ಈಗಿನ ಭಾರತದ ಕ್ರಿಕೆಟ್ ಆಟಗಾರರಿಗೆ ಹಣದಿಂದ ಅಹಂಕಾರ ಬಂದಿದೆ ! – ಹಿರಿಯ ಕ್ರಿಕೆಟ್ ಪಟು ಕಪಿಲ ದೇವ

ಹಿರಿಯ ಕ್ರಿಕೆಟ್ ಪಟು ಕಪಿಲ ದೇವ ಇವರಿಂದ ತಪರಾಕಿ

ನವ ದೆಹಲಿ – ಭಾರತದ ಹಿರಿಯ ಮಾಜಿ ಕ್ರಿಕೆಟ ಪಟು ಕಪಿಲ ದೇವ ಇವರು ಇಂದಿನ ಕ್ರಿಕೆಟ ಆಟಗಾರರನ್ನು ಟೀಕಿಸಿದ್ದಾರೆ. ‘ಇಂಡಿಯನ್ ಎಕ್ಸ್ಪ್ರೆಸ್’ ದೈನಿಕದ ‘ವೆಕ್ ಕಪ್ ಇಂಡಿಯಾ’ದ ಸಂದರ್ಶನದಲ್ಲಿ ಕಪಿಲ್ ದೇವ ಇವರು, ಕೆಲವು ಸಮಯ ಹೆಚ್ಚು ಹಣ ಇರುವುದರಿಂದ ಅಹಂಕಾರ ನಿರ್ಮಾಣವಾಗುತ್ತದೆ. ಈಗಿನ ಯುಗದಲ್ಲಿ ಆಟಗಾರರು ಹಣದ ಗರ್ವದಿಂದ ಎಷ್ಟು ಮುಳುಗಿದ್ದಾರೆ ಎಂದರೆ ಅವರ ಮುಂದೆ ದೇಶ ಮುಂತಾದ ಏನು ಕಾಣುವುದಿಲ್ಲ. ಅವರಿಗೆ ಭಾರತ ಗೆದ್ದರೆಷ್ಟು ಅಥವಾ ಸೋತರೆಷ್ಟು, ಏನೂ ವ್ಯತ್ಯಾಸವಾಗುವುದಿಲ್ಲ. ‘ಈ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಹಾಗಾದರೆ ಮತ್ತೆ ಮುಂದಿನದು ಇದೆ’, ಈ ಮಾನಸಿಕತೆಯಲ್ಲಿ ಅವರು ಆಟ ಆಡುತ್ತಿದ್ದಾರೆ; ಕಾರಣ ದೊಡ್ಡ ಸ್ಪರ್ಧೆಯ ನಂತರ ಕೂಡ ಯಾವುದೇ ಆಟಗಾರನಿಗೆ ಜವಾಬ್ದಾರಿ ನಿಶ್ಚಿತಗೊಳಿಸುತ್ತಿಲ್ಲ. ಅವರಿಗೆ, ತಂಡದಿಂದ ಯಾರನ್ನು ಕೂಡ ಹೊರ ಹಾಕಲು ಸಾಧ್ಯವಿಲ್ಲ ಮತ್ತು ಹೊರ ಹೋದರೆ ಐಪಿಎಲ್ ಸ್ಪರ್ಧೆ ಇದ್ದೆ ಇದೆ ಎಂಬುದು ತಿಳಿದಿದೆ. ಎಂದು ಹೇಳಿದರು.

ಈಗಿನ ಆಟಗಾರರಿಗೆ, ನಮ್ಮಿಂದ ಎಂದಿಗೂ ತಪ್ಪು ಆಗುವುಲ್ಲ’ ಎಂದು ಅನಿಸುತ್ತದೆ !

ಕಪಿಲ ದೇವ ಮಾತು ಮುಂದುವರೆಸುತ್ತಾ, ಕೆಲವು ಹಿರಿಯ ಆಟಗಾರರು ಅಥವಾ ಯುವ ಆಟಗಾರರು ಮಾಜಿ ಆಟಗಾರರ ಸಲಹೆ ಪಡೆಯುತ್ತಿಲ್ಲ ಮತ್ತು ಆಡುವಾಗ ಅದೇ ತಪ್ಪು ಮತ್ತೆ ಮತ್ತೆ ಮಾಡುತ್ತಾರೆ. ಈ ಆಟಗಾರರ ಒಳ್ಳೆಯ ವಿಷಯ ಏನೆಂದರೆ, ಅವರಿಗೆ ಆತ್ಮವಿಶ್ವಾಸ ಹೆಚ್ಚು ಇದೆ. ಅವರ ನಕಾರಾತ್ಮಕ ವಿಷಯ ಎಂದರೆ ಅವರಿಗೆ, ನನಗೆ ಎಲ್ಲವೂ ತಿಳಿದಿದೆ ಎಂದು ಅನಿಸುತ್ತದೆ. ನಮ್ಮಿಂದ ಎಂದಿಗೂ ತಪ್ಪು ಆಗುವುದಿಲ್ಲ’. ಎಂದು ಕೂಡ ಅವರಿಗೆ ಅನಿಸುತ್ತದೆ. ಹಾಗೂ ‘ನಾನು ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಹೇಗೆ ಆಡಬಹುದು ?’ ಎಂದು ಅವರಿಗೆ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಸುನಿಲ್ ಗಾವಸ್ಕರ್ ಇವರ ಸಲಹೆ ಏಕೆ ಪಡೆಯುವುದಿಲ್ಲ ?

