ದೆಹಲಿಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

  • ಮೆರವಣಿಗೆ ಬೇರೆ ಮಾರ್ಗದಿಂದ ಒಯ್ಯುವ ಪ್ರಯತ್ನಕ್ಕೆ ಪೊಲೀಸರು ವಿರೋಧಿಸಿದ್ದರಿಂದ ಹಿಂಸಾಚಾರ

  • ಬೃಹತ್ಪ್ರಮಾಣದಲ್ಲಿ ವಾಹನಗಳ ದ್ವಂಸ

  • ಹಿಂಸಾಚಾರದಲ್ಲಿ ೬ ಪೊಲೀಸರ ಸಹಿತ ೧೨ ಜನರಿಗೆ ಗಾಯ

  • ಮತಾಂಧ ಮುಸಲ್ಮಾನರಿಂದ ಖಡ್ಗ ಪ್ರದರ್ಶನ

ನವ ದೆಹಲಿ – ದೆಹಲಿಯ ನಾಂಗಲೋಯಿ ಪ್ರದೇಶದಲ್ಲಿ ಜುಲೈ ೨೯ ರಂದು ಸಂಜೆ ಮೊಹರಂ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರು ನಡೆಸಿರುವ ಹಿಂಸಾಚಾರದಲ್ಲಿ ೬ ಪೊಲೀಸರ ಸಹಿತ ೧೨ ಜನರು ಗಾಯಗೊಂಡರು. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೈಕು, ಕಾರು, ಬಸ್ಸು ಮುಂತಾದ ವಾಹನಗಳನ್ನು ಧ್ವಂಸ ಮಾಡಲಾಯಿತು. ಮೆರವಣಿಗೆಯಲ್ಲಿ ಸಹಭಾಗಿಯಾಗಿರುವ ಮುಸಲ್ಮಾನರು ಖಡ್ಗ ತೋರಿಸುತ್ತೊರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಪೊಲೀಸ ಉಪಾಯುಕ್ತ ಹರೇಂದ್ರ ಸಿಂಹ ಇವರು, ಮೆರವಣಿಗೆಯಲ್ಲಿ ೧೦ ಸಾವಿರಗಿಂತಲೂ ಹೆಚ್ಚಿನ ಜನರು ಸಹಭಾಗಿಯಾಗಿದ್ದರು. ಆದ್ದರಿಂದ ರೋಹತಕ್ ಮಾರ್ಗದಲ್ಲಿನ ಕೆಲವು ಜನರು ಮೆರವಣಿಗೆ ಆಯೋಜಿಸಿರುವ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಒಯ್ಯುವ ಪ್ರಯತ್ನ ಮಾಡಿದರು. ಇದಕ್ಕೆ ಪೊಲೀಸರು ನಿರಾಕರಿಸಿದ್ದರಿಂದ ಕೆಲವು ಜನರು ಆಕ್ರೋಶಗೊಂಡರು. ಅವರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ರಸ್ತೆಯಲ್ಲಿ ಹೋಗುವ ಜನರನ್ನು ಕೂಡ ಗುರಿ ಮಾಡಲಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದರು ಮತ್ತು ತಕ್ಷಣ ವ್ಯವಸ್ಥೆ ಮೊದಲಿನಂತೆ ಆಯಿತು. ಪರಿಸರದಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಆರೋಪಿಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ, ಎಂದು ಅಪಪ್ರಚಾರ ಮಾಡುವ ದೇಶದಲ್ಲಿನ ಕಪಟ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರ ರಾಜಕೀಯ ಪಕ್ಷ, ನಾಯಕರು, ಸಾಹಿತಿಗಳು, ವಿಚಾರವಂತರು ಎಷ್ಟು ಸುಳ್ಳಾಗಿದ್ದಾರೆ, ಎಂಬುದು ಈ ಘಟನೆಯಿಂದ ಬೆಳಕಿಗೆ ಬರುತ್ತದೆ ! ಇದರ ಬಗ್ಗೆ ಈ ಜನರು ಏನೂ ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ !

ಪೊಲೀಸರು ಈಗ ಹಿಂಸಾಚಾರಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅವರ ಕಾನೂನ ಬಾಹಿರ ಮನೆಗಳನ್ನು ನೆಲೆಸಮ ಮಾಡುಲು ಆರಂಭಿಸಿದರೆ. ಇದೇ ಜಾತ್ಯತೀತರು ಅದನ್ನು ವಿರೋಧಿಸಲು ಮುಂದೆ ಬರುತ್ತಾರೆ !

ಮೆರವಣಿಗೆಯಲ್ಲಿ ಖಡ್ಗ ಪ್ರದರ್ಶೀಸಲಾಗುತ್ತದೆ, ಇದು ಪೊಲೀಸರಿಗೆ ಮೊದಲೇ ಹೇಗೆ ತಿಳಿಯಲಿಲ್ಲ ? ಈ ಖಡ್ಗದಿಂದ ಪೊಲೀಸರ ಮೇಲೆ ದಾಳಿ ನಡೆದಿದೆ, ಆಗ ಇದಕ್ಕೆ ಯಾರು ಹೊಣೆ ?