‘ಎ.ಡಿ.ಎ.ಆರ್.’ ಈ ಸ್ವಯಂಸೇವಕ ಸಂಸ್ಥೆಯ ವರದಿ !
ನವ ದೆಹಲಿ – ‘ಎ.ಡಿ.ಎ.ಆರ್.’ ಈ ಸ್ವಯಂಸೇವಕ ಸಂಸ್ಥೆಯು 28 ರಾಜ್ಯಗಳು ಮತ್ತು 2 ಕೇಂದ್ರಾಳಿತ ಪ್ರದೇಶಗಳಲ್ಲಿನ 4 ಸಾವಿರದ 33 ಪೈಕಿ 4 ಸಾವಿರ 1 ಶಾಸಕರ ಚುನಾವಣೆಯ ಮುನ್ನ ಪ್ರತಿಜ್ಞಾಪತ್ರದ ಆಧಾರದ ಮೇರೆಗೆ ಆಸ್ತಿಯ ವಿಶ್ಲೇಷಣೆ ಮಾಡಿ ವರದಿ ಮಾಡಿದೆ. ಇದರಲ್ಲಿ, ಈ 4 ಸಾವಿರ ಶಾಸಕರ ಬಳಿ ಒಟ್ಟು 54 ಸಾವಿರದ 545 ಕೋಟಿ ರೂಪಾಯಿಗಳಷ್ಟು ಆಸ್ತಿ ಇದೆ. ನಾಗಾಲ್ಯಾಂಡ, ಮಿಝೋರಮ್ ಮತ್ತು ಸಿಕ್ಕಿಮ್ ರಾಜ್ಯಗಳ 2023-24 ಈ ವರ್ಷದ ಒಟ್ಟು ಬಜೆಟ್ ಗಿಂತಲೂ ಈ ಮೊತ್ತ ಹೆಚ್ಚು ಇದೆ. ಒಬ್ಬ ಶಾಸಕರ ಸರಾಸರಿ ಆಸ್ತಿ 13 ಕೋಟಿ 63 ಲಕ್ಷ ರೂಪಾಯಿಗಳಷ್ಟು ಇದೆ. ಈ ಶಾಸಕರು 84 ರಾಜಕೀಯ ಪಕ್ಷಗಳಿಗೆ ಸೇರಿದ್ದು ಅದು ಪಕ್ಷೇತರರನ್ನೂ ಒಳಗೊಂಡಿದೆ.
4001 विधायकों की संपत्ति इन 3 राज्यों के बजट से है ज्यादा, BJP से अमीर हैं कांग्रेस और YSRCP के MLA https://t.co/9q6OgOV9ku
— AajTak (@aajtak) August 2, 2023
ಕರ್ನಾಟಕದಲ್ಲಿನ ಕಾಂಗ್ರೆಸ ಶಾಸಕ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರ ಬಳಿ ಎಲ್ಲಕ್ಕಿಂತ ಹೆಚ್ಚು ಎಂದರೆ 1 ಸಾವಿರದ 413 ಕೋಟಿ ರೂಪಾಯಿಗಳಷ್ಟು ಆಸ್ತಿ ಇದೆ. ಅವರು ದೇಶದಲ್ಲಿ ಎಲ್ಲಕ್ಕಿಂತ ಶ್ರೀಮಂತ ಶಾಸಕರಾಗಿದ್ದಾರೆ. 95 ಪಕ್ಷೇತರ ಶಾಸಕರ ಕಡೆ ಒಟ್ಟು 2 ಸಾವಿರದ 845 ಕೋಟಿ ರೂಪಾಯಿಗಳು ಇವೆ. ಭಾಜಪದ 1 ಸಾವಿರ 356 ಶಾಸಕರ ಆಸ್ತಿ 16 ಸಾವಿರದ 234 ಕೋಟಿ ಮತ್ತು ಕಾಂಗ್ರೆಸನ 719 ಶಾಸಕರ ಆಸ್ತಿ 15 ಸಾವಿರದ 798 ಕೋಟಿ ಇದೆ. ಒಟ್ಟು ಆಸ್ತಿಯಲ್ಲಿ ಈ ಎರಡು ಪ್ರಮುಖ ಪಕ್ಷಗಳ ಶಾಸಕರ ಒಟ್ಟು ಪಾಲು ಶೇ. 58.73 ಇದೆ.
ಸಂಪಾದಕೀಯ ನಿಲುವುಸಾಮಾನ್ಯ ವ್ಯಕ್ತಿ 40 ವರ್ಷ ನೌಕರಿ ಮಾಡಿದನಂತರ ಅಥವಾ ಯಾವುದಾದರೊಂದು ವ್ಯವಸಾಯ ಮಾಡಿ ಎಷ್ಟು ಆಸ್ತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲವೊ, ಅದಕ್ಕಿಂತ ಅನೇಕ ಪಟ್ಟು ಹೆಚ್ಚು ಆಸ್ತಿಗಳನ್ನು ಜನಪ್ರತಿನಿಧಿಗಳು ಕಡಿಮಾ ಕಾರ್ಯಕಾಲದಲ್ಲಿ ಸಂಗ್ರಹಿಸುತ್ತಾರೆ. ಇದರ ಹಿಂದಿನ ಕಾರಣ ಭ್ರಷ್ಟಾಚಾರವೇ ಇದೆ, ಎಂಬುದು ಜನತೆಗೆ ತಿಳಿದಿದೆ ! |