ಕಪಿಲ ದೇವ ಇವರು ಸಲಹೆ ಪಡೆಯುವುದರ ಬಗ್ಗೆ, ಈ ಆಟಗಾರರಿಗೆ ಯಾರನ್ನು ಕೇಳಬೇಕು ಎಂದು ಅನಿಸುವುದಿಲ್ಲ. ನಮ್ಮ ಪೀಳಿಗೆ ಮತ್ತು ಈಗಿನ ಪೀಳಿಗೆಯಲ್ಲಿ ಇದೆ ವ್ಯತ್ಯಾಸವಿದೆ. ನನಗೆ ಅನಿಸುತ್ತದೆ, ಇಂತಹ ಬಹಳಷ್ಟು ಕ್ರಿಕೆಟಪಟುಗಳಿದ್ದಾರೆ ಅವರಿಗೆ ಸಹಾಯದ ಅವಶ್ಯಕತೆ ಇದೆ. ಸುನಿಲ್ ಗಾವಸ್ಕರ ಇವರಂತಹ ನಿಪುಣ ಆಟಗಾರ ನಿಮ್ಮ ಹತ್ತಿರ ಇರುವಾಗ ನೀವು ಅವರ ಜೊತೆ ಏಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ? ಎಲ್ಲಿ ನಿಮ್ಮ ಅಹಂಕಾರ ಅಡ್ಡಿ ಬರುತ್ತಿದೆ ?

ಹಿಂದಿನ ಆಟಗಾರರು ಸಲಹೆ ಪಡೆಯುತ್ತಿದ್ದರು ! – ಸುನಿಲ ಗಾವಸ್ಕರ

ಮಾಜಿ ಕ್ರಿಕೆಟ್ ಪಟು ಸುನೀಲ ಗಾವಸ್ಕರ ಇವರು ಇತ್ತೀಚಿನ ಸಂದರ್ಶನದಲ್ಲಿ, ರಾಹುಲ ದ್ರಾವಿಡ, ಸಚಿನ ತೆಂಡೂಲ್ಕರ, ವಿವಿಎಸ್. ಲಕ್ಷ್ಮಣ, ಸೌರವ ಗಂಗೂಲಿ, ಇವರಂತಹ ನಿಪುಣ ಆಟಗಾರರು ನನ್ನ ಹತ್ತಿರ ಯಾವಾಗಲೂ ಬರುತ್ತಿದ್ದರು. ಅವರು ನನ್ನಿಂದ ವಿಶಿಷ್ಟ ಸಮಸ್ಯೆಗಳನ್ನು ಚರ್ಚಿಸುವರು ಮತ್ತು ನಾನು ಅವರಿಗೆ ‘ಅವರು ಎಲ್ಲಿ ತಪ್ಪುತ್ತಾರೆ’ ಅದನ್ನು ಹೇಳುತ್ತಿದ್ದೆ. ನನಗೆ ಇದರಲ್ಲಿ ಯಾವುದೇ ಅಹಂಕಾರ ಇರಲಿಲ್ಲ ಅಥವಾ ಅವರಿಗೂ ಸಂಕೋಚ ಅನಿಸುತ್ತಿರಲಿಲ್ಲ. ನಾನು ಈಗಿನ ಆಟಗಾರರ ಜೊತೆ ಹೋಗಿ ಮಾತನಾಡಬಹುದು; ಆದರೆ ಈಗ ಭಾರತೀಯ ತಂಡಕ್ಕಾಗಿ ರಾಹುಲ ದ್ರಾವಿಡ ಮತ್ತು ವಿಕ್ರಂ ರಾಥೋಡ ಇವರಿಬ್ಬರೂ ಪ್ರಶಿಕ್ಷಕರು ಇರುವುದರಿಂದ ಆಟಗಾರರಿಗೆ ಹೆಚ್ಚಿನ ಮಾಹಿತಿ ನೀಡಿ ಗೊಂದಲಕ್ಕೆ ಸಿಲುಕಿಸಲು ಇಚ್ಚಿಸುವುದಿಲ್ಲ ಆದ್ದರಿಂದ ನಾನು ಅವರನ್ನು ಭೇಟಿ ಮಾಡುವುದಿಲ್ಲ ಎಂದು ಹೇಳಿದರು.