ಕೊಯಿಮತ್ತೂರು (ತಮಿಳುನಾಡು) – ಕಳೆದ ವರ್ಷ ಇಲ್ಲಿ ಒಂದು ಪ್ರಾಚೀನ ದೇವಸ್ಥಾನದ ಬಳಿ ಕಾರಿನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಇದ್ರೀಸ್ ನನ್ನು ಬಂಧಿಸಿದ್ದಾರೆ. ಈ ಸ್ಪೋಟದ ಮುಖ್ಯ ಆರೋಪಿ ಜೇಮ್ಸ್ ಮುಬೀನ್ ಸಾವನ್ನಪ್ಪಿದ್ದಾನೆ. ರಾಷ್ಟ್ರೀಯ ತನಿಖಾ ದಳದ (‘ಎನ್.ಐ.ಎ.’ ನ) ಅಧಿಕಾರಿಗಳು, ಇದ್ರಿಸ್ ತನ್ನ ಸಹಚರರೊಂದಿಗೆ ಕೂಡಿ ದಾಳಿ ಮಾಡುವ ಷಡ್ಯಂತ್ರ ರಚಿಸಿದ್ದನು.
ಇದ್ರಿಸ್ ಮತ್ತು ಮುಬೀನ್ ಇವರಲ್ಲಿ ಒಳ್ಳೆಯ ಸಂಬಂಧವಿತ್ತು. ಭಯೋತ್ಪಾದಕ ದಾಳಿಯ ಷಡ್ಯಂತ್ರದ ಸಭೆಯಲ್ಲಿ ಅವರು ಇತರ ಆರೋಪಿಗಳ ಜೊತೆಗೆ ಸಹಭಾಗಿಯಾಗಿದ್ದರು. ಮುಬೀನ್ ಇಸ್ಲಾಮಿಕ್ ಸ್ಟೇಟ್ ನ ಜಿಹಾದಿ ವಿಚಾರಧಾರೆಯಿಂದ ಪ್ರೇರಿತನಾಗಿದ್ದನು. ಈ ಹಿಂದೆ ಸ್ಪೋಟದ ಪ್ರಕರಣದಲ್ಲಿ ಮಹಮ್ಮದ ಅಸರುದ್ದಿನ್, ಮಹಮ್ಮದ್ ಥಲ್ಲ, ಫಿರೋಜ್, ಮಹಮ್ಮದ್ ರಿಯಾಸ್, ನವಾಸ್ ಮತ್ತು ಅಫ್ಸರ್ ಖಾನ್ ಇವರ ವಿರುದ್ಧ ಆರೋಪ ಪತ್ರ ದಾಖಲಿಸಲಾಗಿದೆ.