ನುಹ್ (ಹರಿಯಾಣ) ನಲ್ಲಿ ಮತಾಂಧ ಮುಸಲ್ಮಾನರ ದಾಳಿಯಲ್ಲಿ 4 ಹಿಂದೂಗಳ ಹತ್ಯೆ !

  • ಮೃತರಲ್ಲಿ ಗೃಹರಕ್ಷಕ ದಳದ 2 ಯೋಧರೂ ಸೇರಿದ್ದಾರೆ

  • ಮತಾಂಧ ಮುಸ್ಲಿಮರಿಂದ ಎಕೆ 47 ರೈಫಲ್ ಬಳಕೆ

  • ನೂಹ್‌ನಲ್ಲಿ 2 ದಿನಗಳ ಕರ್ಫ್ಯೂ, 4 ಜಿಲ್ಲೆಗಳಲ್ಲಿ ಸಂಚಾರ ನಿಷೇಧ ಮತ್ತು ಇಂಟರ್ನೆಟ್ ಸ್ಥಗಿತ

ನುಹ್ (ಹರಿಯಾಣ) – ಜುಲೈ 31 ರಂದು ಇಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಜ್ ಮಂಡಲ್ ಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ನಡೆಸಿದ ದಾಳಿಯಲ್ಲಿ 4 ಹಿಂದೂಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಗೃಹರಕ್ಷಕ ದಳದ ಯೋಧ ನೀರಜ್ ಹಾಗೂ ಇನ್ನೊರ್ವ ಯೋಧ ಸೇರಿದ್ದಾರೆ. ಅವರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಈ ಗಲಭೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ನೌಕರರು ಮತ್ತು ಇತರರು ಗಾಯಗೊಂಡಿದ್ದಾರೆ.

(ಸೌಜನ್ಯ – Hindustan Times)

1. ಇಲ್ಲಿ ಯಾತ್ರೆಯಲ್ಲಿ ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದ್ದ ಹಿಂದೂಗಳ ವಾಹನಗಳನ್ನು ಮತಾಂಧರು ಸುಟ್ಟರು, ಹಾಗೆಯೇ ಇಲ್ಲಿನ ಹಿಂದೂಗಳ ಅಂಗಡಿಗಳಿಗೂ ಬೆಂಕಿ ಹಚ್ಚಿದರು, ಗೋರಖನಾಥ ದೇವಸ್ಥಾನಕ್ಕೆ ಕಲ್ಲು ತೂರಾಟ ನಡೆಸಿ ಬಾಗಿಲು ಮುರಿಯಲು ಯತ್ನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕನನ್ನು ಥಳಿಸಲಾಯಿತು.

2. ಮತಾಂಧರು ಎಕೆ 47 ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಾಳಿ ಆಯೋಜನಾ ಬದ್ಧವಾಗಿ ನಡೆಸಲಾಗಿದೆಯೆಂದು ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದೆ.

3. ಮತಾಂಧರು ಇಲ್ಲಿನ ಧಾನ್ಯದ ಮಾರುಕಟ್ಟೆಯಲ್ಲಿರುವ ಸೈಬರ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ಬಸ್ ಮೂಲಕ ಪೊಲೀಸ್ ಠಾಣೆಯ ಗೋಡೆಯನ್ನು ಕೆಡವಿ ಹಾಕಲಾಗಿದ್ದು, ಪೊಲೀಸ್ ವಾಹನವನ್ನು ಸುಟ್ಟು ಹಾಕಿದ್ದಾರೆ. ಪೊಲೀಸ್ ಠಾಣೆಯಲ್ಲಿನ ದಾಖಲೆ ಪತ್ರಗಳನ್ನು ಸುಟ್ಟು ಹಾಕಲು ಯತ್ನಿಸಿದ್ದಾರೆ.

4. ‘ಹೀರೋ’ ಕಂಪನಿಯ ಬೈಕ್ ನ ಶೋರೂಂ ಮೇಲೆ ದಾಳಿ ನಡೆಸಿ ಅಲ್ಲಿದ್ದ 200 ಬೈಕ್ ಗಳನ್ನು ಕಳವು ಮಾಡಿದ್ದು, ಅಂಗಡಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

5. ಮತಾಂಧ ಮುಸಲ್ಮಾನರು 3 ಕಿಮೀ ರಸ್ತೆಯಲ್ಲಿರುವ ಎಲ್ಲಾ ವಾಹನಗಳನ್ನು ಸುಟ್ಟು ಹಾಕಿದ್ದಾರೆ.

