ ಹಜ್‌ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಈ ವರ್ಷ ೪ ಸಾವಿರ ಮುಸ್ಲಿಂ ಮಹಿಳೆಯರು ʼಮಹ್ರಮ್ʼ (ತಮ್ಮ ಗಂಡ ಅಥವಾ ಪುರುಷ ಸಂಬಂಧಿಕರನ್ನು ಹೊರತುಪಡಿಸಿ) ಹಜ್‌ ಮಾಡಿದರು ಎಂದು ಹೇಳಿದರು.