‘ಮಣಿಪುರದಲ್ಲಿನ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವ ಭಾರತ ಸರಕಾರದ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೆಯಂತೆ ! – ಅಮೇರಿಕಾ

ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸುವ ಅಮೆರಿಕಾದ ಕಪಟತನ !

ನವ ದೆಹಲಿ – ಮಣಿಪುರದಲ್ಲಿನ ೨ ಮಹಿಳೆಯರನ್ನು ಬೆತ್ತಲೆಗೊಳಿಸಿ ಅವರ ಮೆರವಣಿಗೆ ನಡೆಸಿದ ಪ್ರಕರಣದಲ್ಲಿ ಅಮೆರಿಕಾ ಮತ್ತೊಮ್ಮೆ ಹೇಳಿಕೆ ನೀಡಿದೆ. ಅಮೇರಿಕಾ ಸರಕಾರದ ವಕ್ತಾರರು ವೇದಾಂತ ಪಟೇಲ ಇವರು ಮಣಿಪುರದ ಸಂದರ್ಭದಲ್ಲಿ ಅಮೆರಿಕಾದ ಪಾತ್ರ ಮಂಡಿಸುತ್ತಾ, ಮಣಿಪುರದಲ್ಲಿನ ಇಬ್ಬರು ಮಹಿಳೆಯರ ಮೇಲೆ ನಡೆದಿರುವ ದಾಳಿಯ ವಿಡಿಯೋ ನೋಡಿ ನಮಗೆ ಆಘಾತವಾಗಿದೆ ಮತ್ತು ನಾವು ಹೆದರಿದ್ದೇವೆ. ಲಿಂಗ ಭೇದದ ಆಧಾರವಾಗಿ ಈ ಹಿಂಸಾಚಾರದಲ್ಲಿನ ಸಂತ್ರಸ್ತ ಮಹಿಳೆಯರ ಕುರಿತು ನಾವು ಸಂವೇದನೆ ವ್ಯಕ್ತಪಡಿಸುತ್ತೇವೆ. ಹಾಗೂ ಈ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವ ಭಾರತ ಸರಕಾರದ ಪ್ರಯತ್ನಕ್ಕೆ ನಾವು ಬೆಂಬಲಿಸುತ್ತೇನೆ ಎಂದು ಹೇಳಿದರು.

ಪಟೇಲ ಮಾತು ಮುಂದುವರಿಸುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸ್ವತಃ ಮಹಿಳೆಯರ ಮೇಲಿನ ಈ ದಾಳಿ ಸಭ್ಯ ಸಮಾಜಕ್ಕೆ ನಾಚಿಗೇಡು, ಎಂದು ಹೇಳಿದ್ದಾರೆ. ಈ ಹಿಂಸಾಚಾರದಲ್ಲಿ ಶಾಂತಿಯುತವಾಗಿ ಮತ್ತು ಸರ್ವ ಸಮಾವೇಶಕ ಉಪಾಯೋಜನೆ ಮಾಡಲು ನಾವು ಪ್ರೋತ್ಸಾಹ ನೀಡುತ್ತೇವೆ. ಎಲ್ಲಾ ಜನಾಂಗದಲ್ಲಿನ ನಾಗರೀಕರ ಜೀವ ಕಾಪಾಡುವುದು ಮತ್ತು ಅವರ ಸಂಪತ್ತಿಯ ರಕ್ಷಣೆ ಮಾಡುವುದು ಮತ್ತು ಅವರ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುವದಕ್ಕಾಗಿ ನಾವು ಸರಕಾರಕ್ಕೆ ಪ್ರೋತ್ಸಾಹ ನೀಡುತ್ತೇವೆ, ಎಂದು ಸಹ ಪಟೇಲ ಇವರು ಹೇಳಿದರು. ಅಮೇರಿಕಾ ಸರಕಾರದ ಪತ್ರಿಕಾಗೋಷ್ಠಿಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಪಾಕಿಸ್ತಾನಿ ಪತ್ರಕರ್ತನು ಕೇಳಿದ ಪ್ರಶ್ನೆಗೆ ಪಟೇಲ ಇವರು ಉತ್ತರಿಸುತ್ತಿದ್ದರು.(ಪಾಕಿಸ್ತಾನಿ ಪತ್ರಕರ್ತನ ಭಾರತ ದ್ವೇಷ ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದಲ್ಲಿನ ಆಂತರಿಕ ಪ್ರಶ್ನೆಗಳ ಬಗ್ಗೆ ಅನಕೂಲಕರ ನಿಲುವು ತಾಳುವ ಅಮೇರಿಕಾ ಲವ್ ಜಿಹಾದ್ ನಿಂದಾಗಿ ಭಾರತದಲ್ಲಿನ ಲಕ್ಷಾಂತರ ಹಿಂದೂ ಹುಡುಗಿಯರ ಜೀವನ ನಾಶವಾಗಿದೆ ಅದರ ಬಗ್ಗೆ ಒಂದು ಅಕ್ಷರ ಕೂಡ ಮಾತನಾಡುವುದಿಲ್ಲ ಇದನ್ನು ತಿಳಿಯಿರಿ !

ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಅಸಂಖ್ಯಾ ಹಿಂದೂ ಮಹಿಳೆಯರ ಮೇಲೆ ನಿರಂತರ ನಡೆಯುವ ದೌರ್ಜನ್ಯದ ಬಗ್ಗೆ ಅಮೇರಿಕಾಗೆ ಎಂದೂ ಕಳವಳ ವ್ಯಕ್ತವಾಗುವುದಿಲ್ಲ ?