ಕಾಂಗ್ರೆಸ್ಸಿನ ಮುಸಲ್ಮಾನ ನಾಯಕರು ತಮ್ಮ ಪಕ್ಷದ ನಾಯಕ ಸಚಿನ್ ಪೈಲಟ್ ಇವರಿಗೆ ಪ್ರಶ್ನೆ !

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಜೈಪುರ ಬಾಂಬ್ ಸ್ಪೋಟದಲ್ಲಿನ ಮುಸಲ್ಮಾನ ಆರೋಪಿಯ ಬಿಡುಗಡೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ ಪ್ರಕರಣ

ಜೈಪುರ (ರಾಜಸ್ಥಾನ) – ಇಲ್ಲಿ ಮೇ ೧೮, ೨೦೦೮ ರಂದು 8 ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಇದರಲ್ಲಿ ೭೧ ಜನರು ಸಾವನ್ನಪ್ಪಿದ್ದರು ಹಾಗೂ ೧೮೫ ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ೨೦೧೯ ರಲ್ಲಿ ಜೈಪುರ ಜಿಲ್ಲಾ ನ್ಯಾಯಾಲಯವು ೪ ಜನರನ್ನು ತಪ್ಪಿತಸ್ಥರನ್ನಾಗಿ ನಿರ್ಧರಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದಕ್ಕೆ ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಮನವಿ ನೀಡಿದ ನಂತರ ಮಾರ್ಚ್ ೨೯, ೨೦೨೩ ರಲ್ಲಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಇದಕ್ಕೆ ಸಂತ್ರಸ್ತರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ನೀಡಿದ್ದಾರೆ. ಈ ಪ್ರಕರಣದಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಟೀಕೆಸಿದ ಮೇಲೆ ಸರಕಾರದಿಂದ ೪೦ ದಿನಗಳ ನಂತರ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆವಾಹನೆ ನೀಡಿದೆ. ಸರಕಾರದ ಈ ಹೆಜ್ಜೆ ರಾಜ್ಯದಲ್ಲಿನ ಮುಸಲ್ಮಾನರಿಗೆ ಒಪ್ಪಿಗೆ ಆಗಿಲ್ಲ. ಈ ಬಗ್ಗೆ ಸ್ವತಃ ಕಾಂಗ್ರೆಸ್ಸಿನ ಪದಾಧಿಕಾರಿಗಳು ರಾಜ್ಯದ ಕಾಂಗ್ರೆಸ್ಸಿನ ನಾಯಕ ಮತ್ತು ಸಚಿವ ಸಚಿನ್ ಪೈಲಟ್ ಇವರಿಗೆ ಪ್ರಶ್ನೆ ಕೇಳಿದ್ದಾರೆ. ಇದರ ವಿಡಿಯೋವನ್ನು ಈ ಮುಸಲ್ಮಾನ್ ಪದಾಧಿಕಾರಿಗಳು ಅವರ ಫೇಸ್ಬುಕ್ ಖಾತೆಯಲ್ಲಿ ಪ್ರಸಾರ ಮಾಡಿದ್ದಾರೆ.

