ಬೇಗುಸರಾಯ್‌ ( ಬಿಹಾರ) ದಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ !

  • ಶವವನ್ನು ಮನೆಯ ಕೆಳಗೆ ಹೂಳಿದ !

  • ಪೊಲೀಸರು ಆರೋಪಿಯನ್ನು ಹಿಡಿದು ಬಿಡುಗಡೆ ಮಾಡಿದ್ದರು!

ಬೇಗುಸರಾಯ್‌ (ಬಿಹಾರ) – ಇಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಕೆಯ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆಕೆಯನ್ನು ಕೊಂದು ಶವವನ್ನು ಮನೆಯ ಕೇಳಗೆ ಹೂತು ಹಾಕಿದ್ದಾಳೆ. ಜುಲೈ ೨೪ರಿಂದ ಬಾಲಕಿ ಕಾಣೆಯಾಗಿದ್ದ ಕಾರಣ ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ. ವಿಶೇಷವೆಂದರೆ, ಪೊಲೀಸರು ಆರೋಪಿಯನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಪ್ರಕರಣ ವ್ಯಾಪ್ತಿ ಹೆಚ್ಚಾದ ನಂತರ ಮತ್ತು ಜನರ ವಿರೋಧ ಪ್ರಾರಂಭವಾದ ನಂತರ ಅವನನ್ನು ಮತ್ತೆ ಬಂಧಿಸಲಾಯಿತು.

ನಿತೀಶ್‌ ಕುಮಾರ್‌ ಸರಕಾರ ಬಿಹಾರ ರಾಜ್ಯವನ್ನು ನರಕವನ್ನಾಗಿಸಿದೆ ! – ಬಿಜೆಪಿ

ಈ ಘಟನೆಯ ಬಗ್ಗೆ ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಗಿರಿರಾಜ್‌ ಸಿಂಗ್‌ ಇವರು ಬಿಹಾರ ಸರಕಾರವನ್ನು ಟೀಕಿಸಿದ್ದಾರೆ. ಅವರು, ಬಿಹಾರ ರಾಜ್ಯವನ್ನು ನಿತಿಶ ಕುಮಾರ ಸರಕಾರ ನರಕ ಮಾಡಿದ್ದಾರೆ ಎಂದರು. ಇಲ್ಲಿ ಸಾಕಷ್ಟು ಅಪರಾಧಗಳು ನಡೆಯುತ್ತಿವೆ. ದಲಿತ ಹಿಂದುವಿನ ಶವದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ದರ್ಭಾಂಗಾದಲ್ಲಿ ಬೆಳಕಿಗೆ ಬಂದಿದೆ. ಪುರ್ಣಿಯಾದಲ್ಲಿ ಬಿಜೆಪಿ ಮುಖಂಡನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬೇಗುಸರಾಯ್‌ ನಲ್ಲಿ ಅಪ್ರಾಪ್ತ ದಲಿತ ಹಿಂದೂ ಹುಡುಗಿಯನ್ನು ಬೆತ್ತಲಾಗಿಸಿ ಥಳಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಷ್ಟು ಗಂಭೀರ ಆರೋಪವಿರುವಾಗ ಬಿಹಾರದ ಪೊಲೀಸರು ಆರೋಪಿಯನ್ನು ಹೇಗೆ ಬಿಟ್ಟರು ? ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !