ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ಯಹೂದಿಗಳ ಪ್ರಾರ್ಥನಾ ಸ್ಥಳ ‘ಛಾಬಡ ಹೌಸ್’ ನ ಫೋಟೋಗಳು ಪತ್ತೆ!

‘ಛಾಬಡ ಹೌಸ್’ನ ಭದ್ರತೆ ಹೆಚ್ಚಳ!

ಮುಂಬಯಿ – ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು ಓರ್ವ ಶಂಕಿತ ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ‘ಛಾಬಡ ಹೌಸ್’ ನ ಛಾಯಾಚಿತ್ರಗಳು ಪತ್ತೆಯಾಗಿವೆ. ಆದ್ದರಿಂದ ಭಯೋತ್ಪಾದಕ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ರಾಜಸ್ಥಾನದಿಂದ ಬಂಧಿಸಲಾಯಿತು. ಇದರ ನಂತರ, ಛಾಬಡ್ ಹೌಸ್‌ನ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಅಲ್ಲಿ ‘ಮಾಕ್ ಡ್ರಿಲ್’ (ಸಂಕಟವನ್ನು ಎದುರಿಸಲು ಪ್ರಾತ್ಯಕ್ಷಿಕೆ) ನಡೆಸಲಾಯಿತು. ಛಾಬಡ ಹೌಸ್ ಈಗಾಗಲೇ ಉನ್ನತ ಮಟ್ಟದ ಭದ್ರತೆಯನ್ನು ಹೊಂದಿದೆ.

(ಸೌಜನ್ಯ – Zee News)

ಸದ್ಯ ಈ ಇಬ್ಬರು ಉಗ್ರರು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ವಶದಲ್ಲಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯೂ ಅವರ ಮೇಲೆ 5 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿತ್ತು. ಇಬ್ಬರೂ ಆರೋಪಿಗಳು ‘ಅಲ್ ಸುಫಾ’ ಎಂಬ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದವರು ಎಂದು ತನಿಖೆಯಿಂದ ತಿಳಿದುಬಂದಿದೆ.