6. ಪ್ರಸ್ತುತ ಇಲ್ಲಿ ಅರೆಸೇನಾ ಪಡೆಗಳ 20 ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ನೂಹ್ ಜಿಲ್ಲೆಯಲ್ಲಿ 2 ದಿನಗಳ ಕಾಲ ಸಂಚಾರ ನಿಷೇಧವನ್ನು ವಿಧಿಸಲಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ನೂಹ್ ಪಕ್ಕದಲ್ಲಿರುವ ರೆವಾರಿ, ಗುರುಗ್ರಾಮ್, ಪಲವಲ ಮತ್ತು ಫರಿದಾಬಾದ್ ಈ ಜಿಲ್ಲೆಗಳಲ್ಲಿ ಸೆಕ್ಷನ್ 144 (ಕರ್ಫ್ಯೂ) ಜಾರಿಗೊಳಿಸಲಾಗಿದೆ. ಆಗಸ್ಟ್ 1 ರಂದು ಈ ಭಾಗದ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು.

7. ನೂಹ್‌ನಲ್ಲಿ 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಈ ಪರೀಕ್ಷೆಗಳು ಆಗಸ್ಟ್ 1 ಮತ್ತು 2 ರಂದು ನಡೆಯಬೇಕಿತ್ತು. ಜಿಲ್ಲಾಧಿಕಾರಿ ಪ್ರಶಾಂತ್ ಪನವಾರ ಶಾಂತಿ ಸ್ಥಾಪಿಸಲು ಎಲ್ಲಾ ಸಮುದಾಯಗಳ ಸಭೆ ಕರೆದಿದ್ದಾರೆ.

ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ! – ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಹರಿಯಾಣದ ಭಾಜಪದ ಮುಖ್ಯಮಂತ್ರಿ ಮನೊಹರ ಲಾಲ್ ಖಟ್ಟರ ಇವರು, ಈ ಘಟನೆ ದುರದೃಷ್ಟಕರವಾಗಿದ್ದೂ. ನಾನು ಎಲ್ಲ ಜನರಿಗೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಲಭೆಯ ಹಿಂದೆ ಷಡ್ಯಂತ್ರ ! – ಹರಿಯಾಣ ಗೃಹ ಸಚಿವ ಅನಿಲ್ ವಿಜ್

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಇವರು ಮಾತನಾಡುತ್ತಾ, ಹಿಂಸಾಚಾರ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ, ಸದ್ಯಕ್ಕೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಗುರಿ ಶಾಂತಿ ಸ್ಥಾಪಿಸುವುದಾಗಿದೆ. ನೂಹ್‌ನಲ್ಲಿ ಉದ್ದೇಶಪೂರ್ವಕ ಹಿಂಸಾಚಾರ ನಡೆಸಲಾಗಿದೆ ಮತ್ತು ಅದರ ಹಿಂದೆ ಷಡ್ಯಂತ್ರವಿದೆಯೆಂದು ಹೇಳಿದ್ದಾರೆ.

ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !

ಮಣಿಪುರದ ಹಿಂಸಾಚಾರದ ಬಗ್ಗೆ 10 ದಿನಗಳ ಕಾಲ ಸಂಸತ್ತಿನ ಕಲಾಪಕ್ಕೆ ಅವಕಾಶ ನೀಡದ ವಿರೋಧ ಪಕ್ಷಗಳು ನೂಹ್‌ನಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಏಕೆ ಬಾಯಿ ತೆರೆಯುವುದಿಲ್ಲ ? ಕೊಲ್ಲುವವರು ಮತಾಂಧ ಮುಸಲ್ಮಾನರು, ಸಾಯುವವರು ಹಿಂದೂಗಳು ಆಗಿರುವುದರಿಂದ ಅವರು ಮೌನ ತಾಳಿದ್ದಾರೆ ಎನ್ನುವ ಸತ್ಯವನ್ನು ಹಿಂದೂಗಳಿಗೆ ಗಮನಕ್ಕೆ ಬರುವ ದಿನವೇ ಸುದಿನ !

ನೂಹ್ ನಲ್ಲಿ ಗಲಭೆ ನಡೆಸಲು ಷಡ್ಯಂತ್ರ ರಚಿಸಲಾಗಿದೆ ಎಂದು ಪೊಲೀಸ್ ಗುಪ್ತಚರ ಇಲಾಖೆಗೆ ಮೊದಲೇ ಏಕೆ ತಿಳಿದಿರಲಿಲ್ಲ ಇದರ ಬಗ್ಗೆಯೂ ವಿಚಾರಣೆ ನಡೆಸುವ ಅವಶ್ಯಕತೆಯಿದೆ !