ಭಾರತವು ತನ್ನ ಗೌರವಕ್ಕಾಗಿ ನಿಯಂತ್ರಣ ರೇಖೆಯನ್ನು ಸಹ ದಾಟಬಹುದು ! – ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಜಮ್ಮು\ಲೆಹ್‌ – ಭಾರತವು ತನ್ನ ಗೌರವಕ್ಕಾಗಿ ಗಡಿ ರೇಖೆಯನ್ನು ದಾಟಬಹುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇವರು ಕಾರ್ಗಿಲ್‌ ನಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾರ್ಗಿಲ್‌ ವಿಜಯ ದಿವಸದ ನಿಮಿತ್ತ ಜುಲೈ ೨೬ ರಂದು ಲಡಾಕ್‌ ನ ಡ್ರಾಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ೧೯೯೯ ರ ಈ ದಿನದಂದು, ಭಾರತವು ಕಾರ್ಗಿಲ್‌ ಯುದ್ಧವನ್ನು ವಿಶ್ವದ ಅತ್ಯಂತ ಕಠಿಣ ಯುದ್ಧ ಭೂಮಿಗಳಲ್ಲಿ ಒಂದಾದ ದ್ರಾಸ್‌ ನಿಂದ ಪಾಕಿಸ್ತಾನವನ್ನು ಓಡಿಸುವ ಮೂಲಕ ಗೆದ್ದಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವರು ಯುದ್ಧದಲ್ಲಿ ದೇಶಕ್ಕಾಗಿ ವೀರಮರಣವನ್ನು ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಮತ್ತು ಏರ್‌ ಚೀಫ್‌ ಮಾರ್ಷಲ್‌ ವಿ. ಆರ್.‌ ಚೌಧರಿ ಅವರು ದ್ರಾಸ್ ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಇವರು ಸೈನಿಕರನ್ನು ಬೆಂಬಲಿಸುವಂತೆ ನಾಗರಿಕರು ದೃಢವಾಗಿರಲು ಮನವಿ ಮಾಡಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಚೀನಾದ ಭಾರತ ವಿರೋಧಿ ಕಾರ್ಯಾಚರಣೆಗಳನ್ನು ನೋಡಿದರೆ, ಸೈನಿಕರು ಗಡಿ ರೇಖೆಯನ್ನು ದಾಟಲು ಇದೇ ಸರಿಯಾದ ಸಮಯವಾಗಿದೆ ಎಂದು ಭಾರತೀಯರಿಗೆ ಅನಿಸುತ್ತದೆ !