ಕೆಲಸಮಯ ಕಾರ್ಯಕಲಾಪ ಸ್ಥಗಿತ !
ನವದೆಹಲಿ – ಸಂಸತ್ತಿನ ಮುಂಗಾರು ಅಧಿವೇಶನದ ಸತತ 8 ನೇ ದಿನವೂ ವಿರೋಧ ಪಕ್ಷಗಳು ಮಣಿಪುರದ ಹಿಂಸಾಚಾರದ ಬಗ್ಗೆ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಾರ್ಯಕಲಾಪವನ್ನು ಮಧ್ಯಾಹ್ನ 2 ರವರೆಗೆ ಮತ್ತು ರಾಜ್ಯಸಭೆಯ ಕಾರ್ಯಕಲಾಪವನ್ನು ಮಧ್ಯಾಹ್ನ 12 ರವರೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಮಣಿಪುರದ ವಿಷಯವನ್ನು ಪ್ರಸ್ತಾಪಿಸಿದಾಗ, ಭಾಜಪದ ಸದನ ನಾಯಕ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಇವರು ಮಾತನಾಡಿ, ನಾವು ಇಂದೇ ಈ ವಿಷಯದ ಕುರಿತು ಚರ್ಚಿಸಲು ಸಿದ್ಧರಿದ್ದೇವೆ; ಆದರೆ ವಿರೋಧಿಗಳು ಚರ್ಚೆಯಿಂದ ದೂರ ಓಡುತ್ತಿದ್ದಾರೆ ಎಂದು ಹೇಳಿದರು.
(ಸೌಜನ್ಯ – Zee News)
ಸಂಪಾದಕೀಯ ನಿಲುವುನಿರಂತರವಾಗಿ ಸಂಸತ್ತಿನಲ್ಲಿ ಗದ್ದಲ ನಡೆಯುತ್ತಿರುವುದರಿಂದ ಕಾರ್ಯಕಲಾಪ ನಡೆಯದಿದ್ದರೆ ಮತ್ತು ಗದ್ದಲ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಸಂಸತ್ತನ್ನು ಮುಂದುವರಿಸಬೇಕೇ ? ಎಂದು ಈಗ ಯೋಚಿಸುವ ಸಮಯ ಬಂದಿದೆ ! |