#Exclusive : ದೀಪಾವಳಿಯಂದು ಸಿಡಿಸಲಾಗುವ ಪಟಾಕಿಗಳು ಪರಿಸರಕ್ಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆಯಂತೆ ! – ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ

ಮಸೀದಿಗಳ ಮೇಲಿನ ಭೋಂಗಾಗಳ ಶಬ್ದಮಾಲಿನ್ಯದ ವಿಷಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಕಿವುಡುತನ !

ಮುಂಬಯಿ, ಜುಲೈ 30 (ವಾರ್ತೆ.) – ಮಸೀದಿಗಳ ಮೇಲಿನ ಭೋಂಗಾಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಮುಂಬೈನಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ದೂರುಗಳನ್ನು ಸಲ್ಲಿಸಲಾಗಿದೆ. ಈ ದೂರುಗಳ ಬಗ್ಗೆ ಪೊಲೀಸರು ದುರ್ಲಕ್ಷಿಸುತ್ತಿರುವುದರಿಂದ ಇಂದಿಗೂ ಈ ಬಗ್ಗೆ ಮುಂಬೈ ಉಚ್ಚ ನ್ಯಾಯಾಲಯ ಹಾಗೂ ಸತ್ರ ನ್ಯಾಯಾಲಯದಲ್ಲಿ ಖಟ್ಲೆಗಳು ನಡೆಯುತ್ತಿವೆ. ಹೀಗಿರುವಾಗಲೂ ಪೊಲೀಸರೊಂದಿಗೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮಸೀದಿಗಳ ಮೇಲಿನ ಭೋಂಗಾಗಳ ಮೇಲಿನ ಶಬ್ದ ಮಾಲಿನ್ಯವನ್ನು ದುರ್ಲಕ್ಷಿಸಿ `ದೀಪಾವಳಿಯ ಸಮಯದಲ್ಲಿ ಸಿಡಿಸಲಾಗುವ ಪಟಾಕಿಗಳು ಮಹಾರಾಷ್ಟ್ರದಲ್ಲಿನ ಪರಿಸರಕ್ಕೆ ಎಲ್ಲಕ್ಕಿಂತ ಗಂಭೀರ ಸಮಸ್ಯೆಯಾಗಿದೆ’, ಎಂದು ಹೇಳಿದೆ. ಮಹಾರಾಷ್ಟ್ರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇತ್ತೀಚೆಗೆ ಪ್ರಕಟಿಸಿರುವ 2021-22 ರ ವಾರ್ಷಿಕ ವರದಿಯಲ್ಲಿ ಇದನ್ನು ನಮೋದಿಸಲಾಗಿದೆ.

ಮಹಾರಾಷ್ಟ್ರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2021-22 ರ ಹಿಂದೂ ವಿರೋಧಿ ವಾರ್ಷಿಕ ವರದಿ !

1. ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಫೆಬ್ರುವರಿ 21 ರಿಂದ 22 ರವರೆಗೆ ಮಹಾರಾಷ್ಟ್ರದಲ್ಲಿನ ಒಟ್ಟೂ 27 ಮಹಾನಗರಪಾಲಿಕೆಗಳ ನಿವಾಸಿ, ವ್ಯಾವಸಾಯಿಕ ಹಾಗೂ ಶಾಂತ ಕ್ಷೇತ್ರದಲ್ಲಿ ಒಟ್ಟೂ 104 ಕಡೆಗಳಲ್ಲಿ ಸುಮಾರು 24 ಘಂಟೆಗಳ ವರೆಗೆ ಧ್ವನಿ ಪರೀಕ್ಷೆ ನಡೆಸಿತು. ಈ ವರದಿಯಲ್ಲಿ ಅದರ ನೋಂದಣಿಯನ್ನು ನೀಡಲಾಗಿದೆ.

2. ಮಾಲಿನ್ಯ ನಿಯಂತ್ರಣ ಮಂಡಳಿಯು ಮುಂಬೈನಲ್ಲಿ ರಸ್ತೆಯ ಮೇಲಿನ ಟ್ರಾಫಿಕ್ ಹಾಗೂ ಮಳೆಯಿಂದಾಗಿ, ನವಿ ಮುಂಬೈನಲ್ಲಿ ಜನಜಂಗುಳಿ ಹಾಗೂ ವಾಹನಗಳ `ಹಾರ್ನ್’ನಿಂದಾಗಿ ಶಬ್ದಮಾಲಿನ್ಯವಾಗುತ್ತಿರುವುದಾಗಿ ಹೇಳಿದೆ.

3. ಆಗಸ್ಟ್ 28, 2020 ರಂದು ಗಣೇಶೋತ್ಸವದ ಸಮಯದಲ್ಲಿ ಧ್ವನಿಯ ಮಟ್ಟವು ಹೆಚ್ಚಿರುವುದಾಗಿ ಒತ್ತುಕೊಟ್ಟು ಹೇಳಲಾಗಿದೆ. ಆದರೆ 27 ಮಹಾನಗರಪಾಲಿಕೆಯ ಕ್ಷೇತ್ರದಲ್ಲಿನ ಒಂದೇ ಒಂದು ಮಸೀದಿಯ ಮೇಲಿನ ಭೋಂಗಾಗಳಿಂದ ಶಬ್ದಮಾಲಿನ್ಯ ಆಗುತ್ತಿರುವ ಬಗ್ಗೆ ನಮೋದಿಸಲಾಗಿಲ್ಲ.

4. ವಿಶೇಷವೆಂದರೆ ಮುಂಬೈ ಹಾಗೂ ನವಿ ಮುಂಬೈ ನಗರಗಳಲ್ಲಿನ ಶಬ್ದಮಾಲಿನ್ಯದ ಬಗೆಗಿನ ಖಟ್ಲೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ ಹಾಗೂ ಸ್ವತಃ ನ್ಯಾಯಾಲಯವು ಮಸೀದಿಗಳ ಮೇಲಿನ ಭೋಂಗಾಗಳಿಂದ ಶಬ್ದ ಮಾಲಿನ್ಯವಾಗುತ್ತಿರುವುದನ್ನು ಸ್ವೀಕರಿಸಿ ಅದರ ಮೇಲೆ ಕಾರ್ಯಾಚರಣೆ ಮಾಡಬೇಕಾಗಿ ಪೊಲೀಸರಿಗೆ ಆದೇಶಿಸಿದೆ. ಆದರೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾರ್ಷಿಕ ವರದಿಯಲ್ಲಿ ಆದರ ಸಾಮಾನ್ಯ ಉಲ್ಲೇಖವೂ ಇಲ್ಲ.

ಸಂಪಾದಕೀಯ ನಿಲುವು

ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಶಬ್ದಮಾಲಿನ್ಯವನ್ನು ಅಳೆಯುವುದು ಹಾಗೂ ಮಸೀದಿಗಳಿಂದ ನಿಯಮಿತವಾಗಿ ನಡೆಸಲಾಗುವ ಭೋಂಗಾಗಳ ಕಡೆಗಿನ ದುರ್ಲಕ್ಷವು ಬಹಿರಂಗ ಪಕ್ಷಪಾತವಾಗಿದೆ. ಸರಕಾರವು ಸಂಭಂಧಿತರ ಮೇಲೆ ಕಠೋರ ಕಾರ್ಯಚರಣೆಯನ್ನು ಮಾಡಬೇಕು.