|
ಗುರುಗ್ರಾಮ್ (ಹರಿಯಾಣ) – ನುಹದಲ್ಲಿ ಮತಾಂಧ ಮುಸ್ಲಲ್ಮಾನರು ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ಮಾಡಿದ ನಂತರ, ನೆರೆಯ ಗುರುಗ್ರಾಮ್ ಜಿಲ್ಲೆಯಲ್ಲಿ ಪ್ರತಿಕ್ರಿಯೆಗಳು ಭುಗಿಲೆದ್ದಿತು. ಇಲ್ಲಿನ ಸೆಕ್ಟರ್ 56 ಮತ್ತು 57 ರಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯನ್ನು 100 ರಿಂದ 200 ಜನರ ಸಮೂಹವು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಇದರಲ್ಲಿ ಮೊಹಮ್ಮದ್ ಸಾದ್ ಸಾವನ್ನಪ್ಪಿದ್ದು, ಖುರ್ಷಿದ್ ಆಲಂ ಗಾಯಗೊಂಡಿದ್ದಾನೆ. ಸಮೂಹವು ಮೊದಲು ಸ್ಥಳದಲ್ಲಿದ್ದ ಪೊಲೀಸ ಪಡೆಯ ಮೇಲೆ ಕಲ್ಲು ತೂರಾಟ ನಡೆಸಿತು. ಬಳಿಕ ಮಸೀದಿ ಮೇಲೆ ದಾಳಿ ನಡೆಸಿತು. ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ಮಾಡಲಾಯಿತು. ಈ ಘಟನೆಯ ನಂತರ, ಪರಿಸರದ ಧಾರ್ಮಿಕ ಸ್ಥಳಗಳ ಸುತ್ತಲೂ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
(ಸೌಜನ್ಯ – Hindustan Times)
ಹರಿಯಾಣ ಅಂಜುಮನ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ ಖಾನ್ ಮಾತನಾಡಿ, ನೂಹ್ ನಲ್ಲಿ ನಡೆದ ಹಿಂಸಾಚಾರದ ನಂತರ ಪೊಲೀಸ್ ಪಡೆ ಸಂಜೆ ಇಲ್ಲಿಗೆ ತಲುಪಿತ್ತು. ಅವರು ಭದ್ರತೆಯ ಭರವಸೆ ನೀಡಿದ್ದರು; ಆದರೆ ಪೊಲೀಸ್ ರಕ್ಷಣೆಯ ನಡುವೆಯೂ ಈ ದಾಳಿ ನಡೆದಿದೆ. (ಪೊಲೀಸ್ ರಕ್ಷಣೆಯ ಹೊರತಾಗಿಯೂ ನೂಹ್‌ನಲ್ಲಿ ಹಿಂದೂ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ನಡೆಯಿತು. ಪೊಲೀಸ್ ರಕ್ಷಣೆ ಎಂದರೆ ಹೆಸರಿಗೆ ಮಾತ್ರ ಆಗಿದೆಯೇ ? – ಸಂಪಾದಕರು)
ಸಂಪಾದಕೀಯ ನಿಲುವುಈ ಘಟನೆಯ ನಂತರ, ಈಗ ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳು, ಮುಖಂಡರು, ಸಂಘಟನೆಗಳು ಪ್ರತಿಭಟನೆಗೆ ಮುಂದಾಗುತ್ತವೆ ! |