ಆಂಧ್ರಪ್ರದೇಶದಲ್ಲಿ ಪುರಸಭೆಯ ಸಭೆಯಲ್ಲಿ ತಾವೇ ಚಪ್ಪಲಿಯಿಂದ ಹೊಡೆದುಕೊಂಡ ಕಾರ್ಪೊರೇಟರ !

ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಕುರಿತು ವಿಷಾದ !

ಅನಕಾಪಲ್ಲೆ (ಆಂಧ್ರಪ್ರದೇಶ) – ನರಸೀಪಟ್ಟಣಂ ಪುರಸಭೆಯ 20ನೇ ವಾರ್ಡ್‌ನ ಕಾರ್ಪೊರೇಟರ ಆಗಿರುವ ಮುಲಾಪರ್ಥಿ ರಾಮರಾಜು ಅವರು ಪುರಸಭೆಯ ಸಭೆಯಲ್ಲಿ ‘ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳುತ್ತಾ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

(ಸೌಜನ್ಯ – TIMES NOW)

ರಾಮರಾಜು ಇವರು ಪತ್ರಿಕಾ ವರದಿಗಾರರೊಂದಿಗೆ ಮಾತನಾಡುತ್ತಾ, ನನಗೆ ಕಾರ್ಪೊರೇಟರ್ ಎಂದು ಆಯ್ಕೆಯಾಗಿ 31 ತಿಂಗಳು ಕಳೆದರೂ ನಾನು ವಾರ್ಡ್‌ನಲ್ಲಿನ ಚರಂಡಿ, ವಿದ್ಯುತ್, ಸ್ವಚ್ಛತೆ, ರಸ್ತೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ನಾನು ಎಲ್ಲಾ ಪರ್ಯಾಯಗಳನ್ನು ಉಪಯೋಗಿಸಿ ನೋಡಿದೆನು; ಆದರೆ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ನನ್ನ ವಾರ್ಡ್ ಅನ್ನು ಸ್ಥಳೀಯ ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ನನ್ನ ವಾರ್ಡಿನ ಒಬ್ಬ ಮತದಾರನಿಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕವನ್ನು ಕೊಡಲು ಸಾಧ್ಯವಾಗಲಿಲ್ಲ. ಮತದಾರರು ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತಾಯಿಸುತ್ತಿದ್ದು, ಅವರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದರಿಂದ ಕೌನ್ಸಿಲ್ ಸಭೆಯಲ್ಲಿಯೇ ಸಾಯುವುದು ಉತ್ತಮ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದು ಮತ್ತು ಪೂರ್ಣಗೊಳಿಸಲಾಗದ ಆಶ್ವಾಸನೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿಸುವುದು ಈ 2 ಕಾರಣಗಳಿಂದ ಜನಪ್ರತಿನಿಧಿಗಳು ತಾವೇ ಚಪ್ಪಲಿಗಳೀಂದ ಹೊಡೆದುಕೊಳ್ಳಲು ನಿರ್ಧರಿಸಿದರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಜನರಿಗೆ ಅನಿಸುತ್ತದೆ !