ರಾಜಸ್ಥಾನದಲ್ಲಿ ವಿಧಾನಸಭೆಯ ಚುನಾವಣೆಯಾಗುವ ಸಾಧ್ಯತೆ ಇರುವುದರಿಂದ ಸಚಿನ್ ಪೈಲೆಟ್ ಇವರು ಟೋಂಕ ಇಲ್ಲಿಯ ಮತದಾರ ಕ್ಷೇತ್ರಕ್ಕೆ ಹೋಗಿರುವಾಗ ಅಲ್ಲಿ ಅವರ ವಾಹನ ತಡೆದು ಜನರು ಅವರಿಗೆ ತಮ್ಮ ಸಮಸ್ಯೆ ಹೇಳಿದರು. ಆಗ ಅಲ್ಲಿಯ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ವಿಭಾಗದ ಪ್ರದೇಶ ಕಾರ್ಯದರ್ಶಿ ಮೊಹಸಿನ್ ರಾಶಿದ ಇವರು ಸಚಿನ್ ಪೈಲಟ್ ಇವರಿಗೆ ‘ಜೈಪುರ ಬಾಂಬ್ ಸ್ಪೋಟದಲ್ಲಿನ ಆರೋಪಿಯ ಬಿಡುಗಡೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರದಿಂದ ಮನವಿ ಏಕೆ ನೀಡಿದ್ದಾರೆ ?’, ಎಂದು ಪ್ರಶ್ನೆ ಕೇಳಿದರು. ರಾಶಿದ್, ‘ಸರಕಾರದ ಈ ನಿಲುವಿನಿಂದ ಮುಸಲ್ಮಾನರು ಅಸಮಧಾನಗೊಂಡಿದ್ದಾರೆ,’ ಎಂದು ಹೇಳಿದರು. ಇದರ ಬಗ್ಗೆ ಸಚಿನ ಪೈಲೆಟ್ ಇವರು ರಾಶಿದ ಇವರಿಗೆ, ‘ಧರ್ಮದ ಬಗ್ಗೆ ಮಾತನಾಡದೆ ಪಕ್ಷದ ಕೆಲಸ ಮಾಡಿರಿ’, ಎಂದು ಸಲಹೆ ನೀಡಿದರು. ಇದರ ನಂತರ ರಾಶಿದ ಇವರು ಕನ್ಹಯ್ಶಾಲಾಲ್ ಇವರ ಶಿರಶ್ಚೇಧ ನಡೆಸಿರುವ ನಾಸಿರ್ ಮತ್ತು ಜುನೈದ ಈ ಆರೋಪಿಯ ಸಂದರ್ಭದಲ್ಲಿ ಕೂಡ ಪೈಲಟ್ ಏನು ಮಾತನಾಡಿರಲಿಲ್ಲ, ಇದರ ಬಗ್ಗೆ ಕೂಡ ಪ್ರಶ್ನೆ ಕೇಳಿದರು. ಆ ಸಮಯದಲ್ಲಿ ಸಚಿನ ಪೈಲೆಟ್ ಏನನ್ನು ಮಾತನಾಡದೆ ಕಾರಲ್ಲಿ ಕುಳಿತು ಹೊರಟು ಹೋದರು. ಈ ಘಟನೆಯ ವಿಡಿಯೋ ರಾಶಿದ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನ್ ಮೊದಲು ಮುಸಲ್ಮಾನರಾಗಿರುತ್ತಾರೆ ನಂತರ ಬೇರೆ ಆಗಿರುತ್ತಾರೆ, ಇದು ಇಂತಹ ಘಟನೆಗಳಿಂದ ಪದೇ ಪದೇ ಸ್ಪಷ್ಟವಾಗುತ್ತದೆ !

ದೇಶದಲ್ಲಿ ಜಿಹಾದಿ ಭಯೋತ್ಪಾದಕರು ರಕ್ತಪಾತ ನಡೆಸಿದ ನಂತರ ಮುಸಲ್ಮಾನರ ನಾಯಕರು, ಸಂಘಟನೆ ಮತ್ತು ಧರ್ಮಗುರುಗಳು ಎಂದು ಅದನ್ನು ನಿಷೇಧಿಸುತ್ತಿರುವುದು ಕಂಡುಬಂದಿಲ್ಲ; ಆದರೆ ಇದೇ ಪ್ರಕರಣ ಜಿಹಾದಿ ಮುಸಲ್ಮಾನರನ್ನು ಬಂಧಿಸಿದರೆ ಇದೇ ಜನರು ಬಂಧನವನ್ನು ವಿರೋಧಿಸಿ ರಸ್ತೆಗಿಳಿಯುತ್ತಾರೆ ಇದನ್ನು ತಿಳಿದುಕೊಳ್ಳಿ !