ಘಟನೆಯ ವಿಡಿಯೋ ವೈರಲ್ ಆದ ಬಳಿಕ ಹಾಸ್ಟೆಲ್ ಅಧಿಕಾರಿಯಿಂದ ತನಿಖೆಗೆ ಆದೇಶ !
ಅಲಿಗಢ (ಉತ್ತರ ಪ್ರದೇಶ) – ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎ.ಎಂ.ಯು.’ ನ) ‘ಸುಲೇಮಾನ್’ ಹಾಸ್ಟೆಲ್‌ನಲ್ಲಿ ಒಬ್ಬ ಹಿಂದೂ ಯುವಕನನ್ನು ಥಳಿಸಿದ ವಿಡಿಯೋ ಬೆಳಕಿಗೆ ಬಂದಿದೆ. ಈ ಘಟನೆ ಒಂದು ತಿಂಗಳ ಹಿಂದೆ ನಡೆದಿದ್ದು, ವಿಡಿಯೋದಲ್ಲಿ ಮೂವರು ಕಾಣಿಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನ ಹೆಸರು ಆಕಾಶ ಆಗಿದ್ದು, ಆತನಿಗೆ ಬೆಲ್ಟ್ ನಿಂದ ಹೊಡೆಯುವುದು ಮತ್ತು ಒದೆಯುವುದು, ಕೈಯಿಂದ ಹೊಡೆಯುತ್ತಿರುವುದು ಕಾಣಿಸುತ್ತಿದೆ. ಆ ಯುವಕ ಜೈದ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ವೀಡಿಯೊದಲ್ಲಿ ಕಂಡುಬರುವ ಮೂರನೇ ಯುವಕ ಎ.ಎಂ.ಯು. ನ ವಿದ್ಯಾರ್ಥಿ ನಾಯಕ ಫರ್ಹಾನ್ ಜುಬೇರಿ ಆಗಿದ್ದು, ಸಂತ್ರಸ್ತ ಮತ್ತು ಆರೋಪಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲ ಎಂದು ಹೇಳಲಾಗುತ್ತಿದೆ. ವೀಡಿಯೋದಲ್ಲಿ ಆಕಾಶ ಕೈಮುಗಿದು ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಹಾಗೆಯೇ ಆ ಯುವಕನನ್ನು ಮೊಹಮ್ಮದ್ ಚಪ್ಪಲಿಯ ಮೇಲೆ ಮೂಗ ಉಜ್ಜುವಂತೆಯೂ ಮಾಡಿರುವುದನ್ನು ಕಾಣಿಸುತ್ತಿದೆ.
AMU के हॉस्टल में हिंदू युवक की बेल्ट से पिटाई, नाक रगड़वाई | Si News@myogioffice @BJP4UP @INCUttarPradesh @Uppolice @UPGovt
Courtesy – https://t.co/BK4Zqng6sZ / deepaksharmazad#HinduYouth #Hostel #AligarhMuslimUniversity #UttarPradesh #AMU #Hindu #sinews pic.twitter.com/4l2e4G29bB— Since Independence (@Sinceindmedia) July 27, 2023
ಘಟನೆಯ ಬಗ್ಗೆ ಮಾತನಾಡಿದ ಫರ್ಹಾನ್ ಜುಬೇರಿಯು, ಥಳಿಸಿರುವ ಘಟನೆ ತಿಳಿದಾಗ ಹಾಸ್ಟೆಲ್‌ಗೆ ಆಗಮಿಸಿ ಜೈದ್ ಮೊಹಮ್ಮದ್‌ನಿಂದ ಆಕಾಶ್‌ನನ್ನು ರಕ್ಷಿಸಿ ಹೊರಗೆ ಕರೆತಂದಿದ್ದೇನ ಎಂದು ಹೇಳಿದ್ದಾನೆ. ಹಳೇ ವಿಚಾರಕ್ಕೆ ಕೋಪಗೊಂಡು ಆಕಾಶ್ ನನ್ನು ಮಹಮ್ಮದ್ ಥಳಿಸಿದ್ದ ಎನ್ನಲಾಗಿದೆ. ಸಂತ್ರಸ್ತ ಆಕಾಶ್ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಥಳಿಸಿದ ಘಟನೆಯ ನಂತರ ಆಕಾಶ ನಗರದಿಂದ ನಾಪತ್ತೆಯಾಗಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ಹಾಸ್ಟೆಲ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು ! |